‘ಗುಡ್ಡು ಕಿ ಗನ್’ ಸಿನಿಮಾ ತನ್ನ ಪತಿ ಕುನಾಲ್ ಖೇಮು ಅದೃಷ್ಟವನ್ನು ಬದಲಾಯಿಸಲಿದೆ ಎಂದು ನಟಿ ಸೋಹಾ ಅಲಿ ಖಾನ್ ಕಾಯುತ್ತಿದ್ದಾರೆ. ‘ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ದಾಖಲಿಸುವುದಲ್ಲದೆ ಕುನಾಲ್ ವೃತ್ತಿಬದುಕಿನಲ್ಲಿಯೂ ಅನೇಕ ಸಂಗತಿಗಳನ್ನು ಬದಲಿಸುತ್ತದೆ’ ಎನ್ನುವ ವಿಶ್ವಾಸ ಅವರದು.

‘ಕುನಾಲ್ ಖೇಮು ಒಬ್ಬ ಒಳ್ಳೆಯ ನಟ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ಗಲ್ಲಾಪೆಟ್ಟಿಗೆಯ ಗೆಲುವು ಕೂಡ ಎಲ್ಲರಿಗೂ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗುಡ್ಡು ಕಿ ಗನ್ ಸಿನಿಮಾ ಕುನಾಲ್‌ಗೆ ಯಶಸ್ಸು ತಂದುಕೊಡಲಿದೆ’ ಎಂದು ಸೋಹಾ ಆಶಯ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನೀಡಿದ ಸಂದರ್ಶನದಲ್ಲಿ ಸೋಹಾ ಅಲಿ ಖಾನ್ ಪತಿಯ ಸಿನಿಮಾದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 1990ರಲ್ಲಿಯೇ ಕುನಾಲ್ ಬಣ್ಣದ ಬದುಕಿಗೆ ಅಡಿಯಿಟ್ಟಿದ್ದರೂ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು 2005ರಲ್ಲಿ ತೆರೆಕಂಡ ‘ಕಲಿಯುಗ್’ ಸಿನಿಮಾದಲ್ಲಿ.

ಕಳೆದ ಒಂದು ದಶಕದ ವೃತ್ತಿಜೀವನದಲ್ಲಿ ಕುನಾಲ್ ‘ಟ್ರಾಫಿಕ್ ಸಿಗ್ನಲ್’, ‘ಗೋಲ್‌ಮಾಲ್ 3’ ಮತ್ತು ‘ಗೋ ಗೋವಾ ಗಾನ್’ಗಳಂತಹ ಬಹುತಾರಾಗಣದ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ತೆರೆಕಾಣಲು ಸಜ್ಜಾಗಿರುವ ‘ಗುಡ್ಡು ಕಿ ಗನ್’ ಸಿನಿಮಾದಲ್ಲಿ ಕುನಾಲ್, ಬಿಹಾರಿ ಸೇಲ್ಸ್‌ಮನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋಹಾ ಅಲಿ ಖಾನ್ ಈ ಚಿತ್ರವನ್ನು ‘ಕೌಟುಂಬಿಕ ಚಿತ್ರ ಎಂದು ವ್ಯಾಖ್ಯಾನಿಸಿದ್ದಾರೆ.

‘ಈ ಸಿನಿಮಾದ ಪರಿಕಲ್ಪನೆ ಅನನ್ಯವಾದದ್ದು. ಆದ್ದರಿಂದಲೇ ನಾನು ಈ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ಜನರೂ ಅಷ್ಟೇ ಕಾತರದಿಂದ ಕಾಯುತ್ತಿದ್ದಾರೆ ಎನ್ನುವುದು ನನ್ನ ನಂಬಿಕೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಇದೊಂದು ಕೌಟುಂಬಿಕ ಚಿತ್ರ’ ಎಂದು ಸೋಹಾ ಹೇಳಿದ್ದಾರೆ. ಶಂತನು ರಾಯ್ ಚಿಬ್ಬರ್ ಮತ್ತು ಶೀರ್ಷಕ್ ಆನಂದ್ ನಿರ್ದೇಶಿಸಿರುವ ‘ಗುಡ್ಡು ಕಿ ಗನ್’ ಸಿನಿಮಾ ಇದೇ ವಾರ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.