ಶನಿವಾರ, ಜೂಲೈ 11, 2020
27 °C

ಕರ್ನಲ್ ದಂಪತಿಯ ಸಂಗೀತ ಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಲ್ ದಂಪತಿಯ ಸಂಗೀತ ಯಾನ

ಗಾಯಕರಾದ ದೀಪ್ತಿ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸನ್ನ ದಂಪತಿಯಿಂದ ಅವರಿಂದ ಶನಿವಾರ ‘ಸಂಗೀತಯಾನ’ ಸಂಗೀತ ಸಂಜೆ.

ಸಂಗೀತ ದಂಪತಿ ಎಂದೇ ಹೆಸರಾದ ದೀಪ್ತಿ ಮತ್ತು ಪ್ರಸನ್ನ ವಿಶಿಷ್ಟ ಶೈಲಿಯ ಸುಗಮ ಸಂಗೀತ ಗಾಯನಕ್ಕೆ ಹೆಸರುವಾಸಿ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದಾರೆ. ಸೇನಾಧಿಕಾರಿಯಾಗಿದ್ದ ಪ್ರಸನ್ನ 20 ವರ್ಷ ದೇಶದ ನಾನಾ ಭಾಗಗಳಲ್ಲಿ ವಾಸವಿದ್ದು ಅಪಾರ ಅನುಭವ ಪಡೆದುಕೊಂಡವರು.ಕಷ್ಟಕರ ವೃತ್ತಿಯ ಜತೆ ಸಂಗೀತವನ್ನೂ ಪ್ರೀತಿಸಿದವರು. ಅದರ ಪರಿಣಾಮವಾಗಿ ಆಯಾ ಪ್ರದೇಶದ ವಿವಿಧ ರೀತಿಯ ಸಂಗೀತ ಶೈಲಿಗಳನ್ನು ಕನ್ನಡ ಸುಗಮ ಸಂಗೀತಕ್ಕೆ ಅಳವಡಿಸಿಕೊಂಡಿದ್ದಾರೆ. ಈ ದಂಪತಿ ಕನ್ನಡ ಕವಿತೆಯಷ್ಟೇ ಸೊಗಸಾಗಿ ಹಿಂದಿ ಭಜನ್, ಗಜಲ್ ಹಾಡಬಲ್ಲರು.ಸಂಗೀತ ಸಂಜೆಯಲ್ಲಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ ಕವಿತೆಗಳನ್ನು ಜಗಜಿತ್ ಸಿಂಗ್ ಅವರ ಗಜಲ್ ಶೈಲಿಯಲ್ಲಿ, ಡಾ. ಜಿಎಸ್‌ಎಸ್ ಅವರ ಕವಿತೆಗಳನ್ನು ಬಂಗಾಳಿ ರಾಗದಲ್ಲಿ ಹಾಡಲಿದ್ದಾರೆ. ಅಲ್ಲದೆ ಸಿ.ಅಶ್ವತ್ಥ್, ಶ್ರೀಕಾಂತ್ ಕುಲಕರ್ಣಿ ಅವರ ಸಂಗೀತ ಸಂಯೋಜನೆಯ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.ಅತಿಥಿಗಳು: ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಶ್ರೀಕಾಂತ ಕುಲಕರ್ಣಿ, ಡಾ. ಬಿ. ಜಯಶ್ರೀ ಅರವಿಂದ್.

ಸ್ಥಳ: ಉದಯಭಾನು ಕಲಾಸಂಘ ಭವನ, ಗವಿಪುರ ಸಾಲು  ಛತ್ರಗಳ ಎದುರು (ಬಸವನಗುಡಿ ರಾಮಕೃಷ್ಣ ಮಠದ ಹಿಂಭಾಗ). ಸಂಜೆ 5.30. ಮಾಹಿತಿಗೆ: 2660 1813

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.