ಬುಧವಾರ, ಏಪ್ರಿಲ್ 14, 2021
24 °C

ಕಿಡ್ನಿ ಪ್ರತಿಷ್ಠಾನದಿಂದ ಮಿಮಿಕ್ರಿ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಡ್ನಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವವರ ಮನೋಲ್ಲಾಸಕ್ಕಾಗಿ ಆಷಾಯೇನ್ ಕಿಡ್ನಿ ಫೌಂಡೇಶನ್ ಭಾನುವಾರ (ಡಿ.2) ನಗರದಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ನೆಫ್ರೊಪ್ಲಸ್ ಡಯಾಲಿಸಿಸ್ ಸಂಸ್ಥೆ ಪ್ರಾಯೋಜಿಸಿರುವ ಈ ಕಾರ್ಯಕ್ರಮ ಆನಂದರಾವ್ ವೃತ್ತದಲ್ಲಿರುವ ಫರ್ನ್ ಸಿಟಾಡೆಲ್ ಹೋಟೆಲ್‌ನಲ್ಲಿ ನಡೆಯಲಿದ್ದು, ದಿನವಿಡೀ ಡಯಾಲಿಸಿಸ್, ಕಿಡ್ನಿ ತೊಂದರೆ ಇತ್ಯಾದಿ ವಿಷಯಗಳ ಕುರಿತು ಸಂವಾದ, ತಜ್ಞರೊಂದಿಗೆ ಚರ್ಚೆ, ಅನುಭವ ವಿನಿಮಯ, ಮಿಮಿಕ್ರಿ ಕಲಾವಿದ ವಿ. ಹರಿಕಿಷನ್ ಅವರಿಂದ ಮನರಂಜನಾ ಕಾರ್ಯಕ್ರಮ ಏರ್ಪಾಡಾಗಿದೆ. ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವವರಿಗೆ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಎಂದು `ಆಷಾಯೇನ್'ನ ಸಹಸ್ಥಾಪಕರಾದ ಡಿ.ಕಮಲ್ ಷಾ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಿಕೊಳ್ಳಲು ಸಂಪರ್ಕಿಸಿ: www.aashayein.net 919880357636.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.