ಶನಿವಾರ, ಜೂನ್ 12, 2021
23 °C
ಹೊಳಲ್ಕೆರೆ: ಬಂಪರ್ ಬೆಳೆ ತೆಗೆದ ಈಚಘಟ್ಟದ ರೈತ

ಕರಬೂಜ ಬೆಳೆದ ರೈತನ ಬದುಕು ಸಿಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಬೇಸಿಗೆಯಲ್ಲಿ ಭಾರಿ ಬೇಡಿಕೆ ಇರುವ ಕರಬೂಜ ಹಣ್ಣನ್ನು ಬೆಳೆಯುವ ಮೂಲಕ ತಾಲ್ಲೂಕಿನ ಈಚಘಟ್ಟದ ಯುವ ರೈತ ಯು.ಎಸ್.ತಿಪ್ಪೇಸ್ವಾಮಿ ಅಧಿಕ ಲಾಭ ಗಳಿಸಿದ್ದಾರೆ.5.5 ಎಕರೆ ಜಮೀನಿನಲ್ಲಿ ಮಧುರಾ, ಕೊುನೂರ್, ಸುವರ್ಣಕನ್ನೆ, ಸನ್- (2) ತಳಿಯ ಕರಬೂಜ ಬೆಳೆದಿದ್ದು, ಬಂಪರ್ ಬೆಳೆ ಬಂದಿದೆ. ಮಧುರಾ ತಳಿ ಹಸಿರು ಬಣ್ಣದ ಹಣ್ಣುಗಳನ್ನು ಬಿಟ್ಟರೆ, ಉಳಿದವು ಹಳದಿ ಹಣ್ಣುಗಳನ್ನು ಬಿಡುತ್ತವೆ.ಹೊಲವನ್ನು ಹದಗೊಳಿಸಿದ ಮೇಲೆ 66 ಅಡಿ ಅಳತೆಯಲ್ಲಿ 2 ಅಡಿ ಅಗಲ, 1 ಅಡಿ ಎತ್ತರಕ್ಕೆ ಬದು ನಿರ್ಮಿಸಬೇಕು. ಬದು ಮೇಲೆ (ಮಲ್ಚಿಂಗ್) ಶೀಟ್ ಹಾಕಿ 1.5 ಅಡಿ ಅಂತರದಲ್ಲಿ ರಂಧ್ರಗಳನ್ನು ಮಾಡಬೇಕು. ಪ್ರತೀ ರಂದ್ರಕ್ಕೆ ಒಂದೊಂದು ಬೀಜ ಹಾಕಿ ಡ್ರಿಪ್ ಮೂಲಕ ನೀರು ಹಾಯಿಸಬೇಕು. (ಮಲ್ಚಿಂಗ್) ಹಾಕುವುದರಿಂದ ನೀರು ಕಡಿಮೆ ಬಳಕೆಯಾಗುವುದಲ್ಲದೆ, ತೇವಾಂಶ ಆರುವುದಿಲ್ಲ. ಗೊಬ್ಬರದ ಅಂಶವೂ ಆವಿಯಾಗದೆ, ಹಣ್ಣು ಹೆಚ್ಚು ದಪ್ಪವಾಗುತ್ತವೆ. ಹಣ್ಣುಗಳು ಮಲ್ಚಿಂಗ್ ಪೇಪರ್ ಮೇಲೆ ಕೂರುವುದರಿಂದ ಕೊಳೆಯುವುದಿಲ್ಲ. 5.5 ಎಕರೆಗೆ 2 ಕೆಜಿ ಬೀಜ ಬಿತ್ತನೆ ಮಾಡಿದ್ದು, ಪ್ರತೀ ಕೆಜಿ ಬೀಜಕ್ಕೆ ₨ 48 ರಿಂದ ₨ 58 ಸಾವಿರ ಬೆಲೆ ಇದೆ. ಬೀಜ, ಗೊಬ್ಬರ, ಔಷಧಿ, ಡ್ರಿಪ್, ಮಲ್ಚಿಂಗ್, ಕೂಲಿ ಸೇರಿ ಸುಮಾರು ₨ 5 ಲಕ್ಷ ಖರ್ಚು ಮಾಡಿದ್ದೇನೆ. ಇಳುವರಿ ಉತ್ತಮವಾಗಿ ಬಂದಿದ್ದು 60ರಿಂದ 70 ಟನ್ ಹಣ್ಣು ಸಿಗುತ್ತದೆ ಎನ್ನುತ್ತಾರೆ ತಿಪ್ಪೇಸ್ವಾಮಿ.ಉತ್ತಮ ಮಾರುಕಟ್ಟೆ: ಕರಬೂಜಕ್ಕೆ ಬೇಸಿಗೆಯಲ್ಲಿ ಉತ್ತಮ ಬೆಲೆ ಇದ್ದು, ದೆಹಲಿ, ಮುಂಬೈ ಮಾರುಕಟ್ಟೆಯಲ್ಲಿ ಪ್ರತೀ ಟನ್‌ಗೆ ₨ 40 ಸಾವಿರ ಸಿಗುತ್ತದೆ. ಉತ್ತರ ಭಾರತದಲ್ಲಿ ಮದುವೆ ಸಮಾರಂಭಗಳಲ್ಲಿ ಫಲದಾನವಾಗಿ ಕರಬೂಜ ಕೊಡುವ ರೂಢಿ ಇದೆ. ಆ ಕಡೆ ಬಿಸಿಲು ಹೆಚ್ಚಿರುವುದರಿಂದ ಕರಬೂಜ ಹಣ್ಣಿನ ಜ್ಯೂಸ್‌ಗೆ ಹೆಚ್ಚು ಬೇಡಿಕೆ ಇದೆ. ಹಣ್ಣುಗಳು 2ರಿಂದ 3 ಕೆಜಿವರೆಗೆ ಬಂದಿದ್ದು, ಸುಮಾರು 60ರಿಂದ 70 ಟನ್ ಸಿಗಲಿದೆ. ಸುಮಾರು ₨ 20ರಿಂದ 25 ಲಕ್ಷ ಲಾಭದ ನಿರೀಕ್ಷೆ ಇದೆ. ಕೇವಲ 65 ದಿನಗಳಲ್ಲಿ ಬೆಳೆ ಬರಲಿದ್ದು, ಇತರೆ ಬೆಳೆಗಳಿಗೆ ಹೋಲಿಸಿದರೆ ಇದು ಹೆಚ್ಚು ಲಾಭದಾಯಕ ಬೆಳೆ ಎನ್ನುತ್ತಾರೆ ಅವರು.‘ಈಗ ನಾನು ಬೆಳೆಯುತ್ತಿರುವ ಕರಬೂಜ 5ನೇ ಬೆಳೆ. ಪದವೀಧರನಾದ ನಾನು ಕೃಯಲ್ಲಿ ಆಸಕ್ತಿ ಬೆಳೆಸಿಕೊಂಡು ಶ್ರದ್ಧೆಯಿಂದ ಬೆಳೆಯುತ್ತಿದ್ದೇನೆ. ಮೊದಲು ಬೀಜ ಕಂಪೆನಿಯವರ ಮಾರ್ಗದರ್ಶನದಲ್ಲಿ ಬೆಳೆ ಬೆಳೆಯುತ್ತಿದ್ದೆ. ಈಗ ನನ್ನ ಅನುಭವದಲ್ಲೇ ಬೆಳೆಯುತ್ತಿದ್ದು, ಉತ್ತಮ ಇಳುವರಿ ಪಡೆಯುತ್ತಿದ್ದೇನೆ. ರೋಗ ನಿಯಂತ್ರಣಕ್ಕಾಗಿ ಸಮಯಕ್ಕೆ ಸರಿಯಾಗಿ ಔಷಧಿ ಸಿಂಪಡಣೆ, ಸಕಾಲದಲ್ಲಿ ಗೊಬ್ಬರ, ನೀರು ಕೊಡುವ ಮೂಲಕ ಹೆಚ್ಚು ಇಳುವರಿ ಪಡೆಯಲು ಸಾಧ್ಯ ಎಂಬುದು ತಿಪ್ಪೇಸ್ವಾಮಿ ಅವರ ಸಲಹೆ.ರೈತ ಯು.ಎಸ್.ತಿಪ್ಪೇಸ್ವಾಮಿ ಅವರ ಸಂಪರ್ಕಕ್ಕೆ ಮೊಬೈಲ್: 90084 23031 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.