ಶನಿವಾರ, ಮೇ 21, 2022
20 °C

ಕವಿವಿಯಲ್ಲಿ ಮಾಧ್ಯಮ ಉತ್ಸವ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹತ್ತು ಹಲವು ಬಗೆಯ ರಸದೌತಣ ಉಣಬಡಿಸುವ ಯುವ ಮನಸ್ಸುಗಳು ಅಲ್ಲಿ ಸಮ್ಮಿಲನವಾಗಿದ್ದವು. ಎಲ್ಲರ ಮುಖದಲ್ಲಿ ಮಂದಹಾಸದ ನಗೆಯಿತ್ತು. ಅಲ್ಲಿ ವಿದ್ಯಾರ್ಥಿಗಳಷ್ಟೇ ಅಲ್ಲದೇ ಪತ್ರಕರ್ತರು ಮತ್ತು ಉಪನ್ಯಾಸಕರೂ ಇದ್ದರು. ಪತ್ರಿಕೋದ್ಯಮ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಅಲ್ಲಿ ಒಟ್ಟುಗೂಡಿ ಹಂಚಿಕೊಂಡ ವಿಷಯಗಳು ಹಲವು.ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿದ್ದ ಮಾಧ್ಯಮ ಉತ್ಸವ ಅನೇಕರಿಗೆ ಹಲವು ಬಗೆಯ ಅನುಭವ ನೀಡಿತು.ಕವಿವಿಯ ಪತ್ರಿಕೋದ್ಯಮ ವಿಭಾಗವು ಪ್ರತಿ ವರ್ಷ ಮಾಧ್ಯಮ ಉತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದೆ. ಪ್ರತಿ ಸಲ ಹೊಸ ಹೊಸ ವಿಷಯಗಳೊಂದಿಗೆ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವಂತಹ  ಗೋಷ್ಠಿ, ಚರ್ಚೆ, ರಸಪ್ರಶ್ನೆ, ರೇಡಿಯೊ ಜಾಕಿಯಂತಹ ಹಲವು ಬಗೆಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಅದರಂತೆ ಈ ಸಲವೂ ಮಾಧ್ಯಮೋತ್ಸ  ಹಮ್ಮಿಕೊಳ್ಳಲಾಗಿತ್ತು. ವಿಜಾಪುರ, ಗುಲ್ಬರ್ಗ, ಉಜಿರೆ, ತುಮಕೂರು ವಿಶ್ವ ವಿದ್ಯಾಲಯಗಳಿಂದ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಮತ್ತು ಶಿಕ್ಷರನ್ನು ಆಹ್ವಾನಿಸಲಾಗಿತ್ತು. ಬೇರೆ ಬೇರೆ ವಿವಿಗಳಿಂದ ಬಂದ ಮಾಧ್ಯಮ ವಿದ್ಯಾರ್ಥಿಗಳು ಭಾಗವಹಿಸಿ ಪತ್ರಿಕೋದ್ಯಮದಲ್ಲಿರುವ ತಮ್ಮ ಸಂಶಯಗಳನ್ನು ಅನುಭವಿ ಪತ್ರಕರ್ತರೊಂದಿಗೆ ಮತ್ತು ಉಪನ್ಯಾಸಕರ ಮುಂದೆ ಬಿಚ್ಚಿಟ್ಟರು.ಗುಂಪು ಚರ್ಚೆಯಲ್ಲಿ ಮಾಧ್ಯಮ ಲೋಕದಲ್ಲಿನ ಅವಕಾಶಗಳು ಮತ್ತು ಸವಾಲುಗಳು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿರಬೇಕಾದ ಅರ್ಹತೆಯ ಬಗ್ಗೆ ಅರಿವು ಮೂಡಿಸಲಾಯಿತು.  ಶೋಕಿಗಾಗಿ ಪತ್ರಿಕೋದ್ಯಮವನ್ನು ಆರಿಸಿಕೊಂಡವರಿಗೆಲ್ಲಾ ಇದೊಂದು ಎಚ್ಚರದ ಕಾರ್ಯಕ್ರಮವಾಗಿಯೂ ಮೂಡಿಬಂತು.  ಮಾಧ್ಯಮ ಉತ್ಸವದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಭಯವನ್ನು ದೂರಮಾಡಿ ತಮ್ಮ ಪ್ರತಿಭೆಯನ್ನು ಹೊರಹಾಕುವಲ್ಲಿ ಯಶಸ್ವಿಯಾದರು. ವರದಿಗಾರಿಕೆ, ಪುಟವಿನ್ಯಾಸ, ಸಾಕ್ಷ್ಯಚಿತ್ರ, ಛಾಯಾಚಿತ್ರ ಸೆರೆಹಿಡಿಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಅಷ್ಟೇ ಉತ್ಸಾಹದಿಂದ ಭಾಗವಹಿಸಿದ್ದರು.ಅಂತಿಮವಾಗಿ  ಛಾಯಾಚಿತ್ರ ಸೆರೆಹಿಡಿಯುವುದರಲ್ಲಿ ಮತ್ತು ರೇಡಿಯೊ ಜಾಕಿಯಲ್ಲಿ ವಿಜಾಪುರ ಮಹಿಳಾ ವಿವಿ ಪ್ರಥಮ ಸ್ಥಾನ ಪಡೆದರೆ,  ಐಡಿಯಾ ಟಾಕ್‌ನಲ್ಲಿ ಗುಲ್ಬರ್ಗ ವಿವಿ ಪ್ರಥಮ ಸ್ಥಾನ ಪಡೆಯಿತು. 5ಡಬ್ಲ್ಯು1ಎಚ್, ನ್ಯೂಸ್ ಪ್ಯಾಕೇಜ್, ಪಿಟಿಸಿಯಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು. ಗುಲ್ಬರ್ಗದ ಗೋದುತಾಯಿ ಮಹಾವಿದ್ಯಾಲಯವು ಪುಟವಿನ್ಯಾಸದಲ್ಲಿ ಪ್ರಥಮ ಸ್ಥಾನ ಗಳಿಸಿತು.  ಅಂತಿಮವಾಗಿ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ಜನರಲ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.