ಕುಂದು ಕೊರತೆ
ಕಸದ ರಾಶಿ ತೆರವುಗೊಳಿಸಿ

ಜೆ.ಪಿ.ನಗರ 2ನೇ ಹಂತದಲ್ಲಿರುವ ದೇವಿ ದೇವಸ್ಥಾನದ ಹಿಂಭಾಗದಲ್ಲಿರುವ ಆವರಣದಲ್ಲಿ ಪ್ಲಾಸ್ಟಿಕ್, ಕೊಳೆತ ತರಕಾರಿ, ಹೂವಿನ ಮಾಲೆಗಳನ್ನು ಎಸೆದಿದ್ದು, ಅವು ಅಲ್ಲೆ ಕೊಳೆತು ದುರ್ನಾತ ಬೀರುತ್ತಿದೆ. ದೇವಾಲಯಕ್ಕೆ ಸಮೀಪವಿರುವ ಈ ಕಸದ ರಾಶಿಯಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ತೊಂದರೆ ಅನುಭವಿಸುವಂತಾಗಿದೆ.
ಈಗ ಮಳೆಗಾಲ ಆರಂಭವಾಗಿದೆ. ಅಲ್ಲಿನ ಕಸದ ರಾಶಿಯನ್ನು ಹಾಗೆಯೇ ಬಿಟ್ಟರೆ ಅದು ಮಲೇರಿಯಾ ಹಾಗೂ ಮತ್ತಿತರ ರೋಗಗಳನ್ನು ಹರಡಲು ಕಾರಣವಾಗಬಹುದು. ಆದ್ದರಿಂದ ಆದಷ್ಟು ಬೇಗ ಈ ಕಸದ ರಾಶಿಯನ್ನು ತೆರವುಗೊಳಿಸಿ ಈ ಜಾಗವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಬೇಕು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.