ನನ್ನಮ್ಮ ಸಿಂಹಿಣಿಯಂತೆ. ಅಮ್ಮನಿರದಿದ್ದರೆ ನಾನಿವೊತ್ತು ಜೀವಸಹಿತ ಇರುತ್ತಿದ್ದೆನೋ ಇಲ್ಲವೋ? ನನಗೆ ಈ ವ್ಯಕ್ತಿತ್ವ ನೀಡಲು ಕಾರಣರಾಗಿರುವ ಅಮ್ಮ ಹಾಗೂ ಅಪ್ಪನಿಗೆ ಸಮರ್ಪಿಸಿಯೇ ಅರೇಬಿಕ್ ಹಾಗೂ ಉರ್ದು ಭಾಷೆ ಮತ್ತು ಸಂಸ್ಕೃತಿಯ ಅಕಾಡೆಮಿಯನ್ನು ಆರಂಭಿಸುತ್ತಿದ್ದೇನೆ. ಹೀಗೆ ಹೇಳಿದ್ದು ಕಾದರ್ ಖಾನ್.

ಹುಟ್ಟಿದ್ದು ಅಫ್ಘಾನಿಸ್ತಾನದ ಕಾಬುಲ್ನಲ್ಲಿ. ಆದರೆ ಅವರಮ್ಮನಿಗೆ ಅಲ್ಲಿಯ ಜೀವನ ಅಸುರಕ್ಷಿತವೆನಿಸಿ, ಮುಂಬೈಗೆ ಬಂದರು. ಆ ಕಾಲದಲ್ಲಿ ಕೆಂಪುದೀಪದಡಿಯ ಸ್ಲಂನಲ್ಲಿ ದುಡಿಯುತ್ತ ಅಮ್ಮ ಓದುವುದನ್ನು ಬರೆಯುವುದನ್ನು ಕಲಿಸಿದರು.

ಒಮ್ಮೆ ಬಡತನದಿಂದ ಬೇಸತ್ತು ಟಿನ್ಶೆಡ್ಗಳ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲೂ ಖಾನ್ ಯತ್ನಿದ್ದರು. ಆದರೆ ನಂತರ ಅವರಮ್ಮ ಶಿಕ್ಷಣದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರ ಕಷ್ಟ ಪಡುತ್ತಲೇ ಎಂಜಿನಿಯರಿಂಗ್ ಮುಗಿಸಿದೆ. ಕೆಲ ಸಮಯ ಮುಂಬೈನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರು ಆಗಿದ್ದೆ.

1974ರಲ್ಲಿ ಮನ್ಮೋಹನ್ ದೇಸಾಯಿ `ರೋಟಿ~ ಚಿತ್ರಕ್ಕೆ ಸಂಭಾಷಣೆ ಬರೆಯಲು ಹೇಳಿ 1 ಲಕ್ಷ 21 ಸಾವಿರ ರೂಪಾಯಿ ಸಂಭಾವನೆ ನೀಡಿದ್ದರು. ಅದು ಆ ಕಾಲಕ್ಕೆ ಬಲು ದೊಡ್ಡ ಮೊತ್ತವಾಗಿತ್ತು.

ನಂತರ ಅಮಿತಾಬ್ ಬಚ್ಚನ್ನ ಬಹುತೇಕ ಚಿತ್ರಗಳಿಗೆ ಕಾದರ್ಖಾನ್ ಸಂಭಾಷಣೆ ಬರೆದರು. ನಸೀಬ್, ಅಗ್ನಿಪಥ್ ಸೇರಿದಂತೆ, ಸತ್ತೆಪೆ ಸತ್ತಾ, ಹಮ್, ಇನ್ಕಿಲಾಬ್, ಖೂನ್ ಪಸೀನಾ, ದೋ ಔರ್ ದೋ ಪಾಂಚ್ ಮುಂತಾದ ಚಿತ್ರಗಳಿಗೆ ಸಂಭಾಷಣೆಯನ್ನು ಬರೆದರು. `

ಹಿಮ್ಮತ್ವಾಲಾ, ಕೂಲಿ ನಂ1, ಕರ್ಮಾ, ಸಲ್ತನತ್, ಸರ್ಫರೋಷ್ ಚಿತ್ರದ ಸಂಭಾಷಣೆಗಳನ್ನೂ ಕಾದರ್ಖಾನ್ ಅವರೇ ಬರೆದದ್ದು.ಉರ್ದು ಹಾಗೂ ದಕ್ಖನಿ ಹಿಂದಿ ಭಾಷೆಯ ಬಳಕೆ ಇವರ ಬರವಣಿಗೆಯಲ್ಲಿ ಹಾಸುಹೊಕ್ಕಿತ್ತು.

ಅರೇಬಿಕ್ ಭಾಷೆ ಅಥವಾ ಉರ್ದು ಭಾಷಾ ಕಲಿಕೆಯಿಂದಲೇ ಇಸ್ಲಾಂ ಬಗೆಗಿರುವ ತಪ್ಪು ಅಭಿಪ್ರಾಯಗಳನ್ನು ತೊಲಗಿಸಬಹುದು ಎಂಬುದು ಕಾದರ್ಖಾನ್ ಅಭಿಪ್ರಾಯವಾಗಿದೆ.

ಈ ನಿಟ್ಟಿನಲ್ಲಿ ಅರೇಬಿಕ್, ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಕೆಕೆ ಇನ್ಸ್ಟಿಟ್ಯೂಟ್ ಆಫ್ಅರೇಬಿಕ್ ಭಾಷೆ ಮತ್ತು ಇಸ್ಲಾಮಿಕ್ ಕಲ್ಚರ್ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ದುಬೈನಲ್ಲಿ ಅಲ್ಪಾವಧಿಯ ಹಾಗೂ ಸುದೀರ್ಘ ಅವಧಿಯ ಕೋರ್ಸುಗಳನ್ನು ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಅರೇಬಿಕ್ ಭಾಷೆ ಹಾಗೂ ಸಂಸ್ಕೃತಿಯೊಂದಿಗೆ ಬೆಸೆಯಲು ಇಷ್ಟ ಪಡುವ ಎಲ್ಲ ವಿದೇಶಿಗರಿಗಾಗಿ ಈ ಸಂಸ್ಥೆ ಶ್ರಮಿಸಲಿದೆ. ಇದಕ್ಕಾಗಿ ಉರ್ದು ಹಾಗೂ ಅರೇಬಿಕ್ ಸಾಹಿತ್ಯವನ್ನು ಸರಳಗೊಳಿಸಿ ಪಠ್ಯವನ್ನು ಸಿದ್ಧ ಪಡಿಸಿದ್ದೇನೆ ಎಂದು ಹೇಳಿದ್ದಾರೆ.

ಸದ್ಯ ದುಬೈನಲ್ಲಿ ಈ ಸಂಸ್ಥೆ ಕಾರ್ಯಾರಂಭ ಮಾಡಿದ್ದು, ಟೊರಾಂಟೊದಲ್ಲಿಯೂ ಆರಂಭಿಸುವುದಾಗಿ ಖಾನ್ ತಿಳಿಸಿದ್ದಾರೆ. ಮುಂದಿನ ವರ್ಷ ಭಾರತಕ್ಕೆ ಹಿಂದಿರುಗಲಿದ್ದು, ಇಲ್ಲಿಯೂ ಆಸಕ್ತರಿಗಾಗಿ ತರಬೇತಿ ಶಿಬಿರಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.

ಅಂದಾಜ್ ಅಪ್ನಾ ಅಪ್ನಾದ ಎರಡನೆಯ ಭಾಗವನ್ನು ಸಿದ್ಧಪಡಿಸುತ್ತಿರುವುದಾಗಿ ಬಾಲಿವುಡ್ನಲ್ಲಿ ಸುದ್ದಿ ಹಬ್ಬಿತ್ತು. ಈ ಬಗ್ಗೆ ವಿಚಾರಿಸಿದಾಗ, ಸದ್ಯಕ್ಕೆ ಲೇಖಕನಾಗಿ ನಾನು ಯಾವ ಕೆಲಸವನ್ನೂ ಮಾಡುತ್ತಿಲ್ಲ.

ಅದೆಲ್ಲವೂ ಗಾಳಿ ಸುದ್ದಿ ಮಾತ್ರ. ಈಗ ಅಪ್ಪ ಅಮ್ಮನಿಗೆ ಸಮರ್ಪಿಸಿರುವ ಈ ಸ್ಥೆಗಾಗಿಯೇ ನನ್ನ ಬದುಕನ್ನು ಮೀಸಲಿಡುತ್ತೇನೆ ಎಂದೂ ಅವರು ಸ್ಪಷ್ಟ ಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.