ನವದೆಹಲಿ (ಪಿಟಿಐ): ‘ಸ್ವಾವಲಂಬನೆ’, ‘ಜೈ ಜವಾನ್ ಜೈ ಕಿಸಾನ್’ಗಳು ಹಿಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತ ಕಂಡ ಘೋಷಣೆಗಳು. ನಂತರ ಭಾರತ ಬಹಳ ಬದಲಾಗಿದೆ. ಈಗ, ‘ಈ ಬಾರಿ ಮೋದಿ ಸರ್ಕಾರ’ ಎಂದು ಬಿಜೆಪಿ ಹೇಳಿದರೆ, ಸೋನಿಯಾ ಮತ್ತು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ‘ನಾನಲ್ಲ, ನಾವು’ ಎನ್ನುತ್ತಿದೆ.

ಘೋಷಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಶ್ರೀಸಾಮಾನ್ಯನ ಬಗ್ಗೆ ತನಗೆ ಇರುವ ಬದ್ಧತೆಗೆ ಒತ್ತು ನೀಡಿದೆ. ಆದರೆ ಕಾಂಗ್ರೆಸ್ಗೆ ಪ್ರಬಲ ಸವಾಲು ಒಡ್ಡಿರುವ ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯ ಸುತ್ತವೇ ಪ್ರಚಾರವನ್ನು ಕೇಂದ್ರೀಕರಿಸಿದೆ.

ಹಿಂದಿನ ಚುನಾವಣೆಗಳಲ್ಲಿಯೂ ಈ ಎರಡೂ ಪಕ್ಷಗಳು ಇದೇ ರೀತಿಯ ಕಾರ್ಯತಂತ್ರವನ್ನು ಅನುಸರಿಸಿರುವುದನ್ನು ಗಮನಿಸಬಹುದು. ಹಿಂದೆ ಪಕ್ಷದ ಪ್ರಧಾನಿ ಅಭ್ಯರ್ಥಿಗಳಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಅವರನ್ನೇ ಕೇಂದ್ರೀಕರಿಸಿ ಬಿಜೆಪಿ ಪ್ರಚಾರ ನಡೆಸಿತ್ತು. ಆಗಲೂ ಕಾಂಗ್ರೆಸ್ ‘ಶ್ರೀಸಾಮಾನ್ಯ’ ಮಂತ್ರವನ್ನೇ ಪಠಿಸಿತ್ತು.

1996ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದ ಚುನಾವಣೆಯಲ್ಲಿ ‘ಈ ಬಾರಿ ಅಟಲ್ ಬಿಹಾರಿ’ ಎಂಬ ಘೋಷಣೆಯನ್ನು ಬಿಜೆಪಿ ಹೊಂದಿತ್ತು. ಕಾಂಗ್ರೆಸ್ ಸರ್ಕಾರದ ವಿರುದ್ಧ ಇರುವ ಆಡಳಿತ ವಿರೋಧಿ ಅಲೆಯ ಪ್ರಯೋಜನ ಪಡೆಯಲು ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಘೋಷಣೆಗೆ ನರೇಂದ್ರ ಮೋದಿ ಅವರು ಕಳೆದ ವರ್ಷವೇ ಚಾಲನೆ ನೀಡಿದ್ದರು.

ಕಾಂಗ್ರೆಸ್ ತನ್ನ ಯಾವುದೆ ಘೋಷಣೆಯಲ್ಲೂ ಬಿಜೆಪಿಯ ಹೆಸರನ್ನು ಎಳೆದು ತಂದಿಲ್ಲ. ಬದಲಿಗೆ ತನ್ನ ಸಾಧನೆಗಳಿಗೆ ಒತ್ತು ನೀಡಲು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.