ಮಂಗಳವಾರ, ಮೇ 11, 2021
21 °C
ಬಾಳ್ಕುದ್ರು ಶ್ರೀಮಠ ಗುರುಗಳ ಆರಾಧನೆ

ಕಾರ್ಯಕ್ರಮಕ್ಕೆ ಹಿತರಕ್ಷಣಾ ಸಮಿತಿಯ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ಭಾಗವತ ಸಂಪ್ರದಾಯದ ಶಿವಳ್ಳಿ ಸ್ಮಾರ್ತ, ಕಂದಾವರ ಬ್ರಾಹ್ಮಣರ ಏಕೈಕ ಗುರುಮಠವಾದ ಬಾಳೇಕುದ್ರು ಮಠದಲ್ಲಿ ಕೆಲವು ಕುತಂತ್ರಗಾರರ ಪ್ರೇರಣೆಯಿಂದ ಪೀಠಸ್ಥರಿಂದ ಕೆಲವೊಂದು ಅಹಿತಕರ ಘಟನೆಗಳು ನಡೆದು ವೈದಿಕ ಪರಂಪರೆಗೆ ವ್ಯತಿರಿಕ್ತವಾದ ಅಪಚಾರಗಳು ಕಾಣಿಸಿಕೊಂಡ ಕಾರಣ ಇದೇ 28ರಂದು ಶ್ರೀಮಠದಲ್ಲಿ ನಡೆಯುವ ಹಿಂದಿನ ಗುರುಗಳ ಆರಾಧನಾ ಕಾರ್ಯಕ್ರಮ ಮತ್ತು ಮುಂದೆ ಮಠದಲ್ಲಿ ನಡೆಯುವ ಯಾವುದೇ ಸಮಾರಂಭದಲ್ಲಿ ಮಠದ ಶಿಷ್ಯವೃಂದ ಭಾಗವಹಿಸದೇ ತಟಸ್ಥವಾಗಿರುವಂತೆ ಬಾಳೇಕುದ್ರು ಶ್ರೀಮಠ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಹೃಷಿಕೇಶ ಬಾಯರಿ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2002ರಲ್ಲಿ ಪೀಠಸ್ಥ ಶಂಕರಾಶ್ರಮ ಸ್ವಾಮೀಜಿ ಬ್ರಹ್ಮೈಕ್ಯರಾದಾಗ ಶಿಷ್ಯ ವೃಂದ ಪೀಠಾರೋಹಣ ಸಮಿತಿ ಚಿಕ್ಕಮಗಳೂರು ಜಿಲ್ಲೆಯ ಬಿಳಾಲುಕೊಪ್ಪ ವಾಸಿ ಧನಂಜಯ ಉಡುಪ ಅವರನ್ನು ಆಯ್ಕೆಮಾಡಿ ಶೃಂಗೇರಿ ಜಗದ್ಗುರಗಳ ಉಪಸ್ಥಿತಿಯಲ್ಲಿ ಅವರ ನಿರ್ದೇಶನದಂತೆ ಹೆಬ್ಬೂರು ಕೋದಂಡಾಶ್ರಮ ಮಠಾಧೀಶರಿಂದ ಸನ್ಯಾಸ ದೀಕ್ಷೆ ನೀಡಿ ನೃಸಿಂಹಾಶ್ರಮ ಸ್ವಾಮಿಗಳೆಂಬ ಅಭಿಧಾನದಿಂದ ಪೀಠಾರೋಹಣ ಮಾಡಿಸಿದರು.ನಂತರ ಶಿಷ್ಯವೃಂದವರ ಪ್ರೋತ್ಸಾಹದಿಂದ ಗಣನೀಯ ಅಭಿವೃದ್ಧಿ ಹೊಂದಿದರೂ ಮಠದಲ್ಲಿ ಅಪಚಾರಗಳು ಕಾಣಿಸಿಕೊಂಡವು ಎಂದರು.ನಿರಾಶೆಗೊಂಡ ಶಿಷ್ಯವೃಂದ ಹಿತರಕ್ಷಣಾ ಸಮಿತಿಯನ್ನು ಸ್ಥಾಪಿಸಿ ವಿಷಯದ ಕುರಿತು ಸ್ಪಷ್ಟೀಕರಣ ಕೇಳಿದರೂ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಈ ಬಗ್ಗೆ ಶೃಂಗೇರಿ ಜಗದ್ಗುರುಗಳಿಗೂ ತಿಳಿಸಲಾಗಿದೆ. ಶಿಷ್ಯರಿಂದಾಗಿಯೇ ಅಸ್ತಿತ್ವದಲ್ಲಿರುವುದರಿಂದ ಶಿಷ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಆದೇಶಿಸಿದ್ದರೂ, ಶ್ರೀಗಳು ಈವರೆಗೆ ಶಿಷ್ಯವೃಂದದವರೊಂದಿಗೆ ಸಮಾಲೋಚಿಸಿಲ್ಲ ಎಂದು ಆರೋಪಿಸಿದರು.ಈ ಎಲ್ಲಾ ಕಾರಣ ಮಠದ ಶಿಷ್ಯ ವೃಂದ ಬಾಳೇಕುದ್ರು ಗುರುಪೀಠವನ್ನು ಅವಗಣನೆಗೆ ತೆಗೆದುಕೊಂಡು ಶ್ರೀಗಳಿಗೆ ಗೌರವ ಸಲ್ಲಿಸದೇ ವ್ಯವಸ್ಥೆ ಸರಿಯಾಗುವವರೆಗೆ ಶೃಂಗೇರಿ ಪೀಠಕ್ಕೇ ಮಾನ್ಯತೆ ನೀಡುವುದಾಗಿ ಸಮಿತಿ ನಿರ್ಧರಿಸಿದೆ ಎಂದು ಅವರು ತಿಳಿಸಿದರು.ಗೋಷ್ಠಿಯಲ್ಲಿ ಬಾರ್ಕೂರು ರಮೇಶ್ ಭಟ್, ಶ್ರೀನಿವಾಸ ಭಟ್ ಆರೂರು, ವಿಶ್ವನಾಥ ಉಡುಪ ಮಂದಾರ್ತಿ, ಶಾನಾಡಿ ಶ್ರೀನಿವಾಸ ಭಟ್, ಎ.ವಿಶ್ವನಾಥ ಉಡುಪ, ಗಣೇಶ್ ಭಟ್ ಕೋಟ, ಗೋಪಾಲಕೃಷ್ಣ ಉಡುಪ, ಸುರೇಶ್ ಅಡಿಗ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.