ಕಾಡಾನೆ ದಾಳಿ: ಫಸಲು ನಾಶ-ಜನರ ಆಕ್ರೋಶ

7

ಕಾಡಾನೆ ದಾಳಿ: ಫಸಲು ನಾಶ-ಜನರ ಆಕ್ರೋಶ

Published:
Updated:

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಡಂಚಿನ ನಾಲ್ಕು ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಹೊಲಗಳ ಮೇಲೆ ದಾಳಿ ಇಟ್ಟು ಲಕ್ಷಾಂತರ ಮೌಲ್ಯದ ಫಸಲು ನಾಶ ಮಾಡಿವೆ ಎಂದು ಹನಗೋಡು ಹೋಬಳಿಕ ಕಿರಂಗೂರು  ಗ್ರಾಮಸ್ಥರು ತಿಳಿಸಿದ್ದಾರೆ.ಹನಗೋಡು ಹೋಬಳಿಯ ಕಾಡಂಚಿನ ಗ್ರಾಮಗಳಾದ ಕೊಳುವಿಗೆ, ಚಿಕ್ಕ ಹೆಜ್ಜೂರು, ದೊಡ್ಡಹೆಜ್ಜೂರು, ಮುದುಗನೂರು, ದಾಸನಪುರ, ಭರತವಾಡಿ ಮತ್ತು ಗಿರಿಜನ ಹಾಡಿಗಳ ಭಾಗದಲ್ಲಿ ದಿನವೂ ಕಾಡಾನೆ ಹಾಳಿ ಹೆಚ್ಚಿದ್ದು, ರೈತರು ಬೆಳೆದ ಮುಸುಕಿನ ಜೋಳ, ಬತ್ತ, ಶುಂಠಿ, ಅರಿಶಿಣ ಫಸಲು ಆನೆ ದಾಳಿಯಿಂದ ಸಂಪೂರ್ಣ ನಾಶವಾಗಿದ್ದು, ಇದು ನುಂಗಲಾರದ ತುತ್ತಾಗಿದೆ ಎಂದು ತಿಳಿಸಿದ್ದಾರೆ.ಕಾಡಂಚಿನ ಗ್ರಾಮಗಳಲ್ಲಿ ರಾತ್ರಿ ಆನೆ ಕಾವಲಿಗೆ ಉದ್ಯೋಗ ಖಾತ್ರಿಯಲ್ಲಿ ಸಿಬ್ಬಂದಿ ನೇಮಕ ಮಾಡಿದ್ದರು. ಈಚೆಗೆ ಅರಣ್ಯ ಇಲಾಖೆ  ಯೋಜನೆಯಲ್ಲಿ ನೇಮಕ ಮಾಡಿಕೊಳ್ಳದೆ ರೈತನ ಫಸಲು ಕಾಡು ಪ್ರಾಣಿ ಪಾಲಾಗುತ್ತಿದೆ ಎಂದು ರೈತ ರುದ್ರಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry