ಗುರುವಾರ , ಜೂನ್ 24, 2021
22 °C

ಕಾಶ್ಮೀರ: ಮಧ್ಯಮ ಬಲದ ಭೂಕಂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಶ್ಮೀರ: ಮಧ್ಯಮ ಬಲದ ಭೂಕಂಪ

 

ಶ್ರೀನಗರ, (ಪಿಟಿಐ): ಕಾಶ್ಮೀರ ಕಣಿವೆಯಲ್ಲಿ ಸೋಮವಾರ ಬೆಳಿಗ್ಗೆ ಮಧ್ಯಮ ಬಲದ ಭೂಕಂಪ ಸಂಭವಿಸಿದೆ, ಆದರೆ ಇದುವರೆಗೆ ಯಾವುದೇ ಸಾವು-ನೋವು, ಆಸ್ತಿ-ಪಾಸ್ತಿ ಹಾನಿಯಾದ ಕುರಿತು ವರದಿಯಾಗಿಲ್ಲ.

ಕಾಶ್ಮೀರದ ವಾಯುವ್ಯ ದಿಕ್ಕಿನಲ್ಲಿ  ಬೆಳಿಗ್ಗೆ 11.35 ರ ಸಮಯದಲ್ಲಿ ದಾಖಲಾಗಿರುವ ಈ ಭೂಕಂಪದ ಪ್ರಮಾಣ ರಿಕ್ಷರ್ ಮಾಪಕದಲ್ಲಿ  5.6 ರಷ್ಟಿತ್ತು ಎಂದು ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.

ಈ ಭೂಕಂಪದ ಕೇಂದ್ರ ಬಿಂದು ಪಾಕಿಸ್ತಾನದ ವಶದಲ್ಲಿರುವ ಗಿಲ್ಗಿಟ್ ಪ್ರದೇಶದಲ್ಲಿದೆ ಎಂದೂ ಅದು ತಿಳಿಸಿದೆ. 

ಕಾಶ್ಮೀರದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿರುವ ಭೂಕಂಪದಿಂದ ಉಂಟಾದ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾದ ಬಗ್ಗೆ ಇದುವರೆಗೂ ಯಾವ ವರದಿಗಳೂ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.