ಮಂಗಳವಾರ, ಜೂನ್ 15, 2021
23 °C

ಕರಿ ಕೆಸು

ಸಹನಾ ಕಾಂತಬೈಲು Updated:

ಅಕ್ಷರ ಗಾತ್ರ : | |

ಇದು ಕರಿ ಕೆಸು. ಕಪ್ಪು ಬಣ್ಣ  ಹೊಂದಿರುವುದರಿಂದ ಅದಕ್ಕೆ ಈ ಹೆಸರು. ಸಾಮಾನ್ಯ ಕೆಸುವಿಗಿಂತ ವಿಶೇಷ ಗುಣ ಪಡೆದಿದೆ. ಇದು ಮಲೆನಾಡು ಮತ್ತು  ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕೊಡಗಿನಲ್ಲಿ ಇದನ್ನು ಪಚ್ಚಂಡಿ ಕೆಸು ಎಂದು ಕರೆಯುತ್ತಾರೆ. ಅಲ್ಲಿ ಇದರ  ದಂಟನ್ನು  ಸ್ವಲ್ಪ ತೆಂಗಿನ ತುರಿಯೊಂದಿಗೆ  ಹಸಿಯಾಗಿಯೇ ರುಬ್ಬಿ ಚಟ್ನಿ (ಪಚ್ಚಂಡಿ) ತಯಾರಿಸಿ  ಸೇವಿಸುತ್ತಾರೆ.ಈ ಕೆಸು ಸೇವಿಸಿದರೆ ಇತರೆಲ್ಲ ಕೆಸು ಜಾತಿಯ ಹಾಗೆ ಗಂಟಲ ತುರಿಕೆ ಇಲ್ಲ. ವರ್ಷದ ಎಲ್ಲಾ ಕಾಲದಲ್ಲಿಯೂ ಉಪಯೋಗಿಸಬಹುದು. ಇದರ ಎಲೆ, ದಂಟು, ಗೆಡ್ಡೆ ಎಲ್ಲವನ್ನೂ ಅಡುಗೆಗೆ ಬಳಸಬಹುದು. ಇದು ಇದರ ವಿಶೇಷತೆ. ಎಲೆಯಿಂದ ಪಲ್ಯ, ಚಟ್ನಿ, ರೊಟ್ಟಿ, ಪತ್ರೊಡೆ, ಸಾಂಬಾರ್ ಮಾಡಬಹುದು. ಗೆಡ್ಡೆಯನ್ನು ಆಲೂಗೆಡ್ಡೆಗೆ ಪರ್ಯಾಯವಾಗಿ ಬಳಸಬಹುದು.ಕರಿ ಕೆಸುವನ್ನು ಮನೆಯ  ಹಿತ್ತಲಲ್ಲಿ, ತೆಂಗಿನ ಮರದ ಬುಡದಲ್ಲಿ  ಸುಲಭವಾಗಿ ಬೆಳೆಸಬಹುದು. ಎಂಟು ತಿಂಗಳಲ್ಲಿ ಕೈ ಸೇರುವ ಬೆಳೆಯಿದು. ಕೆಸುವಿನ ಕೃಷಿಗೆ ರೋಗ- ಕೀಟಗಳ ಬಾಧೆ ಇಲ್ಲ. ಗೆಡ್ಡೆಯಲ್ಲಿರುವ ಮೊಳಕೆಯ ಭಾಗವನ್ನು ಕತ್ತರಿಸಿ ಬೀಜವನ್ನಾಗಿ ಬಳಸುತ್ತಾರೆ.ಮೂರು ಅಡಿ ಅಂತರದಲ್ಲಿ ಒಂದೂವರೆ ಅಡಿ ಆಳ ಮತ್ತು ಅಗಲವಿರುವ ಸಾಲುಗಳನ್ನು ಮಾಡಿ ಕಸಕಡ್ಡಿ ಹಾಕಿ ಸಾಲುಗಳನ್ನು ಸುಡಬೇಕು. ಹಟ್ಟಿ ಗೊಬ್ಬರದ ಹುಡಿಯನ್ನು ಸಾಲುಗಳಲ್ಲಿ ತುಂಬಿಸಿ ಬೀಜವನ್ನು ನಾಟಿ ಮಾಡಬೇಕು.

 

ಚಿಗುರೆಲೆ ಬರುವಾಗ ಗೊಬ್ಬರ ನೀಡಿ ಮಣ್ಣನ್ನು ಏರು ಹಾಕುವುದು ರೂಡಿ. ವಾರಕ್ಕೊಮ್ಮೆ ನೀರು ಪೂರೈಸಿದರೆ ಸಾಕು.ಬಹಳ ಪೌಷ್ಟಿಕಾಂಶ ಹೊಂದಿದ ಕರಿಕೆಸುವನ್ನು ಗೃಹಿಣಿಯರು ತಮ್ಮ ಮನೆಯಂಗಳದಲ್ಲಿ ನೆಟ್ಟು ನಿತ್ಯ ಅಡುಗೆಗೆ ಬಳಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆಸಿ ಮಾರಾಟ ಮಾಡಲೂ ಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.