ಶುಕ್ರವಾರ, ಮೇ 7, 2021
24 °C

ಕಿಂಗ್ಸ್ ಇಲೆವೆನ್ ಎದುರು ಗೆದ್ದ ರಾಜಸ್ತಾನ ರಾಯಲ್ಸ್:ರಹಾನೆ ಅಬ್ಬರದ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಪಿಟಿಐ): ಅಜಿಂಕ್ಯ ರಹಾನೆ ಐಪಿಎಲ್‌ನ ಐದನೇ ಅವತರಣಿಕೆಯ ಟೂರ್ನಿಯಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ಗೌರವ ಪಡೆಯುವಲ್ಲಿ ಅಲ್ಪದರಲ್ಲೇ ಎಡವಿದರು. ಆದರೆ ಅವರು ಗಳಿಸಿದ 98 ರನ್‌ಗಳ ನೆರವಿನಿಂದ ರಾಜಸ್ತಾನ ರಾಯಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಭರ್ಜರಿ ಗೆಲುವು ಸಾಧಿಸಿತು.ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಯಲ್ಸ್ ನೀಡಿದ 192 ರನ್‌ಗಳ ಕಠಿಣ ಗುರಿಗೆ ಉತ್ತರವಾಗಿ ಕಿಂಗ್ಸ್ ಇಲೆವೆನ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 160 ರನ್ ಗಳಿಸುವಲ್ಲಿ ಮಾತ್ರ ಸಫಲವಾಯಿತು.ದೊಡ್ಡ ಗುರಿ ಎದುರು ಪಂಜಾಬ್ ತಂಡ ಆರಂಭದಿಂದಲೇ ತಡವರಿಸಿತು. ಅದಕ್ಕೆ ಕಾರಣ ಆತಿಥೇಯ ರಾಯಲ್ಸ್‌ನ ಕೆವೋನ್ ಕೂಪರ್ (25ಕ್ಕೆ4) ಹಾಗೂ ಅಂಕಿತ್ ಚವಾಣ್ (28ಕ್ಕೆ2) ಅವರ ಪ್ರಭಾವಿ ಬೌಲಿಂಗ್ ದಾಳಿ. ನಾಯಕ ಗಿಲ್‌ಕ್ರಿಸ್ಟ್ (18 ಎಸೆತಗಳಲ್ಲಿ 27) ಹಾಗೂ ಮನ್‌ದೀಪ್ ಸಿಂಗ್ (25 ಎಸೆತಗಳಲ್ಲಿ 34) ಅವರ ಹೋರಾಟ ಸಾಕಾಗಲಿಲ್ಲ.ರಹಾನೆ ಮಿಂಚು:
ಮೊದಲು ಬ್ಯಾಟ್ ಮಾಡಿದ್ದ ರಾಹುಲ್ ದ್ರಾವಿಡ್ ನೇತೃತ್ವದ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 191 ರನ್ ಗಳಿಸಿತ್ತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ  ರಾಯಲ್ಸ್ ಬೃಹತ್ ಮೊತ್ತ ಪೇರಿಸಲು ಕಾರಣರಾದದ್ದು ರಹಾನೆ. ಎದುರಾಳಿ ತಂಡದ ಎಲ್ಲಾ ಬೌಲರ್‌ಗಳನ್ನು ಅವರು ಸಮರ್ಥವಾಗಿ ಮೆಟ್ಟಿನಿಂತರು.ಕೇವಲ 66 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಆದರೆ ಶತಕಕ್ಕೆ ಕೇವಲ ಎರಡು ರನ್‌ಗಳು ಬೇಕಿದ್ದಾಗ ಜೇಮ್ಸ ಫಾಕ್ನರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.ದ್ರಾವಿಡ್ (28, 24 ಎಸೆತ, 3 ಬೌಂ) ಮತ್ತು ರಹಾನೆ ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 77 ರನ್ ಸೇರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ರಹಾನೆ ಆ ಬಳಿಕ ಮೂರನೇ ವಿಕೆಟ್‌ಗೆ ಬ್ರಾಡ್ ಹಾಡ್ಜ್ (16 ಎಸೆತಗಳಲ್ಲಿ 21) ಜೊತೆ 75 ರನ್ ಕಲೆಹಾಕಿದರು. ಈ ಎರಡು ಜೊತೆಯಾಟಗಳಿಂದಾಗಿ ರಾಜಸ್ತಾನ ತಂಡದ ಮೊತ್ತ 200 ರನ್‌ಗಳ ಗಡಿಯ ಸನಿಹ ಬಂದು ನಿಂತಿತು.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.