ಗುರುವಾರ , ಜೂನ್ 17, 2021
29 °C
ಒಡಿಶಾ ಸಚಿವ ಮಹೇಶ್ವರ ಮೊಹಾಂತಿ ಹತ್ಯೆ ಯತ್ನ

ಕರ್ನಾಟಕ ಪೊಲೀಸರ ನೆರವಿನಿಂದ ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ: ಒಡಿಶಾದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಮಹೇ­ಶ್ವರ ಮೊಹಾಂತಿ ಅವರ ಹತ್ಯೆ ಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಆಂಧ್ರಪ್ರದೇಶ ಪೊಲೀ­ಸರ ನೆರವಿ­ನಿಂದ ನಾಲ್ವರು ಆರೋಪಿ­ಗಳನ್ನು ಪುಟ್ಟ­ಪರ್ತಿಯಲ್ಲಿ ಬಂಧಿಸಲಾಗಿದೆ.ಬಿಜೆಡಿ ಮುಖಂಡರಾದ ಮೊಹಾಂತಿ ಮೇಲೆ ದುಷ್ಕರ್ಮಿ­ಗಳು ಫೆಬ್ರುವರಿ 21ರಂದು ಪುರಿಯಲ್ಲಿ ಗುಂಡಿನ ದಾಳಿ ನಡೆಸಿ ಅವರ ಹತ್ಯೆಗೆ ಯತ್ನಿಸಿದ್ದರು. ಸದ್ಯ ಅವರು ಭುವನೇಶ್ವರದ ಖಾಸಗಿ ಆಸ್ಪತ್ರ­ಯೊಂದ­ರಲ್ಲಿ ಚಿಕಿತ್ಸೆ ಪಡೆ­ಯುತ್ತಿದ್ದಾರೆ.‘ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಐವರನ್ನು ಬಂಧಿಸಿದ್ದೇವೆ. ಇವರಲ್ಲಿ ನಾಲ್ವ­ರನ್ನು ಕರ್ನಾಟಕ, ಆಂಧ್ರ ಪೊಲೀಸರ ನೆರವಿನೊಂದಿಗೆ ಪುಟ್ಟಪರ್ತಿ­ಯಲ್ಲಿ ಬಂಧಿಸಲಾಗಿದೆ’ ಎಂದು ಪುರಿಯ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಕುಮಾರ್‌ ಸಾಹು ತಿಳಿಸಿದ್ದಾರೆ.‘ಸಚಿವರ ಮೇಲೆ ದಾಳಿ ನಡೆಸಿ ನಾಲ್ವರು ಪುಟ್ಟಪರ್ತಿಗೆ ಪರಾರಿ­ಯಾ­ಗಿ­ದ್ದರು. ಇವರಲ್ಲಿ ಇಬ್ಬರು ಬೆಂಗಳೂರಿಗೆ ಹೋಗಿದ್ದರು. ಇವರು ಬೆಂಗಳೂರಿ­ನಿಂದ ಹಿಂದಿರುಗಿದ ನಂತರ ಪುಟ್ಟಪರ್ತಿಯಲ್ಲಿ ತಂಗಿದ್ದ ರಾಜ್ಯದ ಪೊಲೀಸ್‌ ತಂಡ ನಾಲ್ವರು ಆರೋಪಿ­ಗಳನ್ನು ಬಂಧಿಸಿತು. ಆರೋಪಿಗಳ ಮೊಬೈಲ್‌ ಫೋನ್‌ಗಳ ಮೂಲಕ ನಾವು ಅವರ ಮೇಲೆ ನಿಗಾ ಇಟ್ಟಿದ್ದೆವು’ ಎಂದು ಸಾಹು ಹೇಳಿದ್ದಾರೆ.‘ಆದರೆ, ದುಷ್ಕೃತ್ಯದ ಸೂತ್ರಧಾ­ರನನ್ನು ಇನ್ನೂ ಬಂಧಿಸಲಾಗಿಲ್ಲ. ಅವನ ಗುರುತು  ಪತ್ತೆಯಾಗಿದ್ದು, ಶೀಘ್ರದಲ್ಲಿ ಆತನನ್ನೂ ಬಂಧಿಸಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.