ಶನಿವಾರ, ಏಪ್ರಿಲ್ 17, 2021
30 °C

ಕಲಬೆರಕೆಗೆ ಮಾದರಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಐಎಎನ್‌ಎಸ್): ಆಹಾರ ಕಲಬೆರಕೆ ಪ್ರಕರಣದ ವಿಚಾರಣೆ ನಡೆಸಿದ ರಾಜಾಸ್ತಾನ ನ್ಯಾಯಾಲಯವು ಇಲ್ಲಿನ  ಕಿರಾಣಿ ಅಂಗಡಿ ಮತ್ತು ಸಿಹಿ ತಿನಿಸು ಮಾರಾಟ ಮಳಿಗೆಗೆ `ನಾವು ಕಲಬೆರಕೆದಾರರು~ ಎಂದು ಫಲಕ ಹಾಕಬೇಕು ಎಂದು ಮಾದರಿ ಶಿಕ್ಷೆಯೊಂದನ್ನು ವಿಧಿಸಿದೆ.ಈ ಎರಡು ಕಲಬೆರಕೆ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ರೂ 1.10 ಲಕ್ಷ ದಂಡ ವಿಧಿಸಿದ್ದಲ್ಲದೆ, ಗ್ರಾಹಕರಿಗೆ ಕಾಣಿಸುವಂತೆ ಅಂಗಡಿಯ ಮುಂದೆ `ನಾವು ಕಲಬೆರಕೆದಾರರು~ ಎಂಬ ಫಲಕಹಾಕಿಕೊಳ್ಳಬೇಕು ಎಂದು ಮಹತ್ವದ ತೀರ್ಪು ನೀಡಿದೆ. ಈ ರೀತಿ ಫಲಕ ಹಾಕುವುದರಿಂದ ಗ್ರಾಹಕರಿಗೆ ಅಂಗಡಿಯ ಬಗ್ಗೆ ಮಾಹಿತಿ ದೊರೆತು ಅವರಲ್ಲಿ ಜಾಗೃತಿ ಮೂಡುತ್ತದೆ.ಇದು ಕಲಬೆರಕೆ ಮಾಡುವವರಿಗೆ ಒಂದು ಪಾಠವಾಗಲಿದೆ ಎಂದು ಹೇಳಲಾಗಿದೆ. ಕಲಬೆರಕೆ ನಡೆಯುತ್ತಿದೆ ಎಂಬ ಆರೋಪ ಬಂದ ಮೇಲೆ ಆಹಾರ ಭದ್ರತಾ ಇಲಾಖೆ ಈ ಅಂಗಡಿಗಳಿಂದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.