ಬುಧವಾರ, ಜೂನ್ 23, 2021
29 °C

ಕುರ್ಚಿಗಾಗಿ ಕಿತ್ತಾಟ: ಮಧು ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಡುತ್ತಿರುವ ಬಿಜೆಪಿಯ ನಾಯಕರ ವರ್ತನೆ ನಾಚಿಕೆಗೇಡು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ  ಮಧುಬಂಗಾರಪ್ಪ ಕಿಡಿಕಾರಿದರು.ನಗರದ ವೀರೇಶ್ವರ ಪುಣ್ಯಾಶ್ರಮದ ಸಭಾಂಗಣದಲ್ಲಿ ಮಂಗಳವಾರ ನಡೆದ ಯುವ ಚಿಂತನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾಲ್ಕು ವರ್ಷದ ಹಿಂದೆ ಅಧಿಕಾರಕ್ಕೆ ಬರುವ ಸಮಯದಲ್ಲಿ ಬಿಜೆಪಿಯು ರಾಜ್ಯದ ಜನತೆಗೆ ನೀಡಿದ ಭರವಸೆ ಗಳನ್ನು ಇಲ್ಲಿವರೆಗೂ ಈಡೇರಿಸಲು ಪ್ರಯತ್ನಿಸಿಯೇ ಇಲ್ಲ. ಎಚ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗದ್ದ ಕಾಲದಲ್ಲಿ ಅನುಷ್ಠಾನಕ್ಕೆ ಬಂದ ಯೋಜನೆಗಳನ್ನೇ ತಮ್ಮದು ಎನ್ನುವಂತೆ ಬಿಂಬಿಸಿಕೊಂಡು ಆಡಳಿತ ನಡೆಸಿಕೊಂಡು ಬಂದಿದೆ. ಜನರು ಬಿಜೆಪಿಯ ಆಡಳಿತಕ್ಕೆ ಬೇಸತ್ತು ಹೋಗಿದ್ದಾರೆ ಎಂದು ಆರೋಪಿಸಿದರು.ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಆದರ್ಶ ಹಾಗೂ ಕನಸುಗಳು ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಕಾರಗೊಳ್ಳುತ್ತದೆ. ಆದ್ದರಿಂದ  ರಾಜ್ಯದ ಎಲ್ಲೆಡೆ ಇರುವ ಬಂಗಾರಪ್ಪ ಅವರ ಅಭಿಮಾನಿಗಳನ್ನು ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತಹ ಕಾರ್ಯಕ್ಕೆ ಕೈ ಹಾಕಬೇಕು ಎಂದು ಅವರು ಮಾನವಿ ಮಾಡಿದರು.ಏ.22ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ಯುವ ಚಿಂತನಾ ಶಕ್ತಿ ಸಮಾರಂಭ ಏರ್ಪಡಿಸಲಾಗಿದೆ. ಅಲ್ಲಿ ಯುವ ಜೆಡಿಎಸ್‌ನ ಶಕ್ತಿ ಎಷ್ಟು ಎನ್ನುವುದನ್ನು ಪ್ರದರ್ಶಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಮುಂಬರುವ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗುತ್ತದೆ. ಶೇ.40ಕ್ಕಿಂತ ಹೆಚ್ಚು ಯುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾ ಗುತ್ತದೆ.ಆದರೆ ಸುಖಾಸುಮ್ಮನೆ ಯಾರಿಗೂ ಟಿಕೆಟ್ ಕೊಡುವುದಿಲ್ಲ. ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಿ, ಯುವ ಶಕ್ತಿಯನ್ನು ಮುನ್ನಡೆಸಿ ಕೊಂಡು ಹೋಗುವಂತಹ ಅಭ್ಯರ್ಥಿಗೆ ಖಂಡಿತ ವಾಗಿಯೂ ಟಿಕೆಟ್ ದೊರೆಯುತ್ತದೆ. ಆದ್ದರಿಂದ ಯುವ ಘಟಕದ ಪದಾಧಿಕಾರಿಗಳು ಸಂಘಟನೆ ಕೆಲಸವನ್ನು ತಕ್ಷಣದಿಂದಲೇ ಆರಂಭಿ ಸಬೇಕು ಎಂದು ಹುರಿದುಂಬಿಸಿದರು.ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶ ಮಾಡಿ ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ, ಚುನಾವಣೆಗೆ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಆಡಳಿತ ಮಾಡಬಾರದು. ಅವರು ರಾಜೀನಾಮೆ ನೀಡುವುದು ಸೂಕ್ತ ಎಂದರು.ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಎನ್.ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಿ.ಎಫ್.ದಂಡಿನ, ಬಿ.ಎಸ್.ಹಿರೇಗೌಡ್ರ, ಶ್ರೀನಿವಾಸ ಶೇಠ್, ವಿ.ವಿ.ಕಪ್ಪತ್ತ ನವರ,ಬಿ.ಎಚ್. ಚಂದ್ರಶೇಖರ, ಕೆ.ಎಸ್.ಶ್ರೀರಾಮ, ಲಕ್ಕವಳ್ಳಿ ಉಮಾಶಂಕರ, ಅಂದಾನಯ್ಯ ಕುರ್ತಕೋಟಿಮಠ, ದಾವಲ್ ಮುಳಗುಂದ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಅನೇಕರು ಜೆಡಿಎಸ್‌ಗೆ ಅಧಿಕೃತವಾಗಿ ಸೇರ್ಪಡೆ ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.