ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಕಾಗನೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ಎರಡು ಕಿರು ಜಲವಿದ್ಯುತ್ ಯೋಜನೆಗೆ ಅನುಮತಿ ನೀಡಿರುವ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸದಂತೆ ಬುಧವಾರ ಆದೇಶಿಸಿದೆ.

`ಸರ್ಕಾರ, ಅರಣ್ಯವನ್ನು ಸಂರಕ್ಷಿಸುವ ಟ್ರಸ್ಟಿಯಾಗಿ ಕೆಲಸ ಮಾಡಬೇಕೆ ಹೊರತು, ಅದನ್ನು ಮನಸೋ ಇಚ್ಛೆ ಬಳಕೆ ಮಾಡಿಕೊಳ್ಳುವ ಮಾಲೀಕನಾಗಿ ಅಲ್ಲ. ಸರ್ಕಾರ ಅರಣ್ಯದ ಮಾಲೀಕ ಅಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಹೆಜ್ಜೆ ಇಡಬೇಕು~ ಎಂದು ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ನೇತೃತ್ವದ ವಿಭಾಗೀಯ ಪೀಠ ತಿಳಿಸಿತು.

`ಮಾರುತಿ ಪವರ್-ಜೆನ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್~ ಕಂಪೆನಿಗೆ ಇಲ್ಲಿ 18.9 ಮೆಗಾವಾಟ್ ಸಾಮರ್ಥ್ಯದ ಎಡಕುಮೇರಿ ಯೋಜನೆ ಹಾಗೂ 19 ಮೆಗಾ ವಾಟ್ ಸಾಮರ್ಥ್ಯದ ಹೊಂಗದಹಳ್ಳ ಯೋಜನೆಗೆ (ಈ ಎರಡೂ ಯೋಜನೆಯನ್ನು ನಂತರ ತಲಾ 24 ಮೆ.ವಾಟ್ಗೆ ಏರಿಸಲಾಗಿದೆ) ಮೀಸಲು ಅರಣ್ಯ ಪ್ರದೇಶವನ್ನು ಗುತ್ತಿಗೆಗೆ ನೀಡಿರುವುದನ್ನು ಪ್ರಶ್ನಿಸಿ `ಪಶ್ಚಿಮ ಘಟ್ಟಗಳ ಅರಣ್ಯ ಸಂರಕ್ಷಣಾ ಸಮಿತಿ~ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.

`ಅರಣ್ಯದಿಂದ ಸಂಪದ್ಭರಿತವಾಗಿರುವ ಈ ಭಾಗವು ಈಗಾಗಲೇ ಹಲವಾರು ಬೃಹತ್ ಯೋಜನೆಗಳಿಗೆ ಬಲಿಪಶುವಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಆದೇಶಿಸಬೇಕು. ಈ ಯೋಜನೆಗಳನ್ನು ಪ್ರಾರಂಭ ಮಾಡಿದರೆ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಈಗಾಗಲೇ ಹಲವಾರು ಮರಗಳು ಧರೆಗೆ ಉರುಳಿವೆ. ಅಲ್ಲದೇ ಈ ಭಾಗದ ಅಪರೂಪದ ಪಕ್ಷಿ ಹಾಗೂ ಪ್ರಾಣಿ ಸಂತತಿಗಳು ನಾಶವಾಗುತ್ತಿವೆ~ ಎನ್ನುವುದು ಅರ್ಜಿದಾರರ ವಾದ.

ಕೋರ್ಟ್ ತರಾಟೆ: `ಸೂಕ್ಷ್ಮ ಜೀವವೈವಿಧ್ಯ ಇರುವ ಅರಣ್ಯ ಪ್ರದೇಶಗಳನ್ನೇ ಯೋಜನೆಯ ನೆಪದಲ್ಲಿ ಗುತ್ತಿಗೆಗೆ ನೀಡುತ್ತಿರುವುದು ತೀವ್ರ ವಿಷಾದನೀಯ. ಸುಪ್ರೀಂಕೋರ್ಟ್ ತೀರ್ಪನ್ನು ಸರ್ಕಾರ ಉಲ್ಲಂಘನೆ ಮಾಡುತ್ತಿದೆ ಎಂದರೆ ನಮಗೆ ತೀವ್ರ ಅಚ್ಚರಿ ಆಗುತ್ತಿದೆ. ಅರಣ್ಯ ಪ್ರದೇಶ ಎಂದರೆ ಏನು ಬೇಕಾದರೂ ಮಾಡಬಹುದು ಎಂಬ ಜಾಯಮಾನ ಸರ್ಕಾರಕ್ಕೆ ಇದ್ದಂತೆ ತೋರುತ್ತಿದೆ.

`ಇಂತಹ ಯೋಜನೆ ಆರಂಭಕ್ಕೆ ಅನುಮತಿ ನೀಡುವ ಮುನ್ನ ಅರಣ್ಯ ಪ್ರದೇಶಗಳಿಗೆ ಧಕ್ಕೆ ಆಗುತ್ತದೆಯೇ ಎಂದು ಪರಿಶೀಲನೆ ಮಾಡುವ ನಿಟ್ಟಿನಲ್ಲಿಯೂ ಸರ್ಕಾರ ಚಿಂತನೆ ಮಾಡದೇ ಇರುವುದು ದುರದೃಷ್ಟಕರ. ಇದೇ ರೀತಿ ಅಭಿವೃದ್ಧಿ ಹೆಸರಿನಲ್ಲಿ ಮರಗಿಡಗಳನ್ನು ಕಡಿಯುತ್ತ ಸಾಗಿದರೆ ಮುಂದಿನ ಪೀಳಿಗೆಗೆ ಏನು ನೀಡುತ್ತೀರಿ~ ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

ಈಗಾಗಲೇ ಯೋಜನೆಯು ಸುಮಾರು ಶೇ 30ರಷ್ಟು ಪೂರ್ಣಗೊಂಡಿದೆ. ಆದರೆ, ಅದಕ್ಕೆ ಪರವಾನಗಿಯನ್ನು ಕಂಪೆನಿ ಪಡೆದುಕೊಂಡಿಲ್ಲ. ನಿಯಮದ ಪ್ರಕಾರ, ಯಾವುದೇ ಕಿರು ಜಲ ವಿದ್ಯುತ್ ಯೋಜನೆಯನ್ನು 25 ಮೆಗಾವಾಟ್ನಷ್ಟು ಮೇಲ್ದರ್ಜೆಗೆ ಏರಿಸಿದ ಸಂದರ್ಭದಲ್ಲಿ ಅರಣ್ಯ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕಾದುದು ಕಡ್ಡಾಯ. ಈ ಎರಡೂ ಯೋಜನೆಗಳನ್ನು ಮೇಲ್ದರ್ಜೆಗೆ ಏರಿಸಿದಾಗ ಒಟ್ಟೂ ಸಾಮರ್ಥ್ಯ 48 ಮೆಗಾವಾಟ್ ಆಗಿತ್ತು. ಅನುಮತಿ ಪಡೆಯುವುದನ್ನು ತಪ್ಪಿಸುವುದಕ್ಕೋಸ್ಕರ ತಲಾ 24 ಮೆಗಾವಾಟ್ನ ಎರಡು ಯೋಜನೆಗಳನ್ನಾಗಿ ವಿಭಜಿಸಲಾಗಿದೆ ಎಂದು ತಿಳಿದ ನ್ಯಾಯಮೂರ್ತಿಗಳು ತೀವ್ರ ಕೋಪಗೊಂಡರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 2011ರಲ್ಲಿ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಎರಡೂ ಯೋಜನೆಗಳಿಗೆ ನೀಡಲಾಗಿರುವ ಗುತ್ತಿಗೆಯನ್ನು ರದ್ದು ಮಾಡುವಂತೆ ಸೂಚಿಸಿದ್ದಾರೆ. ಆದರೆ ಆ ನಿಟ್ಟಿನಲ್ಲಿಯೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಕೂಡ ವಿಚಾರಣೆ ವೇಳೆ ತಿಳಿಯಿತು. ಈ ಹಿನ್ನೆಲೆಯಲ್ಲಿ, ಪತ್ರದ ಆಧಾರದ ಮೇಲೆ ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ನೀಡುವಂತೆ ನಿರ್ದೇಶಿಸಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.