ಮಾಲೂರು: ಬಯಲುಸೀಮೆ ಒಣ ವಾತಾವರಣಕ್ಕೆ ಹೊಂದಿಕೊಳ್ಳುವ ಕುರಿ ಸಾಕಾಣಿಕೆಯನ್ನು ಇಲ್ಲಿನ ರೈತರು ಉಪ ಕಸಬು ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಕುರಿ ಸಾಕಾಣಿಕೆ ನಿಗಮದ ಉಪನಿರ್ದೇಶಕ ಡಾ.ಶಶಿಧರ್ ತಿಳಿಸಿದರು.

ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ಪಶುಪಾಲನ ಇಲಾಖೆ, ಆತ್ಮ ತಾಲ್ಲೂಕು ಅನುಷ್ಠಾನ ವತಿಯಿಂದ ಬುಧವಾರ ಸ್ಥಳೀಯ ರೈತರಿಗೆ ಹಮ್ಮಿಕೊಂಡಿದ್ದ ಕೃಷಿ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಕುರಿ ಸಾಕಾಣಿಕೆ ಬಗ್ಗೆ ಮಾತನಾಡಿದರು. ನಿಗಮದ ವತಿಯಿಂದ ಪ್ರತಿ ತಾಲ್ಲೂಕಿನ 40 ಮಂದಿ ರೈತರಿಗೆ ಕುರಿ ಸಾಕಾಣಿಕೆ ಬಗ್ಗೆ ತರಬೇತಿ ನೀಡಲಾಗುವುದು. 10 ಕುರಿಗಳಿಗೆ ನಿಗಮದ ವತಿಯಿಂದ ವಿಮಾ ಸೌಲಭ್ಯವು ಭರಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಗತಿ ಪರ ರೈತ ಕೆಂಪಣ್ಣ, ಕುರಿ ಸಾಕಾಣಿಕೆ ನಿಗಮದ ನಿವೃತ್ತ ಉಪನಿರ್ದೇಶಕ ಡಾ.ಸೀತಾರಾಂ, ಪಶುಪಾಲನಾ ಇಲಾಖೆಯ ಶ್ರೀನಿವಾಸ್, ವಿಸ್ತರಣಾಧಿಕಾರಿ ಡಾ.ಅನುರಾಧ, ಕೃಷಿ ಇಲಾಖೆಯ ರಂಗಸ್ವಾಮಿ, ಆತ್ಮ ತಾಲ್ಲೂಕು ಅನುಷ್ಠಾನ ಸಮಿತಿಯ ಮೈತ್ರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.