ಸೋಮವಾರ, ಮಾರ್ಚ್ 8, 2021
25 °C

ಕುಸ್ತಿಪಟು ನರಸಿಂಗ್ ಯಾದವ್‍ಗೆ ನಾಲ್ಕು ವರ್ಷ ನಿಷೇಧ; ರಿಯೊ ಕನಸು ಭಗ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಸ್ತಿಪಟು ನರಸಿಂಗ್ ಯಾದವ್‍ಗೆ ನಾಲ್ಕು ವರ್ಷ ನಿಷೇಧ; ರಿಯೊ ಕನಸು ಭಗ್ನ

ರಿಯೊ ಡಿ ಜನೈರೋ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಡೆಸಿದ ಪರೀಕ್ಷೆಯಲ್ಲಿ ಉದ್ದೀಪನಾ ಮದ್ದು ಸೇವಿಸಿದ್ದಾರೆ ಎಂಬ ಆರೋಪದ ಮೂಲಕ ವಿವಾದಕ್ಕೀಡಾಗಿದ್ದ  ಭಾರತದ ಕುಸ್ತಿ ಪಟು ನರಸಿಂಗ್ ಯಾದವ್ ಅವರಿಗೆ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

2016ರ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಮುನ್ನವೇ ವಿವಾದಗಳ ಮೂಲಕ ಸುದ್ದಿಯಾಗಿದ್ದ ನರಸಿಂಗ್ ಯಾದವ್ ಈ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಾತ್ರವಲ್ಲ  ಮುಂಬರುವ 4 ವರ್ಷಗಳ ಕಾಲ ಯಾವುದೇ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸುವಂತಿಲ್ಲ. ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ ಸಂಸ್ಥೆ (ಸಿಎಎಸ್)  ನರಸಿಂಗ್ ಯಾದವ್ ಅವರ ವಿಚಾರಣೆ ನಡೆಸಿ ಅವರಿಗೆ ನಾಲ್ಕು ವರ್ಷಗಳ ನಿಷೇಧ ಹೇರಿದೆ.ಈ ಹಿಂದೆ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ನರಸಿಂಗ್ ಯಾದವ್ ಗೆ ಕ್ಲೀನ್ ಚಿಟ್ ನೀಡಿದ್ದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ ನಿರ್ಣಯವನ್ನು ಅಂತಾರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ಅಂತಾರಾಷ್ಟ್ರೀಯ ಕ್ರೀಡಾ ವ್ಯಾಜ್ಯಗಳ ನ್ಯಾಯಾಲಯ ಸಿಎಎಸ್ ನಲ್ಲಿ ಪ್ರಶ್ನಿಸಿತ್ತು. ಈ ಬಗ್ಗೆ  ಸಲ್ಲಿಸಿದ  ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ನರಸಿಂಗ್ ಯಾದವ್ ಅವರ ಮೇಲೆ ನಿಷೇಧ ಹೇರಿದೆ.ಸತತ ನಾಲ್ಕು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಉದ್ದೀಪನ ಮದ್ದು ಪತ್ತೆ ಅಂಶಕ್ಕೆ ಸಂಬಂಧಪಟ್ಟಂತೆ  ನರಸಿಂಗ್ ಯಾದವ್ ನೀಡಿದ ಸಮರ್ಥನೆಗಳನ್ನು ಸಿಎಎಸ್ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.ಏನಿದು ಪ್ರಕರಣ?

2016 ಜೂನ್ 25ರಂದು ನಾಡಾ ನಡೆಸಿದ ಉದ್ದೀಪನ ಮದ್ದು ತಡೆಯಲ್ಲಿ ನರಸಿಂಗ್ ಯಾದವ್ ರಕ್ತದ ಮಾದರಿಯಲ್ಲಿ ನಿಷೇಧಿತ ಉದ್ದೀಪನ ಮದ್ದಿನ ಅಂಶ ಪತ್ತೆಯಾಗಿತ್ತು . ಈ ಕಾರಣದಿಂದ ರಿಯೋ ಒಲಿಂಪಿಕ್ಸ್ ನಿಂದ ಅವರನ್ನು ಕೈ ಬಿಡಲಾಗಿತ್ತು. ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದ ನರಸಿಂಗ್ ಯಾದವ್ ಪರವಾಗಿ ನ್ಯಾಯಾಲಯ ತೀರ್ಪು ನೀಡಿದ್ದು ಮಾತ್ರವಲ್ಲದೆ ನಾಡಾ ಕೂಡ ನರಸಿಂಗ್ ಯಾದವ್ ಗೆ ಕ್ಲೀನ್ ಚಿಟ್ ನೀಡಿತ್ತು,

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.