ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಾದಿಗೆ ಎರಡನೇ ಅವಧಿಗೂ ಅಧಿಕಾರ ಬೇಡ. ಸ್ಪರ್ಧೆಯಲ್ಲಿರುವ ಇಬ್ಬರು ಮಾಜಿ ಅಧ್ಯಕ್ಷರು ಕಣದಿಂದ ಹಿಂದೆ ಸರಿದು ಹೊಸಬರಿಗೆ ಅವಕಾಶ ಮಾಡಿಕೊಡಬೇಕು~ ಎಂದು ಗುರುವಾರ ಇಲ್ಲಿ ಸಾಹಿತಿಗಳನ್ನು ಒಳಗೊಂಡ ತಂಡ ಮನವಿ ಮಾಡಿತು.

ಪತ್ರಿಕಾಗೋಷ್ಠಿಯಲ್ಲಿ ಕವಿ ಕೆ.ಬಿ.ಸಿದ್ದಯ್ಯ, ಸಾಹಿತಿಗಳಾದ ಸಿ.ಎಚ್.ಮರಿದೇವರು, ಕೆ.ಪಿ.ನಟರಾಜ, ಕವಿತಾಕೃಷ್ಣ, ಕಸಾಪ ಮಾಜಿ ಅಧ್ಯಕ್ಷ ಏಕೇಶ್,ಡಾ.ಲಕ್ಷ್ಮಣದಾಸ್, ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ರವಿಕುಮಾರ್ ಈ ಮನವಿ ಮಾಡಿದರು.

ಸಾಹಿತ್ಯ ಪರಿಷತ್ ಒಂದೇ ಜಾತಿಗೆ ಸೇರಬಾರ ದು. ಎಲ್ಲರನ್ನು ಒಳಗೊಂಡಂತೆ ಬೆಳೆಯಬೇಕು. ಪರಿಷತ್ಗೆ ಸಮರ್ಥ ನಾಯಕತ್ವ ಬೇಕಾಗಿದೆ. ಸೋ.ಮು.ಭಾಸ್ಕರಾಚಾರ್ ಅವರು ಸಮರ್ಥರಿದ್ದು ಅವರನ್ನು ಎಲ್ಲರು ಬೆಂಬಲಿಸಬೇಕಾಗಿದೆ ಎಂದು ಕೆ.ಇ.ಸಿದ್ದಯ್ಯ, ಸಿ.ಎಸ್.ಮರಿದೇವರು ಹೇಳಿದರು.

ಕಣದಿಂದ ಹಿಂದೆ ಸರಿದಿರುವುದಾಗಿ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದು ಸುಳ್ಳು. ಇನ್ನು 9 ತಿಂಗಳಲ್ಲಿ ಉಪನ್ಯಾಸಕ ವೃತ್ತಿಯಿಂದ ನಿವೃತ್ತನಾಗುವೆ. ಕಸಾಪವನ್ನು ಸಾಂಸ್ಕೃತಿಕವಾಗಿ ಕಟ್ಟಬೇಕೆಂಬ ಕನಸಿದೆ ಎಂದು ಕಣದಲ್ಲಿರುವ ಡಾ.ಸೋ.ಮು.ಭಾಸ್ಕರಾಚಾರ್ ಹೇಳಿದರು.

ಮೇ 7ಕ್ಕೆ ಪ್ರಬಂಧ ಸ್ಪರ್ಧೆ: ಭಾರತ ಸೇವಾದಳದ ಸಂಸ್ಥಾಪಕ ಡಾ.ನಾ.ಸು.ಹರ್ಡೀಕರ್ 123ನೇ ಜನ್ಮ ದಿನೋತ್ಸವದ ಅಂಗವಾಗಿ ಜಿಲ್ಲಾ ಸೇವಾದಳ ಸಮಿತಿ ವತಿಯಿಂದ ಮೇ7ರಂದು ಮಹಾತ್ಮಗಾಂಧಿ ಕ್ರೀಡಾಂಗಣದ ಹತ್ತಿರ ಇರುವ ಡಾ.ಹರ್ಡೀಕರ್ ಭವನದಲ್ಲಿ ಪ್ರಬಂಧ ರಚನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಚಿ.ನ.ಏಕೇಶ್ವರ್ ತಿಳಿಸಿದ್ದಾರೆ.

`ನಾ ಮೆಚ್ಚಿದ ನಾಯಕ ಡಾ.ನಾ.ಸು.ಹರ್ಡೀಕರ್~ಅಥವಾ `ಭಾರತೀಯರು ಸೇವಾತತ್ಪರ ರಾಗುವುದರಿಂದಲೇ ರಾಷ್ಟ್ರದ ಸರ್ವಾಂಗೀಣ ಪ್ರಗತಿ~ ಕುರಿತು ಸ್ಪರ್ಧೆ ನಡೆಯಲಿದೆ. ಮಾಹಿತಿಗೆ ಮೊ 9880873122 ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.