ನವದೆಹಲಿ (ಐಎಎನ್ಎಸ್): ~ಕಲ್ಲಿದ್ದಲು~ ಗದ್ದಲವು ಸಂಸತ್ತಿನಲ್ಲಿ ಮತ್ತೊಮ್ಮೆ ಪ್ರತಿಧ್ವನಿಸಿದ ಪರಿಣಾಮ ಗುರುವಾರ ಮತ್ತೊಮ್ಮೆ ಉಭಯ ಸದನಗಳನ್ನು ಮುಂದೂಡಿದ ಪ್ರಸಂಗ ನಡೆಯಿತು.

ವಿರೋಧ ಪಕ್ಷದವರು ಸಂಸತ್ ಅಧಿವೇಶನದ ಮೂರನೇ ದಿನವಾದ ಗುರುವಾರವೂ ಪ್ರಧಾನಿ ಮನಮೋಹನ್ ಸಿಂಗ್ ಅವರ ರಾಜೀನಾಮೆಗೆ ಬಿಗಿಪಟ್ಟು ಹಿಡಿದು ಎರಡೂ ಸದನಗಳಲ್ಲಿ ಪ್ರತಿಭಟಿಸಿದರು.

ಬೆಳಿಗ್ಗೆ 11ಕ್ಕೆ ಲೋಕಸಭೆಯು ಆರಂಭವಾಗುತ್ತಿದ್ದಂತೆ ಬಿಜೆಪಿ ಪಕ್ಷದ ಸದಸ್ಯರು ಸದನದ ಕಲಾಪ ನಡೆಯಲು ಅನುಮತಿ ನೀಡದೆ, ಪ್ರಧಾನಿ ಅವರು ರಾಜೀನಾಮೆಯನ್ನು ನೀಡಲೇ ಬೇಕು ಎಂದು ಘೋಷಣೆಯನ್ನು ಕೂಗತ್ತಾ ಸದನದಲ್ಲಿ ಗದ್ದಲ ಎಬ್ಬಿಸಿದರು. ರಾಜ್ಯಸಭೆಯಲ್ಲಿಯೂ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಸದನವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು. ಮಧ್ಯಾಹ್ನ ನಂತರ ಕಲಾಪ ಆರಂಭವಾದರೂ ಪರಿಸ್ಥಿತಿಯು ತಿಳಿಯಾಗಿರಲಿಲ್ಲ. ಪುನಃ ಸ್ಪೀಕರ್ ಮೀರಾ ಕುಮಾರಿ ಅವರು ಮಧ್ಯಾಹ್ನ 2ರವರೆಗೆ ಉಭಯ ಸದನಗಳನ್ನು ಮುಂದೂಡಿದರು.

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಅವರು ಚರ್ಚೆ ಮಾಡಲು ಸಿದ್ಧರಿದ್ದಾರೆ. ಆದರೆ, ವಿರೋಧ ಪಕ್ಷಗಳ ಸದಸ್ಯರಿಗೆ ಈ ಬಗ್ಗೆ ಮನಸ್ಸಿಲ್ಲ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಆರೋಪಿಸಿದರು.

ರಾಜ್ಯಸಭೆಯಲ್ಲಿಯೂ ಬಿಜೆಪಿ ಸೇರಿದಂತೆ ವಿರೋಧಪಕ್ಷದ ಸಂಸದರು ಕಲ್ಲಿದ್ದಲು ಕೋಲಾಹಲವನ್ನು ಎಬ್ಬಿಸಿ, ಪ್ರಧಾನಿ ಅವರು ರಾಜೀನಾಮೆಯನ್ನು ನೀಡಲೇ ಬೇಕು ಎಂದು ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಿದರು.

ಬಿಜೆಪಿ ಸಂಸದರು ಹಗರಣದ ಚರ್ಚೆಗೆ ಒಪ್ಪುತ್ತಿಲ್ಲ. ಆದರೆ, ಜೆಡಿ-ಯು ಸದಸ್ಯರು ಚರ್ಚೆಗೆ ಸಿದ್ಧರಿದ್ದಾರೆ. ಮಧ್ಯಾಹ್ನ 12ಗಂಟೆಗೆ ಆರಂಭವಾದ ಮೇಲ್ಮನೆ ಸಭೆಯಲ್ಲಿ 15 ಸಂಸದರು ಮಾತ್ರ ಹಾಜರಿದ್ದರು. ಸಚಿವರು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ರಾಜ್ಯಸಭಾ ಅಧ್ಯಕ್ಷ ಎಂ. ಹಮಿದ್ ಅನ್ಸಾರಿ ಅವರು ಎಲ್ಲಾ ಪಕ್ಷದ ಸದಸ್ಯರ ಸಭೆ ಕರೆದರೂ ಯಾವ ಸದಸ್ಯರು ಸಭೆಗೆ ಹಾಜರಾಗಿರಲಿಲ್ಲ.

ಹಗರಣದ ಬಗ್ಗೆ ಸರ್ಕಾರ ಚರ್ಚಿಸಲು ತಯಾರಾಗಿದ್ದರೂ ವಿರೋಧ ಪಕ್ಷಕ್ಕೆ ಮನಸ್ಸಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಆರೋಪಿಸಿದರು.

ಸಧ್ಯ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದವರಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಮನಸ್ಸಿಲ್ಲದಿದ್ದರೂ ಸೋಮವಾರ ಅವರು ಚರ್ಚೆಗೆ ಬರಬಹುದು ಎಂಬ ನಿರೀಕ್ಷೆ ಇದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರವು ಸೋಮವಾರ ಎಲ್ಲಾ ಪಕ್ಷದ ಸದಸ್ಯರು ಸಭೆಯನ್ನು ಕರೆದು ಹಗರಣದ ಬಗ್ಗೆ ಚರ್ಚೆ ನಡೆಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.