ವಿಜಾಪುರ: ಕಸ ನೀಡಲು ಸಹಕಾರ ನೀಡದ 900 ಮಂದಿಗೆ ನಗರಸಭೆ ನೋಟಿಸ್ ಜಾರಿ ಮಾಡಿದ್ದು 90 ಮಂದಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ರಾಜಶೇಖರ ಅವರು ತಿಳಿಸಿದ್ದಾರೆ.

ನಗರ ನೈರ್ಮಲ್ಯ ಯೋಜನೆಯಡಿ ನಗರಸಭೆ ಪ್ರವರ್ತಕರಿಗೆ ಕಸ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿರ್ಮಲ ನಗರ ಯೋಜನೆಯಡಿ ನಗರಸಭೆ ಘನತ್ಯಾಜ್ಯ ವಸ್ತುಗಳ ನಿಯಮಗಳ ಅನುಸಾರ ನಗರಸಭೆ ವ್ಯಾಪ್ತಿಯ ಸುಮಾರು 70ಕ್ಕೂ ಹೆಚ್ಚಿನ ವಿವಿಧ ಬಡಾವಣೆಗಳಲ್ಲಿ 12 ಸ್ತ್ರೀ ಶಕ್ತಿ ಹಾಗೂ ಸ್ವ-ಸಹಾಯ ಗುಂಪುಗಳನ್ನು ಮನೆ-ಮನೆ ಕಸ ಸಂಗ್ರಹಣೆಗಾಗಿ ಪ್ರವರ್ತಕರನ್ನಾಗಿ ನಿಯೋಜಿಸಲಾಗಿದೆ.

ಜನರು ತಮ್ಮ ಮನೆಯ ಕಸವನ್ನು ಬೇಕಾಬಿಟ್ಟಿಯಾಗಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಸೆದು ನಗರ ಸೌಂದರ್ಯವನ್ನು ಕೆಡಿಸುವು ದರೊಂದಿಗೆ ಪರಿಸರ ಮಾಲಿನ್ಯ ಉಂಟು ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಮನೆ ಬಾಗಿಲವರೆಗೆ ಬರುವ ಪ್ರವರ್ತಕರಿಗೆ ನಿಗದಿತ ಶುಲ್ಕದೊಂದಿಗೆ ಕಸ ಕೊಟ್ಟು ನಗರಸಭೆಯೊಂದಿಗೆ ಸಹಕ ರಿಸಲು ಹಲವು ಬಾರಿ ನಗರಸಭೆ ಮಾಧ್ಯಮಗಳ ಮೂಲಕ ಹಾಗೂ ಪ್ರವರ್ತಕರ ಮೂಲಕ ಮನವಿ ಮಾಡಿಕೊಂಡಿತ್ತು.

ಆದರೂ ನಗರದ ಕೀರ್ತಿ ನಗರ ಬಡಾವಣೆ ಹಾಗೂ ಆದರ್ಶ ನಗರ ಬಡಾವಣೆಯ ಕೆಲ ನಿವಾಸಿಗಳು ಪ್ರವರ್ತಕರಿಗೆ ಕಸ ನೀಡದೆ ನಗರ ಸ್ವಚ್ಚ ತೆಯ ಬಗ್ಗೆ ನಿರ್ಲಕ್ಷ್ಯ ವಸಿದ ಹಿನ್ನೆಲೆ ಯಲ್ಲಿ ಈ ಎರಡು ಬಡಾವಣೆಗಳ 900 ಜನರಿಗೆ ನೋಟಿಸ್ ಜಾರಿ ಮಾಡ ಲಾಗಿದೆ.

ನೋಟಿಸ್ ನೀಡಿದರೂ ಅಸಹಕಾರ ತೋರಿದ 90 ಜನರ ವಿರುದ್ಧ ಕರ್ನಾ ಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ 224ರ ಅನುಸಾರ ನ್ಯಾಯಾಲದಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಪೌರಾ ಯುಕ್ತರು ಹೇಳಿದ್ದಾರೆ.

ನಗರದ ಬಡಾವಣೆಯ ಮನೆ, ಹೋಟೆಲ್, ಬೇಕರಿ, ಆಸ್ಪತ್ರೆ ಇನ್ನಿತರ ಉದ್ದಿಮೆ ಹಾಗೂ ವ್ಯಾಪರಸ್ಥರು ತಮ್ಮಲ್ಲಿ ಉತ್ಪತ್ತಿಯಾಗುವ ಕಸವನ್ನು ನಗರಸಭೆಯು ನಿಯೋಜಿಸಿದ ಸ್ತ್ರೀ ಶಕ್ತಿ ಹಾಗೂ ಸ್ವ-ಸಹಾಯ ಗುಂಪಿನ ಪ್ರವರ್ತಕರಿಗೆ ಕಸಕೊಟ್ಟು ನಗರದ ಪರಿಸರ ಕಾಪಾಡುವ ನಿಟ್ಟಿನಲ್ಲಿ ನಗರಸಭೆಯೊಂದಿಗೆ ಸಹಕರಿಸಬೇಕು.

ಸ್ಪಂದಿಸದವರ ವಿರುದ್ದ ನ್ಯಾಯಾ ಲಯದಲ್ಲಿ ಮೊಕದ್ದಮೆ ಹೂಡ ಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.