ಭಾನುವಾರ, ಮೇ 16, 2021
22 °C

ಕಾಡಾನೆ ದಾಳಿಗೆ ಭಯ: ಗುಂಡಿಗೆ ಬಿದ್ದು ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕಾಡಾನೆಗಳ ದಾಳಿಗೆ ಹೆದರಿ ಗುಂಡಿಗೆ ಬಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಿಕ್ಕಹೊಳೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಬುಧವಾರ ನಡೆದಿದೆ.ವೆಂಕಟಯ್ಯನಛತ್ರ ಗ್ರಾಮದ ಕೃಷ್ಣಶೆಟ್ಟಿ(20) ಮೃತಪಟ್ಟ ದುರ್ದೈವಿ. ಬೆಳಿಗ್ಗೆ ಕಾಡಾನೆಗಳ ಹಿಂಡು ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಬೀಡುಬಿಟ್ಟಿದ್ದವು. ಸುತ್ತಮುತ್ತಲಿನ ಜಮೀನಿನ ರೈತರು ಆನೆಗಳನ್ನು ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದರು. ಮೃತ ಕೃಷ್ಣಶೆಟ್ಟಿ ಕೂಡ ಹಿನ್ನೀರು ಪ್ರದೇಶದಲ್ಲಿಯೇ ಜಮೀನು ಹೊಂದಿದ್ದು, ಕಾಡಾನೆ ಓಡಿಸಲು ಹೋಗಿದ್ದಾರೆ. ಆ ವೇಳೆ ಆನೆಗಳು ನಾಗರಿಕರ ಮೇಲೆ ದಾಳಿಗೆ ಮುಂದಾಗಿವೆ. ಆನೆ ಯೊಂದು ಅಟ್ಟಿಸಿಕೊಂಡ ಬಂದ ವೇಳೆ ಆಘಾತಗೊಂಡ ಕೃಷ್ಣಶೆಟ್ಟಿ ಗುಂಡಿ ಯೊಂದಕ್ಕೆ ಬಿದ್ದು ಮೃತಪಟ್ಟಿದ್ದಾರೆ.ಹುಲಿ ದಾಳಿ: 5 ಕಾಡಾನೆ ಮರಿ ಬಲಿಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವಿವಿಧ ವಲಯಗಳಲ್ಲಿ ಹುಲಿಯೊಂದು ದಾಳಿ ನಡೆಸಿ ಕಾಡಾನೆ ಮರಿಗಳನ್ನು ಕೊಂದು ಹಾಕಿರುವ ಘಟನೆ ಈಚೆಗೆ ಜರುಗಿದೆ.ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಹೆಡಿಯಾಲ, ಬಂಡೀಪುರ ಹಾಗೂ ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಸುಮಾರು 1 ರಿಂದ 2 ವರ್ಷಗಳ ಕಾಡಾನೆ ಮರಿಗಳ ಮೇಲೆ ಹುಲಿಯೊಂದು ದಾಳಿ ನಡೆಸಿದ ಪರಿಣಾಮ 4 ಕಾಡಾನೆ ಮರಿ ಗಳು ಅಸುನೀಗಿದ್ದು, ಒಂದು ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಂದು ಚಿಕಿತ್ಸೆ ನೀಡಿದ್ದರು. ಆದರೆ ಅದು ಕೂಡ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದೆ.ಅರಣ್ಯ ಪ್ರದೇಶದ ಒಳಭಾಗದಲ್ಲಿ ದಾಳಿ ನಡೆಸಿರುವ ಕಾರಣ ಹಲವು ದಿನಗಳವರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗೂ ಈ ವಿಷಯ ತಿಳಿಯದೇ ನಂತರ ಕ್ರಮ ಕೈಗೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.