ಮಂಗಳವಾರ, ಮೇ 11, 2021
26 °C

ಕಿರುತೆರೆ, ಸಿನಿಮಾ ನಟ ಡಾ. ಎಸ್.ಸುಬ್ರಹ್ಮಣ್ಯ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಿರುತೆರೆ, ಸಿನಿಮಾ ಹಾಗೂ ರಂಗಭೂಮಿಯ ಖ್ಯಾತ ನಟ ಡಾ.ಎಸ್. ಸುಬ್ರಹ್ಮಣ್ಯ (42) ತೀವ್ರ ಹೃದಯಾಘಾತದಿಂದ ಶನಿವಾರ ಇಲ್ಲಿ ನಿಧನರಾದರು.ಅಭಿನಯ ತರಂಗ ಹಾಗೂ ನೀನಾಸಂ ಪದವೀಧರರಾಗಿದ್ದ ಸುಬ್ರಹ್ಮಣ್ಯ ರಾಜ್ಯದ ಹಲವು ಕಡೆ ರಂಗ ಶಿಬಿರಗಳನ್ನು ಏರ್ಪಡಿಸಿದ್ದರು. ಮಕ್ಕಳಿಗಾಗಿ ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದ ಅವರು ಕಾರ್ಯಾಗಾರಗಳನ್ನು ಸಂಘಟಿಸಿದ್ದರು. ಲಂಕೇಶರ ನಾಟಕಗಳ ಮೇಲೆ ಡಾಕ್ಟರೇಟ್ ಪಡೆಯುವುದರ ಜತೆಗೆ, ಲಂಕೇಶರ ಎಲ್ಲ ನಾಟಕಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಪಡೆದಿದ್ದರು. ರಂಗಪ್ರಪಂಚ ಪತ್ರಿಕೆ ಸಂಪಾದಕರಾಗಿದ್ದ ಅವರು `ಸಮಸ್ತರು ರಂಗ ಸಂಶೋಧನಾ ಕೇಂದ್ರ'ದ ರಾಜ್ಯ ಅಧ್ಯಕ್ಷರೂ ಆಗಿದ್ದರು.`ಚಿ.ಸೌ.ಸಾವಿತ್ರಿ', `ದೇವಿ', `ಬದುಕು', `ಸುಕನ್ಯ', `ವಠಾರ' ಮೆಗಾ ಧಾರಾವಾಹಿಗಳಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅವರಿಗೆ ಪತ್ನಿ, ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.