ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಅವರ ಪತ್ನಿ ಹಿಮಾನಿ ಮೋರ್ ಅವರನ್ನು ಭೇಟಿಯಾದರು.

ನೀರಜ್ ಚೋಪ್ರಾ ಅವರು, ಈ ವರ್ಷದ ಆರಂಭದಲ್ಲಿ ಮಾಜಿ ಟೆನಿಸ್ ಆಟಗಾರ್ತಿ ಮೋರ್ ಅವರನ್ನು ವಿವಾಹವಾಗಿದ್ದು, ಬಳಿಕ ಅವರು ಜಾವೆಲಿನ್ ಕ್ರೀಡೆಯಿಂದ ವಿರಾಮ ತೆಗೆದುಕೊಂಡಿದ್ದಾರೆ.

‘ನೀರಜ್ ಚೋಪ್ರಾ ಮತ್ತು ಅವರ ಪತ್ನಿ ಹಿಮಾನಿ ಮೋರ್ ಅವರನ್ನು ಇಂದು ಬೆಳಿಗ್ಗೆ 7 ಗಂಟೆಗೆ ಲೋಕ ಕಲ್ಯಾಣ್ ಮಾರ್ಗ್ನಲ್ಲಿರುವ ನಿವಾಸದಲ್ಲಿ ಭೇಟಿ ಮಾಡಿದೆ. ಕ್ರೀಡೆ ಸೇರಿದಂತೆ ವಿವಿಧ ವಿಷಯಗಳ ಕುರಿತು ನಾವು ಸಂವಾದ ನಡೆಸಿದೆವು’ ಎಂದು ಪ್ರಧಾನಿ ಮೋದಿಯವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
.ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಇನ್ನು ಲೆಫ್ಟಿನೆಂಟ್ ಕರ್ನಲ್!.ಜಾವೆಲಿನ್| ಈ ರೀತಿ ಕೊನೆಗೊಳಿಸಲು ಬಯಸಿರಲಿಲ್ಲ, ಕಮ್ಬ್ಯಾಕ್ ಮಾಡ್ತೀನಿ ಎಂದ ನೀರಜ್.
ನಿರೀಜ್ ಚೋಪ್ರಾ ಅವರು, ಈ ವರ್ಷದ ಆರಂಭದಲ್ಲಿ ಮಾಜಿ ಜಾವೆಲಿನ್ ಎಸೆತಗಾರ, ಸೂಪರ್ಸ್ಟಾರ್ ಜಾನ್ ಝೆಲೆಜ್ನಿ ಅವರನ್ನು ತಮ್ಮ ನೂತನ ಕೋಚ್ ಆಗಿ ನೇಮಿಸಿಕೊಂಡಿದ್ದಾರೆ. ಝೆಲೆಜ್ನಿ ಅವರು ಒಲಿಂಪಿಕ್ನಲ್ಲಿ 3 ಚಿನ್ನದ ಪದಕ ಮತ್ತು 98.48 ಮೀಟರ್ ಜಾವೆಲಿನ್ ಎಸೆದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.