ಗುರುವಾರ , ಜನವರಿ 23, 2020
19 °C
ಪಂಚರಂಗಿ

ಕಿಮ್ ಖಯಾಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆರಿಕದ ಕಿರುತೆರೆ ನಿರೂಪಕಿ ಕಿಮ್‌ ಕರ್ದಾಶಿಯಾನ್‌ ತಮ್ಮ ಮುಂದಿನ ಹತ್ತು ವರ್ಷಗಳ ಯೋಜನೆಯನ್ನು ರೂಪಿಸಿದ್ದಾರಂತೆ. ಬರುವ ಹತ್ತು ವರ್ಷಗಳಲ್ಲಿ ತಮ್ಮ ಗೆಳೆಯ ವೆಸ್ಟ್‌ ಜತೆ ಇನ್ನೂ ಎರಡು ಮಕ್ಕಳಿಗೆ ಜನ್ಮ ನೀಡುವುದು ಕಿಮ್‌ ಸದ್ಯದ ಯೋಜನೆ.‘ಗೆಳೆಯ ಕ್ಯಾನೆ ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾನು ಸುರಕ್ಷಿತವಾಗಿ ಹಾಗೂ ಆರಾಮವಾಗಿರಲು ಏನು ಬೇಕೋ ಅವೆಲ್ಲವನ್ನೂ ನೀಡಿದ್ದಾರೆ. ಒಬ್ಬ ಮಹಿಳೆ ಇದಕ್ಕಿಂತ ಹೆಚ್ಚಿನದೇನನ್ನು ಬಯಸಲು ಸಾಧ್ಯ’ ಎನ್ನುವುದು ಕಿಮ್‌ ಆತ್ಮತೃಪ್ತಿಯ ನುಡಿ.

ಕ್ರಿಸ್ಮಸ್‌ ಸಡಗರದಲ್ಲಿರುವ ಕಿಮ್‌ ಹಾಗೂ ಅವರ ಕುಟುಂಬಕ್ಕೆ ಇದಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲವಂತೆ.

ಬೆಳಿಗ್ಗೆ 6ಕ್ಕೆ ಎದ್ದು ಕುಟುಂಬದೊಂದಿಗೆ ಬಂದ ಉಡುಗೊರೆಗಳನ್ನು ನೋಡುವುದು, ಎಲ್ಲರೂ ಜತೆಗೂಡಿ ಉಪಹಾರ ಸಿದ್ಧಪಡಿಸುವುದು ಅಂದಿನ ಕಾರ್ಯಕ್ರಮವಂತೆ. ತಾಯಿ  ಸಾಂಪ್ರದಾಯಿಕವಾಗಿ ಕ್ರಿಸ್ಮಸ್‌ ಆಚರಿಸುವುದರಿಂದ ಹಬ್ಬದ ಸಡಗರವನ್ನು ನಾನೆಂದೂ ಮಿಸ್‌ ಮಾಡಿಕೊಳ್ಳುವುದಿಲ್ಲ’ ಎಂದಿದ್ದಾರೆ.ಕಿಮ್‌ ಸದಾ ಖುಷಿಯಾಗಿರಲು ಆಕೆಯ ಗೆಳೆಯ ಕ್ಯಾನೆ ವೆಸ್ಟ್‌ 2.5 ಲಕ್ಷ ಅಮೆರಿಕನ್‌ ಡಾಲರ್‌ನಷ್ಟು ಇಡುಗಂಟನ್ನು ಇಡಲಿದ್ದಾರಂತೆ. ಇದರಿಂದ ಕಿಮ್‌ರ ಫ್ಯಾಷನ್‌ ಖಯಾಲಿಗೆ ಯಾವ ರೀತಿಯ ಭಂಗವೂ ಬಾರದಂತೆ ನೋಡಿಕೊಳ್ಳುವುದು ಕ್ಯಾನೆ ಇರಾದೆ. ಕಿಮ್‌ ಬಯಸುವ ವಸ್ತು ಫೋನ್‌ ಮಾಡಿದರೆ ತಕ್ಷಣ ಸಿಗುವಂತೆ ಇರಬೇಕು ಎಂಬುದು ಅವರ ಕಾಳಜಿ.

ಹೀಗಾಗಿ ಕಿಮ್‌ ಅವರ ಪ್ರಸಾಧನ ಕಲಾವಿದರು, ಕೇಶ ಶೃಂಗಾರದವರು, ಫ್ಯಾಷನ್ ವಿನ್ಯಾಸಕರು ಎಲ್ಲರೂ ಲಾಸ್‌ ಏಂಜಲೀಸ್‌ನಲ್ಲೇ ಇದ್ದು, ಅವರೆಲ್ಲ ದಿನದ ಅಷ್ಟೂ ಹೊತ್ತು ಅಲ್ಲೇ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಷ್ಟು ದೊಡ್ಡ ಮೊತ್ತದ ಹಣದ ನಿಧಿಯನ್ನು ಕ್ಯಾನೆ ಸ್ಥಾಪಿಸಲಿದ್ದಾರೆ.

ಪ್ರತಿಕ್ರಿಯಿಸಿ (+)