ಮಂಗಳವಾರ, ಜೂನ್ 22, 2021
23 °C

ಕಲೆಯ ಅಭಿವ್ಯಕ್ತಿಗೆ ಪ್ರೋತ್ಸಾಹ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲೆಯ ಅಭಿವ್ಯಕ್ತಿಗೆ ಪ್ರೋತ್ಸಾಹ ಅಗತ್ಯಶಿವಮೊಗ್ಗ: ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇದೆ. ಅದನ್ನು ಅಭಿವ್ಯಕ್ತಿಗೊಳಿಸಲು ಸೂಕ್ತ ವೇದಿಕೆ, ಸಮಯ, ಪ್ರೋತ್ಸಾಹ ಬೇಕು. ಆ ಕಾರ್ಯವನ್ನು ನಾಟ್ಯಶ್ರೀ ಕಲಾ ತಂಡ ನಿರ್ವಹಿಸಿದೆ ಎಂದು ಬಂಗಾರಮಕ್ಕಿ ಕ್ಷೇತ್ರದ ಧರ್ಮದರ್ಶಿ ಮಾರುತಿ ಸ್ವಾಮೀಜಿ ಹೇಳಿದರು.ನಗರದಲ್ಲಿ ನಾಟ್ಯಶ್ರೀ ಕಲಾ ತಂಡ ಭಾನುವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರ ಚರಿತ್ರೆ ಯಕ್ಷ ಬಸವ ಉತ್ಸವ-2012ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ವಚನ ಸಾಹಿತ್ಯ ವಾಗ್ಮಿ ಡಾ.ಸಿ. ಸೋಮಶೇಖರ್, ಜಾನಪದ ವಿದ್ವಾಂಸ ಹುಚ್ಚಪ್ಪ ಮಾಸ್ತರ್, ಯಕ್ಷಗಾನ ಕಲಾವಿದ ಕೊಳಗಿ ಕೇಶವ ಹೆಗಡೆ, ನಾಟಕ ಕಲಾವಿದ ಬೆಂಗೇರಿ ಬಸವರಾಜ್ ಅವರಿಗೆ `ನಾಟ್ಯಶ್ರೀ~ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.ಸಾಹಿತಿ ಜರಗನಹಳ್ಳಿ ಶಿವಶಂಕರ್, ಗಾಯಕ ಶಿವಮೊಗ್ಗ ವೇಣುಗೋಪಾಲ್, ವೈದ್ಯ ಡಾ.ರಾಮಚಂದ್ರ, ವಿವಿಧ ಕ್ಷೇತ್ರ ಸಾಧಕ ಡಾ.ಕಾವ್ಯಂಶ್ರೀ, ಸಾಮಾಜಿಕ ಕಾರ್ಯಕರ್ತ ಅಬಸೆ ದಿನೇಶ್ ಜೋಷಿ , ಯಕ್ಷಗಾನ ಕಲಾವಿದ ನಾರಾಯಣ್ ಭಟ್ ಅವರಿಗೆ  ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ವೀರಶೈವ ಪಂಚಮಸಾಲಿ ಪೀಠದ ಸಿದ್ದಲಿಂಗ ಸ್ವಾಮೀಜಿ, ಬಸವಕೇಂದ್ರ ಮರುಳಸಿದ್ದ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್, ನಗರಸಭೆ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಎಂ.ಎಲ್. ಸಾಮಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಎಲ್.ಟಿ. ತಿಮ್ಮಪ್ಪ, ರವಿ ಹೆಗಡೆ, ಕೆ.ಎನ್. ಭಟ್ ಮತ್ತಿತರರು ಉಪಸ್ಥಿತರಿದ್ದರು.ಯುವರಾಜ್ ಸ್ವಾಗತಿಸಿದರು. ಲೋಕೇಶ್ವರಿ ಚೌಳಕಿ ಪ್ರಾರ್ಥಿಸಿದರು. ದತ್ತಮೂರ್ತಿ ಭಟ್ ಸ್ವಾಗತಿಸಿದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.