ಶುಕ್ರವಾರ, ಮೇ 27, 2022
30 °C

ಕಾಡಾನೆ ಓಡಿಸಲು ವಿಶೇಷ ತಂಡ ರಚನೆ

ಪ್ರಜಾವಾಣಿ ವಾರ್ತೆ / ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಪುನಃ ಕಂಡು ಬರುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ವನ ಪಾಲಕರ ನೇತೃತ್ವದಲ್ಲಿ ಕಾರ್ಯಪಡೆಯನ್ನು (ರ್ಯಾಪಿಡ್ ರೆಸ್ಪಾನ್ಸ್ ಟೀಮ್) ರಚಿಸಿದೆ.ವಿಶೇಷವಾಗಿ ವಿರಾಜಪೇಟೆ ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆ ಕಂಡು ಬರುತ್ತಿದ್ದು, ಕಾಡಾನೆಗಳು ಹೊಲ ಗದ್ದೆ ಹಾಗೂ ಕಾಫಿ ತೋಟಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡುತ್ತಿವೆ.ಕಾಡಾನೆ ಹಾವಳಿ ನಿಯಂತ್ರಿಸಲು ಐವರು ವನ ಪಾಲಕರನ್ನೊಳಗೊಂಡ ತಂಡವನ್ನು ರಚನೆ ಮಾಡ ಲಾಗಿದೆ ಎಂದು ವಿರಾಜಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್ ತಿಳಿಸಿದ್ದಾರೆ.ಕಾಡಾನೆ ಹಾವಳಿಯ ಪ್ರದೇಶಗಳಲ್ಲಿನ ಜನರು ದೂರವಾಣಿ ಅಥವಾ ಮೊಬೈಲ್ ಮೂಲಕ ಸಂಬಂಧಪಟ್ಟ ವನಪಾಲಕರಿಗೆ ಮಾಹಿತಿ ನೀಡಿದರೆ ತಕ್ಷಣವೇ ಕಾರ್ಯಪಡೆಯ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸಲಿದ್ದಾರೆ ಎಂದು ಅವರು ತಿಳಿಸಿದರು.ಪಾಲಿಬೆಟ್ಟ ವ್ಯಾಪ್ತಿಗೆ ರಾಘವ ನಾಯಕ್, ಡಿಆರ್‌ಎಫ್ ಫಾರೆಸ್ಟ್ ಗಾರ್ಡ್ (9900349115), ತಿತಿಮತಿ ವ್ಯಾಪ್ತಿಗೆ ಸುರೇಶ್, ಫಾರೆಸ್ಟ್ ಗಾರ್ಡ್ (9449555069), ಪೊನ್ನಂಪೇಟೆಗೆ ರಾಕೇಶ್, ಡಿ.ಆರ್.ಎಫ್.ಒ (9916072102), ಅಮ್ಮತ್ತಿ ವ್ಯಾಪ್ತಿಗೆ  ಶ್ರಿಧರ್, ಡಿ.ಆರ್.ಎಫ್.ಒ (9900 956900), ವಿರಾಜಪೇಟೆ ವ್ಯಾಪ್ತಿಗೆ ಬಾಲಾಜಿ, ಡಿ.ಆರ್.ಎಫ್.ಒ (9448587982) ಮತ್ತು ಶ್ರಿಮಂಗಲ ವ್ಯಾಪ್ತಿಗೆ 948288435, ವನ್ಯಜೀವಿ ವಲಯ ಕಚೇರಿ ದೂರವಾಣಿ ಸಂಖ್ಯೆ 08274- 246331 ಅವರನ್ನು ನಿಯೋಜನೆ ಮಾಡಲಾಗಿದೆ.

ನಿಯಂತ್ರಣಕ್ಕೆ ಆನೆ ಕಂದಕ ಹಾಗೂ ಸೋಲಾರ್ ತಂತಿ ಬೇಲಿಯನ್ನು ಅಳವಡಿಸಲು ಸರ್ಕಾರಕ್ಕೆ ಈ ಸಾಲಿನಲ್ಲಿ ರೂ.25 ಕೋಟಿ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದರು. ಸಮಸ್ಯೆಗೆ ಕಾರಣ: ಅರಣ್ಯದಲ್ಲಿ ಬಿದಿರು ಕಡಿಮೆಯಾಗುತ್ತಿವ ಹಿನ್ನೆಯಲ್ಲಿ ಆನೆಗಳು ಆಹಾರ ಹುಡಿಕಿಕೊಂಡು ಕಾಫಿ ತೋಟಗಳತ್ತ ಧಾವಿಸುತ್ತಿವೆ. ಬಾಳೆ, ಹಲಸು ಹಾಗೂ ಇನ್ನಿತರ ಹಣ್ಣಿನ ವಾಸನೆ ಆನೆಗಳನ್ನು ತಮ್ಮತ್ತ ಸೆಳೆಯುತ್ತಿವೆ. ಕಾಡಾನೆಗಳು ಕಾಫಿ ತೋಟಕ್ಕೆ ನುಗ್ಗಿದಾಗ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಬಲಿಯಾ ಗುತ್ತಿದ್ದಾರೆ. ಕಳೆದ 10 ವರ್ಷಗಳ ಅವಧಿಯಲ್ಲಿ 70ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.