ಕೂಲ್ ಪೂರ್ಣ

ಶಿಲ್ಪಾ ಗಣೇಶ್ ನಿರ್ಮಾಣದ, ನಟ ಗಣೇಶ್ ಚೊಚ್ಚಲ ನಿರ್ದೇಶನದ ‘ಕೂಲ್’ ಚಿತ್ರೀಕರಣ ಒಟ್ಟು 72 ದಿನಗಳಲ್ಲಿ ಮುಗಿದಿದೆ.ಸ್ಯಾಂಡಲ್‌ವುಡ್ ಸ್ಟುಡಿಯೋ, ಮೈಸೂರು ಲ್ಯಾಂಪ್ಸ್, ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್‌ಗಳಲ್ಲಿ ವಿದೇಶಿ ನರ್ತಕಿಯರೊಂದಿಗೆ ಗಣೇಶ್ ಚಿತ್ರದ ಕೊನೆಯ ಹಾಡಿಗೆ ನರ್ತಿಸಿದರು. ದುಬೈ, ಈಜಿಪ್ಟ್, ಜೋರ್ಡಾನ್ ಮತ್ತು ಮಧ್ಯ ಪ್ರಾಚ್ಯದ ಮರುಭೂಮಿಯಲ್ಲಿ ಕೆಲ ಹಾಡುಗಳ ಚಿತ್ರೀಕರಣ ನಡೆದಿದೆ. ರಾಮು, ಶಂಕರ್ ಹಾಗೂ ವಿಷ್ಣುದೇವ್ ಈ ಹಾಡುಗಳಿಗೆ ನೃತ್ಯ
ನಿರ್ದೇಶನ ಮಾಡಿದ್ದಾರೆ. ಸಂಕಲನ, ಮಾತುಗಳ ಜೋಡಣೆ, ಹಿನ್ನಲೆ ಸಂಗೀತದ ಕೆಲಸ ನಡೆದಿದೆ. ವಿಶ್ವಕಪ್
ಕ್ರಿಕೆಟ್ ಮುಗಿಯುವ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ. ರತ್ನವೇಲು ಛಾಯಾಗ್ರಹಣ, ‘ಘಜನಿ’ ಖ್ಯಾತಿಯ ಆಂಟನಿಯವರ ಸಂಕಲನವಿದೆ. ರಮೇಶ್ ದೇಸಾಯಿ ಕಲಾ ನಿರ್ದೇಶನ, ವಿ.ಹರಿಕೃಷ್ಣ ಸಂಗೀತ, ರವಿಶಂಕರ್ ನಿರ್ಮಾಣ-ನಿರ್ವಹಣೆ ಇದೆ. ಗಣೇಶ್, ಸನಾ ಖಾನ್, ಸಾಧು ಕೋಕಿಲಾ, ದೀಪಾ ಶೆಟ್ಟಿ, ಶರಣ್, ಸಂಗೀತಾ ಶೆಟ್ಟಿ, ದತ್ತಣ್ಣ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.