ಭಾನುವಾರ, ಜೂನ್ 20, 2021
29 °C

ಕಲಿಕಾ ಶೈಲಿಯಲ್ಲಿ ಹೊಸತನ ಅಗತ್ಯ: ಗೌಡರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಕಾಲಕ್ಕೆ ತಕ್ಕಂತೆ ಕಲಿಕೆಯಲ್ಲಿ ಬದಲಾವಣೆ ಅಗತ್ಯವಿದ್ದು, ವಿದ್ಯಾರ್ಥಿ ಗಳನ್ನು ಕಲಿಕೆಯತ್ತ ಆಕರ್ಷಿಸಲು ಹಾಗೂ ಪ್ರೇರೇಪಿಸಲು ಉಪನ್ಯಾಸಕರು ಕಲಿಕಾ ಶೈಲಿಯಲ್ಲಿ ಹೊಸತನ ಅಳವಡಿಸಿಕೊಳ್ಳಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇ ಶಕ ಬಿ.ಎಸ್. ಗೌಡರ ಅಭಿಪ್ರಾಯ ಪಟ್ಟರು.ನಗರದ ಮೈಲಾರಪ್ಪ ಮೆಣಸಗಿ ಪದವಿ ಪೂರ್ವ ಕಾಲೇಜಿನಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ  ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ವಿಷಯಾಧಾರಿತ ತರಬೇತಿ ಸಮಾರಂಭ  ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ನಾವು ಏನನ್ನು ಕಲಿಸಬೇಕು ಎಂಬುದಕ್ಕಿಂತ ಹೇಗೆ ಕಲಿಸಬೇಕು ಅನ್ನೋದು ಮುಖ್ಯ. ಕಲಿಕೆ ಅಂದ್ರೆ ಭಾಷಣ ಅಲ್ಲ, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ವಿಷಯ ಕುರಿತು ಚರ್ಚೆಯಲ್ಲಿ ತಲ್ಲೀನ ರಾಗುವಂತೆ ಮಾಡುವುದೇ ಕಲಿಕೆ ಎಂದರು.ವಿದ್ಯಾರ್ಥಿಗಳೇ ಶಿಕ್ಷಕರ ಜೀವಂತ ಆಸ್ತಿ. ವಿದ್ಯಾರ್ಥಿಗಳಿಂದಲೇ ಉಪನ್ಯಾ ಸಕರಾಗಲು ಸಾಧ್ಯ. ಅವರೇ ನಮ್ಮ  ನಿಜವಾದ ನಿರ್ಣಾಯಕರು. ಸಮಯ ಪ್ರಜ್ಞೆ ಹಾಗೂ ಪಾಠದ ಬಗ್ಗೆ ಪೂರ್ವ ಸಿದ್ಧತೆ ಉಪನ್ಯಾಸಕರಿಗೆ ಅತ್ಯಗತ್ಯ. ಪಾಠಕ್ಕೆ ಜೀವ ತುಂಬುವ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ  ಕೆರಳಿಸಬೇಕು ಎಂದು ಸಲಹೆ ನೀಡಿದರು.ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಿ.ವಿ ಗರಡಿಮನಿ ಮಾತನಾಡಿ, ಇಂದಿನ ಪೀಳಿಗೆ ಹೊಸತನವನ್ನು ಬಯಸುವು ದರಿಂದ ಪರಿಣಾಮಕಾರಿ ಭೋದನೆ ಅಗತ್ಯವಿದೆ ಎಂದರು.ಎಂ.ಎಂ.ಟ್ರಸ್ಟ್‌ ಕಾರ್ಯಾಧ್ಯಕ್ಷ ಜಯದೇವ ಮೆಣಸಗಿ ಅಧ್ಯಕ್ಷತೆ ವಹಿಸಿ ದ್ದರು.  ಎಂ.ಎಂ.ಎಂ. ಟ್ರಸ್ಟ್‌ ಆಡಳಿ ತಾಧಿಕಾರಿ ಎನ್.ಎಂ.ಮುಲ್ಲಾ, ಎಂ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲ ಎಸ್.ಎ. ಸಂಗನಾಳ,  ಕಡಕೋಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಎಚ್.ಯಲಬುರ್ಗ ಹಾಜರಿದ್ದರು. ಉಪನ್ಯಾಸಕ ಪ್ರೊ.ಎಸ್. ಬಿ. ಹಿರೇಮಠ ನಿರೂಪಿಸಿದರು,  ಪ್ರೊ. ರವಿರಾಜ ಸಿದ್ಲಿಂಗ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.