ಸೋಮವಾರ, ಮೇ 23, 2022
24 °C

ಕಲಾವಿದರಿಗೆ ಅನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಲಲಿತಕಲಾ ಅಕಾಡೆಮಿಗೆ  ಸರ್ಕಾರ 10 ಜನ ಸದಸ್ಯರನ್ನು  ನೇಮಿಸಿದೆ. ರಾಜ್ಯದಲ್ಲಿ 30 ಜಿಲ್ಲೆಗಳಿದ್ದು ಸದಸ್ಯರು ಮಾತ್ರ 10 ಜನ. (ಇವರಲ್ಲಿ 3-4 ಜನ ಮಾತ್ರ ನಿಜವಾದ ಕಲಾವಿದರು ಇವತ್ತಿಗೂ ಕಲಾಕೃತಿಗಳನ್ನು ರಚಿಸುವಂತಹವರು) ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ  ಹಲವಾರು ವರ್ಷಗಳಿಂದ ನೆಲೆನಿಂತ ಕಲಾವಿದರೇ ಐವರಿದ್ದಾರೆ.

 

ಸದಸ್ಯರು ಅವರ ಸ್ವಂತ ಜಿಲ್ಲೆಯಲ್ಲಿ ಜನಿಸಿದ್ದು ಬಿಟ್ಟರೆ ಅವರಿಗೆ ಊರಿನ ಜತೆ ಸಂಬಂಧ ಇಲ್ಲ, ಅಲ್ಲಿನ ಕಲಾವಿದರ ಜತೆ ಸಂಪರ್ಕ ಇಲ್ಲ ಹಾಗೂ ಅಲ್ಲಿನ ಕಲಾಚಟುವಟಿಕೆಗಳಲ್ಲಿ  ಪಾಲ್ಗೊಳ್ಳುವಿಕೆ ಇಲ್ಲ.ಅಲ್ಲದೆ       ಕಳೆದಬಾರಿ ಇದ್ದ ಸದಸ್ಯರನ್ನೇ ಈ ಬಾರಿಯೂ ಸರಕಾರ ಆಯ್ಕೆಮಾಡಿರುವುದರ ಉದ್ದೇಶ ಅರ್ಥವಾಗುತ್ತಿಲ್ಲ. ಸದಸ್ಯರ ಆಯ್ಕೆಗೆ ಯಾವ ಮಾನದಂಡವಿದೆ? 

                                  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.