ಮಂಗಳವಾರ, ಜನವರಿ 28, 2020
18 °C

ಕುಡಿಯುವ ನೀರು ಪೂರೈಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ಸಮರ್ಪಕ ಕುಡಿ­ಯುವ ನೀರು ಪೂರೈಕೆಗೆ ಆಗ್ರಹಿಸಿ ಹಂದನ­ಕೆರೆ ದಲಿತ ಕಾಲೊನಿ ಮಹಿಳೆ­ಯರು ಗುರುವಾರ ಗ್ರಾ.ಪಂ. ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.



ಪ್ರತಿಭಟನೆ ನೇತೃತ್ವ ವಹಿಸಿದ್ದ ಜಯಮ್ಮ ಮಾತನಾಡಿ ಹಂದನಕೆರೆ­ಯಲ್ಲಿ ಒಟ್ಟು 11 ಸಿಸ್ಟನ್ ಅಳವಡಿಸ­ಲಾಗಿದೆ. ಆದರೆ 500 ಜನಸಂಖ್ಯೆ ಇರುವ ದಲಿತ ಕಾಲೊನಿಯಲ್ಲಿ ಒಂದೂ ಕಾಣಿಸುವುದಿಲ್ಲ. ಕಾಲೊ­ನಿ ಮಹಿಳೆಯರು ರಸ್ತೆ ಬದಿ ಸಿಸ್ಟನ್‌ ಬಳಿ ರಾತ್ರಿಯೆಲ್ಲಾ ಖಾಲಿ ಕೊಡ ಹಿಡಿದು ನೀರಿಗಾಗಿ ಕಾಯಬೇಕಾದ ಸ್ಥಿತಿ ಇದೆ ಎಂದು ಅಲವತ್ತುಕೊಂಡರು.



ಗ್ರಾಮದಲ್ಲಿ 10 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ರಾತ್ರಿ ಇಡಿ ಕಾದರೂ 4 ಕೊಡ ನೀರು ಸಿಗುವುದಿಲ್ಲ ಎಂದು ಗೃಹಿಣಿ ಗಂಗಮ್ಮ ಹೇಳಿದರು. ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಕಳೆದ ತಿಂಗಳು ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.



ಮಹಿಳೆಯರ ಸಮಸ್ಯೆ ಆಲಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವಯ್ಯ, 8 ಸಾವಿರ ಜನರಿ­ರುವ ಗ್ರಾಮದಲ್ಲಿ 2 ಕೊಳವೆ ಬಾವಿ ಹಾಗೂ 3 ಕೈಪಂಪ್‌ ಕೆಲಸ ಮಾಡುತ್ತಿವೆ. ಹೀಗಾಗಿ ಸದ್ಯ10ದಿನಕ್ಕೆ ಒಮ್ಮೆ ನೀರು ಬಿಡಲಾಗುತ್ತಿದೆ. 15 ದಿನದಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಮಹಿಳೆಯರು ಪ್ರತಿಭಟನೆ ಹಿಂಪಡೆದರು.

ಪ್ರತಿಕ್ರಿಯಿಸಿ (+)