ಮಾಗಡಿ: ತಾಲ್ಲೂಕಿನ ಕುದೂರು ಹೋಬಳಿಯ ಕಣ್ಣೂರು ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ದಲಿತರ ಕಾಲೋನಿಯಲ್ಲಿ ಮೂಲಭೂತ ಸವಲತ್ತುಗಳನ್ನು ದೊರಕಿಸಿಕೊಡುವಂತೆ ಕಾಲೊನಿಯ ನಿವಾಸಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

`ಕಾಲೋನಿಯಲ್ಲಿ ಇರುವ ಹೆಂಚಿನ ಮನೆಗಳು ಕಳಪೆಯಾಗಿವೆ. ಯಾವುದೇ ಸಮಯದಲ್ಲಿ ಕುಸಿದು ಬೀಳುವ ಅಪಾಯಕರ ಸ್ಥಿತಿಯಲ್ಲಿವೆ~ ಎಂದ ಗ್ರಾಮದ ಹಿರಿಯರಾದ ಸಿದ್ಧಮ್ಮ ಪತ್ರಿಕೆಯೊಂದಿಗೆ ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ.

`ಕುಡಿಯುವ ನೀರು, ರಸ್ತೆ, ಬೀದಿ ದೀಪಗಳಿಲ್ಲದೆ ನಿವಾಸಿಗಳು ಪರಿತಪಿಸುತ್ತಿದ್ದೇವೆ~ ಎಂದು ಗ್ರಾಮದ ಹಿರಿಯರು ತಮ್ಮ ಸಮಸ್ಯೆಗಳನ್ನು ಬಿಡಿಸಿಟ್ಟರು.

ಕೆಲವು ವರ್ಷಗಳ ಹಿಂದೆ ಸರ್ಕಾರ ಈ ಕಾಲೊನಿ ಜನರಿಗೆ ಹೆಂಚಿನ ಮನೆಗಳು ನೀಡಿದೆ. ಅವುಗಳು ಈಗ ಅಲ್ಪಸ್ವಲ್ಪ ಮಳೆ ಬಿದ್ದರೂ ಸಾಕು ಸೋರುತ್ತವೆ. ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ದೂರದ ತೋಟಗಳ ಕೊಳವೆ ಬಾವಿಗಳಿಂದ ನೀರು ಸಂಗ್ರಹಿಸಿ ತರಬೇಕಿದೆ. ಕೂಲಿ ಮಾಡುತ್ತಿರುವ, ಕಡು ಬಡವರೇ ಹೆಚ್ಚಾಗಿ ವಾಸವಿರುವ ಈ ಕಾಲೊನಿಗೆ ಮೂಲಭೂತ ಸವಲತ್ತುಗಳನ್ನು ದೊರಕಿಸಿಕೊಡುವಂತೆ ನಿವಾಸಿಗಳು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿರುವ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಿಕ್ಕಣ್ಣ ಅವರು, ವಿದ್ಯುತ್ ಇಲ್ಲದೆ ರಾಜ್ಯದ ಎಲ್ಲಾ ಕಡೆ ನೀರಿನ ಸಮಸ್ಯೆ ತಲೆದೋರಿದೆ. ಆದರೂ ಗ್ರಾಮದ ದಲಿತ ಸಮುದಾಯದವರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಚಿಕ್ಕಣ್ಣ ತಿಳಿಸಿದ್ದಾರೆ.

ಅಪರಿಚಿತ ಶವ ಪತ್ತೆ
ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯ ಕೆರೆಯಲ್ಲಿ ಬೆಳೆದಿರುವ ಜೊಂಡು ಹುಲ್ಲಿನ ನಡುವೆ ಇರುವ ನೀರಿನ್ಲ್ಲಲಿ ಅಪರಿಚಿತ ಗಂಡಸಿನ ಶವ ಗುರುವಾರ ಸಂಜೆ ಪತ್ತೆಯಾಗಿದೆ. ದೇಹವು ಕೊಳೆತ ಸ್ಥಿತಿಯ್ಲ್ಲಲಿದೆ.
ಮೃತನ ಗುರುತು ಪತ್ತೆಯಾಗಿಲ್ಲ. ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕತ್ತಲಾದ್ದರಿಂದ ಶುಕ್ರವಾರ ಬೆಳಿಗ್ಗೆ ಶವವನ್ನು ಕೆರೆಯ ನೀರಿನಿಂದ ಹೊರತೆಗೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕೆರೆಯ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಕೆರೆಯ ಅಂಗಳದಲ್ಲಿ ಸುಮಾರು 6 ಅಡಿ ಎತ್ತರದ ಜೊಂಡುಹುಲ್ಲು ಬೆಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.