ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ನೆರವಾಗುವುದಕ್ಕಾಗಿ ಯುವಕರನ್ನು ಹುರಿದುಂಬಿಸಲು ನಗರದ `ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ~ಯು ಯೋಜನೆಯೊಂದನ್ನು ರೂಪಿಸಿದೆ.

ಅಂತಿಮ ದಿನಗಳನ್ನು ಎಣಿಸುತ್ತಿರುವ ಕ್ಯಾನ್ಸರ್ ರೋಗಿಗಳ ದಿನಾಚರಣೆ (ಹಾಸ್ಟೈಸ್ ಅಂಡ್ ಪಾಲಿಯೇಟಿವ್ ಡೇ) ಅಂಗವಾಗಿ ಅ.8ರಂದು (ಶನಿವಾರ) ನಗರದ ನಾಲ್ಕು ಪ್ರಮುಖ ಕಾಲೇಜುಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಆರೈಕೆ ಮಾಡುವ ಕುರಿತು ಜಾಗೃತಿ ಶಿಬಿರವನ್ನು ನಡೆಸಲಾಗುತ್ತಿದೆ.

`ಹಲವು ಕಾಯಿಲೆಗಳು, ಹಲವು ಜೀವಗಳು, ಹಲವು ಧ್ವನಿಗಳು, ಸಂವಹನ ನಡೆಸಲಾಗದ ರೋಗಿಗಳಿಗೆ ಅಗತ್ಯ ಆರೈಕೆ~ ಎಂಬ ಘೋಷಣೆಯೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಂಸ್ಥೆಯ ಪ್ರಾಧ್ಯಾಪಕ ಡಾ.ಲಿಂಗೇಗೌಡ ಈ ಕುರಿತು ಮಾತನಾಡಿ, `ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳನ್ನು ನೋಡಿಕೊಳ್ಳಲು ಸ್ವಯಂಸೇವಕರ ಕೊರತೆ ಇದೆ. ಆದ್ದರಿಂದ `ವಿದ್ಯಾರ್ಥಿ ಸ್ವಯಂಸೇವಕ~ರನ್ನು ಈ ಕೆಲಸಕ್ಕಾಗಿ ನಿಯೋಜಿಸಬೇಕೆಂದು ನಿರ್ಧರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮಿಂದಾದ ನೆರವನ್ನು ಈ ರೋಗಿಗಳಿಗೆ ನೀಡಬಹುದು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವುದು, ಔಷಧಿ ಅಂಗಡಿಯಿಂದ ಔಷಧಿಗಳನ್ನು ಮನೆಗೆ ಪೂರೈಸುವ ಕೆಲಸವನ್ನೂ ಮಾಡಬಹುದು. ಅಂಥವರು ಕಿದ್ವಾಯಿ ಆಸ್ಪತ್ರೆಯಲ್ಲಿ ತರಬೇತಿ ಪಡೆಯಬಹುದು~ ಎಂದು ಹೇಳಿದರು.

`ಕ್ಯಾನ್ಸರ್ ಪೀಡಿತರು ತಮ್ಮ ಉಳಿದ ದಿನಗಳನ್ನು ಸಹನೀಯವಾಗಿ ಕಳೆಯುವುದಕ್ಕಾಗಿ ಅವರನ್ನು ನೋಡಿಕೊಳ್ಳುವವರ ಅಗತ್ಯವಿದೆ. ದೇಶದಾದ್ಯಂತ ಕೇವಲ ಶೇ 2ರಿಂದ 3ರಷ್ಟು ರೋಗಿಗಳು ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳನ್ನು ಸೂಕ್ತವಾಗಿ ನೋಡಿಕೊಳ್ಳುವುದು ಎಂದರೆ ಅವರ ಜೀವನಕ್ಕೆ ಇನ್ನಷ್ಟು ದಿನಗಳನ್ನು ಸೇರಿಸಿದಂತೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.