ಶನಿವಾರ, ಜೂನ್ 19, 2021
27 °C

ಕಿಂಗ್‌ಫಿಷರ್: ಹೆಚ್ಚಿದ ಬಿಕ್ಕಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಾಕಿ ಪಾವತಿಸದ ಹಿನ್ನೆಲೆಯಲ್ಲಿ  ಕಿಂಗ್‌ಫಿಷರ್ ಏರ್‌ಲೈನ್ಸ್  ಅಂತರರಾಷ್ಟ್ರೀಯ ವಿಮಾನ ಸಾರಿಗೆ  ಸಂಘಟನೆಯ (ಐಎಟಿಎ) ಇನ್ನೂ ಎರಡು ಸೇವೆಗಳಿಂದ  ಅಮಾನತುಗೊಂಡಿದೆ.  ಜಾಗತಿಕ ಏರ್‌ಲೈನ್ಸ್ ಮಂಡಳಿಯ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ      (ಬಿಎಸ್‌ಪಿ) ಮತ್ತು ಸರಕು ವಹಿವಾಟು ಇತ್ಯರ್ಥ ವ್ಯವಸ್ಥೆ (ಸಿಎಎಸ್‌ಎಸ್) ಯಲ್ಲಿ ಭಾಗವಹಿಸಲು ಕಿಂಗ್‌ಫಿಷರ್‌ಗೆ ಅವಕಾಶ ನಿರಾಕರಿಸಲಾಗಿದೆ. ಈ ಸೇವೆಗಳಲ್ಲಿ ಮುಂದುವರೆಯಬೇಕಾದರೆ ಕಂಪೆನಿಯು ನಿಗದಿಪಡಿಸಿರುವ  ನಗದು ಠೇವಣಿ ಪಾವತಿಸಬೇಕಾಗಿತ್ತು.ಆದರೆ, ಠೇವಣಿ ನೀಡಲು ಕಿಂಗ್‌ಫಿಷರ್ ವಿಫಲವಾಗಿದೆ ಎಂದು `ಐಎಟಿಎ~ ವಕ್ತಾರರೊಬ್ಬರು ತಿಳಿಸಿದ್ದಾರೆ.

 `ಐಎಟಿಎ~ ಕ್ರಮವು, ಏಜೆಂಟರ ಮೂಲಕ ನಡೆಯುತ್ತಿದ್ದ  ಕಿಂಗ್‌ಫಿಷರ್‌ನ ಪ್ರಯಾಣಿಕರ ಟಿಕೆಟ್ ಮತ್ತು ಸರಕು ಬುಕಿಂಗ್‌ಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ.

 

`ಐಎಟಿಎ~ಗೆ ನಗದು ಠೇವಣಿ ಪಾವತಿಸುವ ತನಕ ಸಂಸ್ಥೆಯು ಈ ಸೇವೆಗಳಿಗಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ~ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.