ಬುಧವಾರ, ಏಪ್ರಿಲ್ 21, 2021
23 °C

ಕಲ್ಲು ತೂರಾಟ: ಚಿರತೆ ಮರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣಗಿರಿ (ತಮಿಳುನಾಡು), (ಪಿಟಿಐ):  ಜಿಲ್ಲೆಯ ಮಥುರಾ ಪ್ರದೇಶದಲ್ಲಿ ಸಾರ್ವಜನಿಕರ ದಾಳಿಯಿಂದ ಗಾಯಗೊಂಡು ಆರು ತಿಂಗಳ ಗಂಡು ಚಿರತೆ ಮರಿಯೊಂದು ಬುಧವಾರ ಮೃತಪಟ್ಟಿದೆ. ಹತ್ತಿರದ ತಿರುಪತ್ತೂರು ಅರಣ್ಯದಿಂದ ಬಂದಿದ್ದ ಈ ಮರಿ ಸಾರ್ವಜನಿಕರ ಮೇಲೆ ದಾಳಿ ಮಾಡಿ, 30 ವರ್ಷದ ವ್ಯಕ್ತಿಯೊಬ್ಬನನ್ನು ಗಾಯಗೊಳಿಸಿತ್ತು.ಇದರಿಂದ ಕ್ರೋಧಗೊಂಡ ಜನ ಅದರ ಮೇಲೆ ಕಲ್ಲುಗಳನ್ನು ತೂರಿದ್ದರು. ಆಗ ಹೊಲಗಳ ಕಡೆ ಓಡಿ ಹೋದ ಅದು ನೀರಿಲ್ಲದ 50 ಅಡಿ ಆಳದ ಬಾವಿಯಲ್ಲಿ ಬಿದ್ದಿತ್ತು. ಆಗ ಮರಿಯ ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.