ಮಂಗಳವಾರ, ಜನವರಿ 21, 2020
28 °C
‘ಕಯ್ಯಾರ ಕಿಞ್ಞಣ್ಣ ರೈ 100ರ ಸಂಭ್ರಮ’ದಲ್ಲಿ ಚಿದಾನಂದಮೂರ್ತಿ ಆಶಯ

ಕಾಸರಗೋಡು ಕರ್ನಾಟಕಕ್ಕೆ ಸೇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು ಕರ್ನಾಟಕಕ್ಕೆ ಸೇರಲಿ

ಬೆಂಗಳೂರು: ‘ಕಯ್ಯಾರ ಕಿಞ್ಞಣ್ಣ  ರೈ ಅವರ ಶತಮಾನೋತ್ಸವದ ಈ ಹೊತ್ತಿ­ನಲ್ಲಾದರೂ ಕಾಸರಗೋಡು ಕರ್ನಾ­ಟಕಕ್ಕೆ ಸೇರುವಂತಾಗ ಬೇಕು’ ಎಂದು ಹಿರಿಯ ಸಂಶೋಧಕ ಡಾ.ಎಂ.­ಚಿದಾನಂದ ಮೂರ್ತಿ ಆಶಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಯ್ಯಾರ ಕಿಞ್ಞಣ್ಣ ರೈ 100ರ ಸಂಭ್ರಮ’ ಸಮಾರಂಭದಲ್ಲಿ ಮಾತನಾಡಿದರು.‘ಕೆಲವರ ಹುನ್ನಾರದಿಂದ ಕಾಸರ­ಗೋಡು ಕರ್ನಾಟಕದ ಕೈತಪ್ಪಿತು. ಅದನ್ನು ವಾಪಾಸ್ಸು ಕರೆತರುವ ಕೆಲಸ­ವನ್ನು ಮುಖ್ಯಮಂತ್ರಿ ಅವರು ಮಾಡ­ಬೇಕಿದೆ. ಆಗ ಮಾತ್ರ  ಮಹಾನ್ ಕವಿ ಕಿಞ್ಞಣ್ಣ ರೈ ಅವರಿಗೆ ನಿಜ ಅರ್ಥದಲ್ಲಿ ಗೌರವ ಸಲ್ಲಿಸಿದಂತಾಗು-­ತ್ತದೆ’ ಎಂದು ಅಭಿಪ್ರಾಯಪಟ್ಟರು. ‘ತುಳು ಮಾತೃ ಭಾಷೆಯಾಗಿದ್ದರೂ, ಕನ್ನಡದ ಬಗ್ಗೆ ಅಪಾರ ಒಲವಿಟ್ಟು­ಕೊಂಡು, ಕಥನ ಕಾವ್ಯ, ಶಿಶು ಗೀತೆ­ಗಳನ್ನು ರಚಿಸಿದ್ದಾರೆ’ ಎಂದು ಶ್ಲಾಘಿಸಿದರು.ವಿಮರ್ಶಕ ಡಾ.ಬಸವರಾಜ ಕಲ್ಗುಡಿ, ‘ತುಳು, ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಅಗಾಧ ಪಾಂಡಿತ್ಯ ಗಳಿಸಿ­ದ್ದರೂ,  ಮಕ್ಕಳ ಭಾವಕೋಶ­ವನ್ನು ತೀಡುವಂತಹ ಸರಳ ಶಿಶುಗೀತೆ­ಗಳನ್ನು ರಚಿಸಿದ್ದಾರೆ’ ಎಂದು ಹೇಳಿದರು.‘ಕುವೆಂಪು, ಬೇಂದ್ರೆ ಅವರಿಗಿಂತ ವಿಭಿನ್ನ ಪರಿಕಲ್ಪನೆಯಿಟ್ಟುಕೊಂಡು ಕಾವ್ಯ ಕ್ಷೇತ್ರದಲ್ಲಿ ತೊಡಗಿಕೊಂಡರು.

ಕನ್ನಡಕ್ಕೂ ಅನ್ವಯಿಸುವಂತಹ ತುಳು­ವಿನ ಘನಾತ್ಮಕ ಕಲ್ಪನೆಯನ್ನು  ಕೊಡುಗೆ­ಯಾಗಿ ನೀಡಿದ್ದಾರೆ’ ಎಂದರು. ಮಂಗಳೂರು ಆಕಾಶವಾಣಿ ನಿರ್ದೇಶಕ ಡಾ.ವಸಂತಕುಮಾರ ಪೆರ್ಲ, ‘ಬಹು ಸಂಸ್ಕೃತಿಗೆ ಹೆಸರಾದ ದಕ್ಷಿಣ ಕನ್ನಡದಲ್ಲಿ ಸಮನ್ವಯತೆ ಸಾಧಿಸಿದ ಅದ್ಬುತ ಕವಿ’ ಎಂದರು.

ಪ್ರತಿಕ್ರಿಯಿಸಿ (+)