ಗುರುವಾರ , ಮೇ 13, 2021
40 °C
ಇಬ್ಬರ ಬಂಧನ: 12.70 ಲಕ್ಷ ಮೌಲ್ಯದ ವಸ್ತು ವಶ

ಕಾರ್ಖಾನೆ ಬಿಡಿ ಭಾಗ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕಾರ್ಖಾನೆಗಳ ಬಿಡಿ ಭಾಗಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಉದ್ಯಮಬಾಗ ಠಾಣೆ ಪೊಲೀಸರು, ಅವರಿಂದ 12.70 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಉದ್ಯಮಬಾಗದ ನಿವಾಸಿಗಳಾದ ಬಸಪ್ಪ ಕರ್ಕಾಳಿ ಹಾಗೂ ಬಸವರಾಜ ಗುಜನಾಳ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಒಂದು ಟಿಪ್ಪರ್, ಒಂದು ಟಾಟಾ ಸುಮೋ, ಕಬ್ಬಿಣದ ಕಲ್ಲುಗಳು ಸೇರಿದಂತೆ ಒಟ್ಟು 12.70 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ದಾಮೋದರ್ ಎಂಜಿನಿಯರಿಂಗ್ ವರ್ಕ್ಸ್ ಹಾಗೂ ಬೆಳಗಾವಿ ಕೋಲ್ ಆ್ಯಂಡ್ ಕೋಕ್ ಗ್ರಾಹಕರ ಸಂಘದ ಕಾರ್ಖಾನೆಗಳಲ್ಲಿನ ಬಿಡಿ ಭಾಗಗಳ ಕಳ್ಳತನ ನಡೆದ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ಉದ್ಯಮಬಾಗ ಠಾಣೆಯಲ್ಲಿ ದಾಖಲಾಗಿತ್ತು.ಈ ಕುರಿತು ತನಿಖೆ ಕೈಗೊಂಡ ಉದ್ಯಮಬಾಗ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅರುಣಕುಮಾರ ಕೋಳೂರ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರಾಜಪ್ಪ ನಾಯಕ, ಎಎಸ್‌ಐ ಡಿ.ಡಿ. ಭಾವಿಹಾಳ, ಸಿ.ಎಂ. ಲಕ್ಷ್ಮೇಶ್ವರ, ವಿಜಯ ಬಡವನ್ನವರ, ಕೆ.ಕೆ. ಸವದತ್ತಿ, ವಿ.ಎಂ. ದಾನವಾಡ ಹಾಗೂ ಎಸ್.ಕೆ. ಗುಂಡ್ಲೂರ ನೇತೃತ್ವದ ತಂಡವು ಆರೋಪಿಗಳಾದ ಬಸಪ್ಪ ಹಾಗೂ ಬಸವರಾಜ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಎರಡು ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ತಿಳಿಸಿದ್ದಾರೆ.ಅಪಘಾತ: ಬೈಕ್ ಸವಾರ ಸಾವು

ಬೆಳಗಾವಿ: ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕಾಕತಿಯ ನಿವಾಸಿ ರಮೇಶ ತುಮರಿ (24) ಮೃತಪಟ್ಟಿದ್ದು ಹಿಂಬದಿ ಸವಾರ ಅಮರ ತುಮರಿ (24) ತೀವ್ರವಾಗಿ ಗಾಯಗೊಂಡಿದ್ದಾನೆ.ಲಾರಿ ಚಾಲಕ ಖಾನಾಪುರದ ನಿವಾಸಿ ಉಮೇಶ ಪಾಟೀಲ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.