ಶನಿವಾರ, ಮೇ 8, 2021
26 °C

ಕುಸ್ತಿ: ಭಾರತಕ್ಕೆ ಮೊದಲ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಮಂಗಲ್ ಕಡ್ಯನ್, ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ.ಕುಸ್ತಿಯ ಇತರ ವಿಭಾಗಗಳಲ್ಲಿ ಭಾರತ, ಶನಿವಾರ ಎರಡು ಬೆಳ್ಳಿ ಹಾಗೂ ಒಂದು ಕಂಚು ಗೆದ್ದುಕೊಂಡಿದೆ.50 ಕೆ.ಜಿ  ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಮಂಗಲ್ ಇರಾನಿನ ಮುಸ್ತಫಾ ಯಗೌಬಿಜೆಲೆಟಿ ವಿರುದ್ಧ 8-0 ರಲ್ಲಿ ಗೆದ್ದು ಬಂಗಾರ ಬಾಚಿದರು. 120 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸುರ್ಜಿತ್ 10-2ರಲ್ಲಿ ಚೀನಾದ ಕ್ಸಿನ್‌ಮೆನ್ ಡು ಅವರನ್ನು ಮಣಿಸಿ, ಕಂಚು ಪಡೆದರು.ಮಹಿಳಾ ವಿಭಾಗದ 48 ಕೆ.ಜಿ ಹಾಗೂ 72 ಕೆ.ಜಿ ವಿಭಾಗದ ಫೈನಲ್‌ಗಳಲ್ಲಿ ಕ್ರಮವಾಗಿ ಮಮತಾ ರಾಣಿ ಹಾಗೂ ಮನಿಷಾ ಮಹಾದೇವ್ ದಿವೆಕರ್ ಸೋತು ಬೆಳ್ಳಿಗೆ ತೃಪ್ತಿ ಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.