ಭಾನುವಾರ, ಮಾರ್ಚ್ 7, 2021
22 °C

ಕಾಳುಮೆಣಸಿಗೆ ಅಂತರರಾಷ್ಟ್ರೀಯ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳುಮೆಣಸಿಗೆ ಅಂತರರಾಷ್ಟ್ರೀಯ ಬೇಡಿಕೆ

ಸಿದ್ದಾಪುರ: ‘ಕಾಳುಮೆಣಸು ಎಲ್ಲರೂ ಬಳಸುವ ಸಾಂಬಾರ ವಸ್ತುವಾಗಿರುವುದರಿಂದ ಬರುವ ವರ್ಷಗಳಲ್ಲಿ ಅದರ ಉತ್ಪಾದನೆ ಹೆಚ್ಚಾದರೂ ಬೇಡಿಕೆ ಕಡಿಮೆಯಾಗುವ ಸಂಭವ ಇಲ್ಲ’ ಎಂದು ಕಾಳುಮೆಣಸು ಮತ್ತು ಸಾಂಬಾರ ಬೆಳೆಗಳ ತಜ್ಞ ಡಾ.ವೇಣುಗೋಪಾಲ ಹೇಳಿದರು.ಸ್ಥಳೀಯ ತಾಲ್ಲೂಕು ಮಾರ್ಕೆಟಿಂಗ್ ಸೊಸೈಟಿ ಮತ್ತು ಶಿರಸಿಯ ಮಲೆನಾಡು ಸಾವಯವ ಕೃಷಿ ಪರಿವಾರದ ಆಶ್ರಯದಲ್ಲಿ ಪಟ್ಟಣದ ಟಿಎಂಎಸ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಳು ಮೆಣಸು ಮತ್ತು ಏಲಕ್ಕಿ ಬೆಳೆಗಳ ವಿಚಾರ ಸಂಕಿರಣದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.‘ಸದ್ಯ ಕಾಳು ಮೆಣಸು ಉತ್ಪಾದನೆಯಲ್ಲಿ ನಮ್ಮ ದೇಶ  ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಬರಲಿರುವ ವರ್ಷದಲ್ಲಿ ನಮ್ಮ ದೇಶ ಎರಡನೇ ಸ್ಥಾನಕ್ಕೆ ಬರಬಹುದು. ಸದ್ಯ ಉತ್ಪಾದನೆಗೊಳ್ಳುವ ಕಾಳುಮೆಣಸು ಬೆಳೆಯ ಎರಡೂವರೆ ಪಟ್ಟು ಬೆಳೆ ಹೆಚ್ಚಾದರೂ ಬೇಡಿಕೆ ಕಡಿಮೆಯಾಗ ಲಾರದು ಎಂಬ ನಿರೀಕ್ಷೆ ಇದೆ’ ಎಂದರು.ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಆರ್‌.ಎಂ.ಹೆಗಡೆ ಬಾಳೇಸರ ಮಾತನಾಡಿ, ‘ಅಡಿಕೆ ತೋಟದಲ್ಲಿ ಸಾಂಪ್ರದಾಯಕವಾಗಿ ಕಾಳು ಮೆಣಸು ಮತ್ತು ಏಲಕ್ಕಿಯನ್ನು ನಾವು ಬೆಳೆಯುತ್ತಿದ್ದೇವೆ. ಅಡಿಕೆ ತೋಟಿಗರಿಗೆ  ಸೊಪ್ಪಿನ ಬೆಟ್ಟವನ್ನು ಕಾಳು ಮೆಣಸು ಮತ್ತು ಏಲಕ್ಕಿಯ ಸಲುವಾಗಿಯೇ ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಬಿಡಲಾಗಿದೆ’ ಎಂದರು.‘ಇಂದು ಅಡಿಕೆ ತೋಟವನ್ನು ಪ್ಲಾಂಟೇಶನ್‌ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ರೈತರು ನೂರಾರು ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಒಂದು ಎಕರೆ ಅಥವಾ ಅದಕ್ಕಿಂತ ಕಡಿಮೆ ಪ್ರದೇಶದಲ್ಲಿ ಬೆಳೆಯುವ ಜಿಲ್ಲೆಯ ಅಡಿಕೆ ಬೆಳೆಗಾರರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ’ ಎಂದರು.ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್‌.ಬಿ.ಗೌಡ ಕಲ್ಲೂರು ವಿಚಾರ ಸಂಕಿರಣ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಲೆನಾಡು ಸಾವಯವ ಕೃಷಿ ಪರಿವಾರದ ಅಧ್ಯಕ್ಷ ರಾಮಚಂದ್ರ ಹೆಗಡೆ ನೀರ್ನಳ್ಳಿ, ಟಿಎಂಎಸ್ ಉಪಾಧ್ಯಕ್ಷ  ಎಂ.ಜಿ.ನಾಯ್ಕ, ನಿರ್ದೇಶಕ ಜಿ.ಎಂ.ಭಟ್ಟ ಕಾಜಿನಮನೆ ಉಪಸ್ಥಿತರಿದ್ದರು. ಜಿ.ಜಿ.ಹೆಗಡೆ ಬಾಳಗೋಡು ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.