ಬೆಂಗಳೂರು: ಕನಕಪುರ ರಸ್ತೆಯಲ್ಲಿರುವ ಹಾರೋಹಳ್ಳಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ ಸ್ಥಾಪಿಸಲು ಎಷ್ಟು ಜಮೀನು ನೀಡಲಾಗಿದೆ ಎಂಬ ಬಗ್ಗೆ ಸ್ಪಷ್ಟ ಹೇಳಿಕೆ ಸಲ್ಲಿಸುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.

ಕೇಪ್ರಿ ಮೀಟ್ ಹೌಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ ಅವರ ಪೀಠಕ್ಕೆ ಹೇಳಿಕೆ ಸಲ್ಲಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು, ಅಗತ್ಯವಿರುಷ್ಟು ಜಮೀನು ನೀಡಿಲ್ಲ ಎಂದರು. ಹಾರೋಹಳ್ಳಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಇದರ ಟೆಂಡರ್ ಕೇಪ್ರಿ ಮೀಟ್ ಹೌಸ್ ಕಂಪೆನಿ ಪಾಲಾಗಿದೆ.

ತರಬೇತಿ ಪ್ರಮಾಣಪತ್ರ ವಿವಾದ
ರಾಷ್ಟ್ರೀಯ ವೃತ್ತಿ ತರಬೇತಿ ಮಂಡಳಿ ತನಗೆ ‘ರಾಷ್ಟ್ರೀಯ ತರಬೇತಿ ಪ್ರಮಾಣಪತ್ರ’ ನೀಡದ ಕಾರಣ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಪ್ರಮಾಣಪತ್ರ ವಿತರಣೆ ಆಗದ ಕಾರಣ ದೇಶದಾದ್ಯಂತ ಹಲವಾರು ಅಭ್ಯರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ ಎಂದು ದೂರಿ ಎಚ್.ಎಲ್. ಮನೋಹರ್ ಎಂಬುವವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.

‘ಪರಿಶಿಷ್ಟ ಜಾತಿಗೆ ಸೇರಿದವನಾದ ನಾನು ಐಟಿಐ ತರಬೇತಿ ಪಡೆದಿದ್ದೇನೆ. ರಾಜ್ಯ ವೃತ್ತಿ ತರಬೇತಿ ಮಂಡಳಿಯು ನನಗೆ ತಾತ್ಕಾಲಿಕ ಪ್ರಮಾಣಪತ್ರ ನೀಡಿದೆ. ತಾತ್ಕಾಲಿಕ ಪ್ರಮಾಣ ಪತ್ರ ಆಧರಿಸಿ ನಾನು ಎಚ್ಎಎಲ್ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದೇನೆ. ಆದರೆ ಅಂತಿಮ ಪ್ರಮಾಣಪತ್ರ ಸಲ್ಲಿಸದಿದ್ದರೆ ನಾನು ಕೆಲಸ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಅವರು ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರು ‘ಮನೋಹರ್ ಅವರನ್ನು ಕೆಲಸದಿಂದ ತೆಗೆಯಬಾರದು’ ಎಂದು ಮಧ್ಯಾಂತರ ಆದೇಶ ನೀಡಿ, ವಿಚಾರಣೆ ಮುಂದೂಡಿದ್ದಾರೆ.

ಯಥಾಸ್ಥಿತಿಗೆ ಆದೇಶ
ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಎದುರಿನ ಮೈದಾನದಲ್ಲಿ ಉರ್ದು ಮಾಧ್ಯಮ ಶಾಲೆ ತೆರೆಯುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದು ಕೊಳ್ಳಲು ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಕನ್ನಡ ಮಾಧ್ಯಮ ಶಾಲೆಯ ಮೈದಾನದಲ್ಲಿ ಉರ್ದು ಮಾಧ್ಯಮ ಶಾಲೆ ತೆರೆಯಲು ಅನುಮತಿ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕ್ರಮ ಸರಿಯಲ್ಲ ಎಂದು ಎಸ್.ವೈ. ನಾಗರಾಜ್ ಎಂಬುವವರು ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಲಾಗಿದೆ. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ ಅವರು ಮುಂದೂಡಿದ್ದಾರೆ.

ವಿಭಾಗೀಯ ಪೀಠಕ್ಕೆ ವರ್ಗ
ರಾಷ್ಟ್ರೀಯ ನಗರೋತ್ಥಾನ ಯೋಜನೆಯ ಅಡಿ ಕೈಗೆತ್ತಿಕೊಂಡ ಮಳೆ ನೀರು ಕಾಲುವೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕುರಿತು ತಾನು ಸಲ್ಲಿಸಿದ್ದ ದೂರನ್ನು ಲೋಕಾಯುಕ್ತ ಸಂಸ್ಥೆ ವಜಾಗೊಳಿಸಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯ ಪಿ.ಆರ್. ರಮೇಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ವರ್ಗಾಯಿಸಲು ಏಕಸದಸ್ಯ ಪೀಠ ಸೂಚಿಸಿದೆ.

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಡೆಸಿದ ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿ ನಾನು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೆ. ಆದರೆ ನನ್ನಿಂದ ಪ್ರತಿಹೇಳಿಕೆ ಸಲ್ಲಿಕೆ ತಡವಾಗಿ ಆಗಿದೆ ಎಂಬ ಕಾರಣಕ್ಕೆ ದೂರು ವಜಾಗೊಳಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಹೇಳುತ್ತಿದ್ದಾರೆ. ವಜಾಗೊಳಿಸಿದ ಕ್ರಮವನ್ನು ಮರುಪರಿಶೀಲಿಸಬೇಕು ಎಂಬ ಕೋರಿಕೆಯನ್ನು ಅವರು ಒಪ್ಪುತ್ತಿಲ್ಲ’ ಎಂದು ರಮೇಶ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ದೂರಿದ್ದರು.

ಇದರ ವಿಚಾರಣೆಯನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸುವಂತೆ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು ಸೂಚಿಸಿದ್ದಾರೆ.

ಕೊಳೆಗೇರಿ ತೆರವಿಗೆ ಗಡುವು
ನಗರದ ಹೊಸೂರು ರಸ್ತೆಯಲ್ಲಿರುವ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಸಮೀಪ ಇರುವ ಕೊಳೆಗೇರಿಯನ್ನು ಮೇ ಅಂತ್ಯದ ವೇಳೆ ತೆರವುಗೊಳಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಆಸ್ಪತ್ರೆ ಸುತ್ತಲಿನ ಪ್ರದೇಶದಲ್ಲಿ ಕೊಳೆಗೇರಿಗಳು ಇರಬಾರದು. ಇದನ್ನು ತೆರವುಗೊಳಿಸಬೇಕು ಎಂದು ಹೈಕೋರ್ಟ್ ರಿಟ್ ಅರ್ಜಿಯೊಂದರ ವಿಚಾರಣೆ ನಡೆಸಿ, ಆರು ವರ್ಷಗಳ ಹಿಂದೆಯೇ ಆದೇಶ ನೀಡಿತ್ತು. ಆದರೆ ಅದನ್ನು ಸರ್ಕಾರ ಅನುಷ್ಠಾನಕ್ಕೆ ತರಲಿಲ್ಲ.

ಇದನ್ನು ಪ್ರಶ್ನಿಸಿ ಗಿರಿನಗರ ನಿವಾಸಿ ಬಿ. ಕೃಷ್ಣ ಭಟ್ ಎಂಬುವವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರು. ಇದರ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಮೂರು ತಿಂಗಳಲ್ಲಿ ತೆರವುಗೊಳಿಸಬೇಕು ಎಂಬ ಗಡುವು ನೀಡಿ 2013ರ ಡಿಸೆಂಬರ್ 3ರಂದು ಆದೇಶಿಸಿತು.

ಸೋಮವಾರಕ್ಕೆ ಈ ಗಡುವು ಮುಗಿದಿದೆ. ಕೊಳೆಗೇರಿ ತೆರವಿಗೆ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಮತ್ತು ರವಿ ಮಳಿಮಠ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಸರ್ಕಾರ ಮಂಗಳವಾರ ಮನವಿ ಸಲ್ಲಿಸಿತು. ‘ಮೇ ಅಂತ್ಯದ ವೇಳೆ ತೆರವುಗೊಳಿಸಬೇಕು’ ಎಂದು ಪೀಠ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.