ಸೋಮವಾರ, ಜನವರಿ 20, 2020
20 °C

ಕರ್ನಾಟಕ ರಿಲೇ ತಂಡಕ್ಕೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತ್ರಿವೇಣಿ ಹೆಗಡೆ, ಕೆ. ಸೌಮ್ಯ, ಲಲಿತಾ ಹಾಗೂ ನಾಗವೇಣಿ ಅವರನ್ನೊಳಗೊಂಡ ಕರ್ನಾಟಕ ಮಹಿಳಾ ರಿಲೇ ತಂಡ ಭೋಪಾಲ್‌ನಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ನಾಗರಿಕ ಸೇವಾ ಅಥ್ಲೆಟಿಕ್ಸ್ ಕೂಟದ 4x400ಮೀ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿತು.ಮಧ್ಯ ಪ್ರದೇಶ ಕ್ರೀಡಾ ಇಲಾಖೆ ಆಯೋಜಿಸಿದ್ದ ಈ ಕೂಟದಲ್ಲಿ ಕರ್ನಾಟಕ ರಿಲೇ ತಂಡ ನಿಗದಿತ ಅಂತರವನ್ನು 5:17.3ಸೆಕೆಂಡ್‌ಗಳಲ್ಲಿ ತಲುಪಿ ಚಿನ್ನ ತನ್ನದಾಗಿಸಿಕೊಂಡಿತು.ಕರ್ನಾಟಕದ ಸ್ಪರ್ಧಿಗಳಾದ ತ್ರಿವೇಣಿ 100ಮೀ ಓಟದಲ್ಲಿ (14.3ಸೆ; ಕಂಚು), 400ಮೀ ಹಾಗೂ 800ಮೀ ಓಟದಲ್ಲಿ ಸೌಮ್ಯ (ಕ್ರಮವಾಗಿ 1:09.8ಸೆ, ಬೆಳ್ಳಿ ಹಾಗೂ 2:47.6ಸೆ, ಕಂಚು), ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕೆ. ಸರಸ್ವತಿ (22.90ಮೀ, ಬೆಳ್ಳಿ) ಜಯಿಸಿದರು.ಪುರುಷರ ವಿಭಾಗದ ಸ್ಪರ್ಧೆಗಳಲ್ಲಿ ಕರ್ನಾಟಕದ ಮಣಿಕಂಠ 5000 ಹಾಗೂ 10000ಮೀ ಓಟದಲ್ಲಿ (ಕ್ರಮವಾಗಿ 17:11.3ಸೆ ಮತ್ತು 36:25.1ಸೆ. ಎರಡೂ ಬೆಳ್ಳಿ), ಆರ್. ಮುಖೇಶ್ ಬಾಬು 110ಮೀ ಹರ್ಡಲ್ಸ್‌ನಲ್ಲಿ (20.6ಸೆ, ಕಂಚು) ಮತ್ತು ಡಿ. ಹಜರತ್ ಅಲಿ ಪೋಲ್‌ವಾಲ್ಟ್‌ನಲ್ಲಿ (2.75ಮೀ, ಕಂಚು) ಗೆದ್ದುಕೊಂಡಿದ್ದಾರೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ. ಈ ಕೂಟದಲ್ಲಿ ಕರ್ನಾಟಕಕ್ಕೆ ಒಟ್ಟು ಒಂದು ಚಿನ್ನ, 4 ಬೆಳ್ಳಿ ಹಾಗೂ ಕಂಚು ಲಭಿಸಿವೆ.

ಪ್ರತಿಕ್ರಿಯಿಸಿ (+)