ಮುಂಬೈ(ಪಿಟಿಐ): ಈಗಾಗಲೇ ಸಂಕಷ್ಟದಲ್ಲಿರುವ `ಕಿಂಗ್ಫಿಶರ್ ಏರ್ಲೈನ್ಸ್~ ಬುಧವಾರ ಮತ್ತಷ್ಟು ಹಿನ್ನಡೆ ಅನುಭವಿಸುವಂತಾಯಿತು.

ವಿಮಾನಗಳನ್ನು ಬಾಡಿಗೆಗೆ ನೀಡಿದ್ದ ಸಂಸ್ಥೆಯೊಂದು, ಬಾಕಿ ಹಣ ಪಾವತಿಸಿಲ್ಲ ಎಂಬ ಕಾರಣದ ಮೇಲೆ `ಕಿಂಗ್ಫಿಶರ್~ನ 34 ವಿಮಾನಗಳನ್ನು ವಾಪಸ್ ಪಡೆದುಕೊಂಡಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಬುಧವಾರ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಕಿಂಗ್ಫಿಶರ್ನ ಷೇರುಗಳು ದಿಢೀರ್ (ಶೇ 13.47ರಷ್ಟು) ಕುಸಿತ ಅನುಭವಿಸಿದವು.

ಮಧ್ಯಾಹ್ನ ರೂ. 11.62ರ ಬೆಲೆಯಲ್ಲಿ ಮಾರಾಟವಾದವು. `ಎನ್ಇಸಿ~ಯಲ್ಲಿಯೂ ಶೇ 13.05ರಷ್ಟು ಕುಸಿತ ಕಂಡು ರೂ. 11.65ರಷ್ಟು ಕಡಿಮೆ ಬೆಲೆಯಲ್ಲಿ ವಹಿವಾಟು ನಡೆಸಿದವು.

ವಿಜಯ್ ಮಲ್ಯ ಒಡೆತನದ ಕಂಪೆನಿ ಷೇರುಗಳು ದಿನದಂತ್ಯ ಅಲ್ಪ ಚೇತರಿಕೆ ಕಂಡು ರೂ. 12.35ರಲ್ಲಿ ಮಾರಾಟವಾ ದವು. ಬಿಎಸ್ಇಯಲ್ಲಿ ಒಂದು ಕೋಟಿ ಹಾಗೂ ಎನ್ಎಸ್ಇಯಲ್ಲಿ ಎರಡು ಕೋಟಿ ಕಿಂಗ್ಫಿಶರ್ ಷೇರುಗಳು ಬುಧವಾರ ಒಂದೇ ದಿನ ಕೈಬದಲಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.