ಕೆಂಭಾವಿ: ಕಿರದಳ್ಳಿ ತಾಂಡಾ ಸೇರಿದಂತೆ ಸುರಪುರ ತಾಲ್ಲೂಕಿನಲ್ಲಿ 19 ಗ್ರಾಮಗಳ ಕುಡಿಯುವ ನೀರಿನಲ್ಲಿ ಆರ್ಸೇನಿಕ್ ಅಂಶ ಪ್ರಮಾಣಕ್ಕಿಂತ ಹೆಚ್ಚಾಗಿರುವ ಕಾರಣ, ಇದೀಗ ರಾಜ್ಯ ಸರ್ಕಾರ ಅರ್ಸೇನಿಕ್ಯುಕ್ತ ಕೊಳವೆ ಬಾವಿಗಳ ನೀರಿನ ಬಳಕೆ ಮಾಡದಿರುವಂತೆ ಸೂಚಿಸಿದೆ.

ಇದರಿಂದಾಗಿ ದೈನಂದಿನ ಉಪಯೋಗಕ್ಕೆ ನೀರು ಎಲ್ಲಿಂದ ತರುವುದು ಎಂಬ ಚಿಂತೆ ಈ ಗ್ರಾಮಸ್ಥರನ್ನು ಕಾಡುತ್ತಿದೆ.

ಕಿರದಳ್ಳಿ ತಾಂಡಾದಲ್ಲಿ ಚರ್ಮ ಕ್ಯಾನ್ಸರ್ನಿಂದ ಅನೇಕರು ಮೃತಪಟ್ಟಿದ್ದು, ಇನ್ನು ಹಲವರಿಗೆ ರೋಗ ತಗಲಿದೆ. ಕಳೆದ ವಾರವಷ್ಟೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಒಂದು ವಾರದಲ್ಲಿ ತಾಂಡಾಕ್ಕೆ ಶುದ್ಧ ಕುಡಿಯುವ ನೀರು ಕೊಡುವ ಭರವಸೆಯನ್ನು ನೀಡಿದ್ದರು. ಜಿಲ್ಲಾಡಳಿತ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ಆರಂಭಿಸಿದ್ದು, ಕಾಮಗಾರಿ ಮುಗಿಯಲು ಒಂದು ವಾರ ಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಆದರೆ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ತಾಂಡಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ನಾಲ್ಕು ದಿನಗಳಲ್ಲಿ ಶುದ್ಧ ನೀರು ನೀಡುವುದಾಗಿ ಹೇಳಿದ್ದರು. ಆದರೆ ಶುದ್ಧ ನೀರು ಸಿಗುವುದು ಇನ್ನೂ ವಿಳಂಬವಾಗುತ್ತದೆ ಎನ್ನುತ್ತಾರೆ ತಾಂಡಾದ ತೇನಸಿಂಗ್.

ಇದರ ಮಧ್ಯೆ ಆರ್ಸೇನಿಕ್ ಅಂಶವಿರುವ ನೀರನ್ನು ಬಳಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಅಂತಹ ಕೊಳವೆಬಾವಿ ಹಾಗೂ ಬಾವಿಗಳನ್ನು ಗುರುತಿಸಿ ಅವುಗಳಿಗೆ ಕೆಂಪು ಬಣ್ಣ ಹಚ್ಚಬೇಕು. ಆ ನೀರು ಬಳಸದಂತೆ ಜನರಿಗೆ ತಿಳಿಸಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಆದೇಶ ನೀಡಿದೆ.
ಶುದ್ಧೀಕರಿಸಿದ ನೀರನ್ನು ಕುಡಿಯಲು ಮಾತ್ರ ಬಳಸಬಹುದಾಗಿದ್ದು, ಸ್ನಾನ, ಇತ್ಯಾದಿ ಕಾರ್ಯಗಳಿಗೆ ಯಾವ ನೀರನ್ನು ಉಪಯೋಗಿಸಬೇಕು, ಎಲ್ಲಿಂದ ನೀರು ತರಬೇಕು ಎನ್ನುವುದು ಗ್ರಾಮಸ್ಥರ ಪ್ರಶ್ನೆ.

ಆರ್ಸೇನಿಕ್ ಅಂಶವಿರುವ ನೀರಿನ ಬಾವಿ ಹಾಗೂ ಕೊಳವೆಬಾವಿಗೆ ಕೆಂಪು ಬಣ್ಣ ಬಡಿದು ನಿಷೇಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ನೀರು ಶುದ್ಧೀಕರಣ ಘಟಕದ ಕಾಮಗಾರಿಗೆ ಇನ್ನೂ ಒಂದು ವಾರ ಬೇಕು. ಅಲ್ಲಿಯವರೆಗೆ ಯಾವ ನೀರು ಸೇವಿಸಬೇಕು ಎಂಬುದು ಗ್ರಾಮಸ್ಥರ ಚಿಂತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.