ಬುಧವಾರ, ಮೇ 12, 2021
26 °C
ಎಸ್‌ಸಿಪಿ ಯೋಜನೆಯಡಿಯ ರಸ್ತೆ ಅಭಿವೃದ್ಧಿ

ಕಾಮಗಾರಿಗೆ ಗುದ್ದಲಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ:  ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಪರಿಶಿಷ್ಟ ಕಾಲೋನಿಯಲ್ಲಿ ರೂ. 75ಲಕ್ಷ ವೆಚ್ಚದ ಎಸ್‌ಸಿಪಿ ಯೋಜನೆಯಡಿಯ  ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಇಪಿ ಯೋಜನೆಯಡಿ 4 ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕ್ಯಾತನಹಳ್ಳಿಯಲ್ಲಿ ರೂ. 20ಲಕ್ಷ, ಹರವು ಗ್ರಾಮದಲ್ಲಿ ರೂ. 15 ಲಕ್ಷ, ಚಿಕ್ಕಾಯಿರಹಳ್ಳಿಯಲ್ಲಿ ರೂ. 25ಲಕ್ಷ ಹಾಗೂ ಡಾಮಡಹಳ್ಳಿಯಲ್ಲಿ ರೂ.15ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.ಗುಣಮಟ್ಟ ಕಾಯ್ದುಕೊಳ್ಳಿ : ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಜತೆಗೆ ಕೆಲಸವನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಪುಟ್ಟಣ್ಣಯ್ಯ ಅವರು, ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಜಿ.ಪಂ. ಸದಸ್ಯ ಎ.ಎಲ್. ಕೆಂಪೂಗೌಡ, ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾವತಿ, ಮಾಜಿ ಉಪಾಧ್ಯಕ್ಷ ರಮೇಶ್, ರೈತ ಸಂಘದ ಗ್ರಾಮ ಘಟಕ ಅಧ್ಯಕ್ಷ ರವಿಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಎಸ್. ದಯಾನಂದ್, ಮುಖಂಡರಾದ ಬಿ.ಟಿ.ಮಂಜು, ಅಮೃತಿ ರಾಜಶೇಖರ್, ವಿಜಯಕುಮಾರ್, ಗುತ್ತಿಗೆದಾರ ವಿಜೇಂದ್ರಮೂರ್ತಿ, ಕಾವೇರಿ ನೀರಾವರಿ ನಿಗಮದ ಎಇಇ ಗುರುಮೂರ್ತಿ, ಎಇ ಗೋವಿಂದ ರಾಜು, ಆನಂದ್, ಜ್ಞಾನಮೂರ್ತಿ, ಜೆಇ ಹೊನ್ನೋಜಿರಾವ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.