ಶುಕ್ರವಾರ, ಮೇ 7, 2021
25 °C

ಕಿರವತ್ತಿ: ಕಾಡಾನೆ ಹಿಂಡು ದಾಳಿ, ಬೆಳೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ಪ್ರತಿವರ್ಷ ಕೊಯ್ಲಿಗೆ ಬರುತ್ತಿದ್ದ ಗಜರಾಜ ಸುಮಾರು ಆರು ತಿಂಗಳು ಮೊದಲೇ ಆಗಮಿಸಿ ತೋಟ ಗದ್ದೆಗಳನ್ನು ನಾಶ ಮಾಡುತ್ತಿರುವ ಘಟನೆ ಕಿರವತ್ತಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದೆ.ಕಿರವತ್ತಿ ಪಂಚಾಯಿತಿ ವ್ಯಾಪ್ತಿಯ ಸೋಮಾಪುರ,  ಯಲವಳ್ಳಿ, ಪಾನಿ ಗುಂಡಿ, ಹುಣಸಗೇರಿ ಹಾಗೂ ಮದ್ನೂರು ಪಂಚಾಯಿತಿ ವ್ಯಾಪ್ತಿಯ ಕರಡೊಳ್ಳಿ  ಮುಂತಾದ ಪ್ರದೇಶಗಳಲ್ಲಿ ಕಾಡಾನೆಗಳು ದಾಳಿ ನಡೆಸುತ್ತಿವೆ.ರೈತರ ಹೊಲ. ತೋಟಗಳನ್ನು ನಾಶವಾಗಿವೆ. ಕಳೆದ ಕೆಲವು ದಿನಗಳ ಹಿಂದೆ ಮದ್ನೂರು ಪಂಚಾಯಿತಿ ವ್ಯಾಪ್ತಿಯ ಕರಡೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶ  ಹಾನಿಯನ್ನುಂಟು ಮಾಡಿದರೆ.  ಕಳೆದೆರಡು ದಿನಗಳ ಹಿಂದೆ ಸುಮಾರು ಆರು ಆನೆಗಳು ಹಾಗೂ 2 ಮರಿಗಳಿದ್ದ ಕಾಡಾನೆಗಳ ತಂಡವು ಸೋಮಾಪುರದಲ್ಲಿನ ವಿಜಯಕುಮಾರ ಹಿರೇಮಠ ಎಂಬವರ ತೋಟಕ್ಕೆ ದಾಳಿಯಿಟ್ಟಿದ್ದು ಸುಮಾರು 50 ರಷ್ಟು ಬಾಳೆಮರಗಳು, 30 ಅಡಕೆ ಗಿಡಗಳು ಹಾಗೂ ಕೋಕ್ಕೋ ಪ್ಲಾಂಟೇಶನ್ ಹಾಳುಗೆಡವಿದೆ.ರಾತ್ರಿ ಒಂದೂವರೆಯ ಸುಮಾರಿಗೆ ದಾಳಿಯಿಟ್ಟ ಆನೆಗಳನ್ನು ಊರವರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆದರಿಸಿ ಓಡಿಸಿದರು. ಒಟ್ಟು 16 ಆನೆಗಳು ಇದ್ದು, ಬೇರೆ ಬೇರೆ ತಂಡಗಳಲ್ಲಿ ಆಹಾರಕ್ಕಾಗಿ ಹೋಗುತ್ತವೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.ಸದ್ಯ ಹುಣಸಗೇರಿ, ಪಾನಿಗುಂಡಿ ಅರಣ್ಯ ಪ್ರದೇಶಗಳಲ್ಲಿ ವಾಸ್ತವ್ಯ ಮಾಡಿರುವ ಆನೆಗಳು ರಾತ್ರಿಯಾದೊಡನೆ ರೈತರ ಹೊಲಗಳಿಗೆ ದಾಳಿಯಿಡುತ್ತಿವೆ.ಈ ದಿನಗಳಲ್ಲಿ ಜೊಯಿಡಾ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಬಿದಿರು ಹಾಗೂ ಇನ್ನಿತರ ಆಹಾರಗಳನ್ನು ತಿನ್ನುತ್ತಿದ್ದ ಆನೆಗಳು  ಪ್ರತಿವರ್ಷ ಬತ್ತದ ಕೊಯ್ಲಿನ ಸಮಯಕ್ಕೆ ಹಾಜರಾಗುತ್ತಿದ್ದವು.  ಆ ಪ್ರದೇಶಗಳಲ್ಲಿಯೂ ಬಿದಿರು ಕಳೆದ ವರ್ಷ ಹೂ ಬಿಟ್ಟು ನಾಶವಾದ ನಂತರದಲ್ಲಿ ಅವುಗಳಿಗೆ ಆಹಾರ ಕೊರತೆಯುಂಟಾಗಿ ಅವಧಿಗಿಂತ ಮೊದಲೇ ಬಂದಿವೆ ಎನ್ನಲಾಗಿದೆ.ಬಿತ್ತನೆ ಕಾಲದಲ್ಲಿ ಅತಿ ವೃಷ್ಟಿಯಿಂದ  ಹೊಲಗಳಲ್ಲಿ ಬಿತ್ತನೆ ಮಾಡಲಾಗದೆ ರೈತರು ಕಂಗಾಲಾಗಿದ್ದರೆ, ಈಗ ಕಾಡಾನೆಗಳು ದಾಳಿ ನಡೆಸುತ್ತಿರುವುದು ಚಿಂತೆಗೀಡು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.