ಗೋಣಿಕೊಪ್ಪಲು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿರಾಜಪೇಟೆ ತಾಲ್ಲೂಕು ಹಾಗೂ ಕೃಷಿ ಉತ್ಸವ ವ್ಯವಸ್ಥಾಪನ ಸಮಿತಿ ಬಾಳೆಲೆ ವಲಯ ಇವರ ವತಿಯಿಂದ ಗೋಣಿಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ನಡೆದ `ಕೃಷಿ ಉತ್ಸವ- 2012~ಅಚ್ಚುಕಟ್ಟಾಗಿ ಜರುಗಿತು.

ನಿಗದಿತ ಸಮಯಕ್ಕೆ ಸರಿಯಾಗಿ ಆರಂಭಗೊಂಡ ಉತ್ಸವದಲ್ಲಿ ಶ್ರೀನಿವಾಸ್ ಮತ್ತು ತಂಡದವರು ರೈತ ಗೀತೆಯನ್ನು ಹಾಡಿದರು. ಸರಳ ಹಾಗೂ ಸುಂದರವಾಗಿ ನಿರ್ಮಿಸಿದ್ದ ವೇದಿಕೆಯಲ್ಲಿ ಆಸೀನರಾಗಿದ್ದ ಅತಿಥಿಗಳ ಭಾಷಣವೂ ಕೂಡ ಹಿತಮಿತವಾಗಿತ್ತು.

6 ಮಂದಿ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ವಿಚಾರಗೋಷ್ಠಿ ಗಹನತೆಯೊಂದಿಗೆ ಸಮಯದ ಮಹತ್ವ ಸಾರಿತು. ಆಯಾ ಕ್ಷೇತ್ರದಲ್ಲಿ ನುರಿತ ಅನುಭವಿ ತಜ್ಞರು ಮಂಡಿಸಿದ ವಿಷಯಗಳು ಮನಮುಟ್ಟಿದವು. ವಿಚಾರಗೋಷ್ಠಿಗೆ ಸ್ವಾಗತ, ವಂದನಾರ್ಪಣೆಗೆ ಹೆಚ್ಚಿನ ಸಮಯ ನೀಡದೆ ವಿಷಯ ಮಂಡನೆಗೆ ಹೆಚ್ಚು ಒತ್ತು ನೀಡಿದುದು ಎಲ್ಲರ ಮೆಚ್ಚುಗೆಗೆ ಪ್ರಾತವಾಯಿತು.

ಬಾಳೆಲೆ ವಲಯದಿಂದ ವಿವಿಧ ಸ್ವಸಹಾಯ ಗುಂಪುಗಳ ಸಾವಿರಾರು ಮಹಿಳೆಯರು ಆಗಮಿಸಿದ್ದರು. ಬಿಸಿಲಿನ ಬೇಗೆಯಲ್ಲಿಯೂ ಸಭಾಂಗಣ ಕಿಕ್ಕಿರಿದಿತ್ತು. ಉತ್ಸವದಲ್ಲಿ ಅಲ್ಲಲ್ಲೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಹುಲ್ಲಿನ ಕೊಡೆ ನಿರ್ಮಿಸಿ ಅದರ ಕೆಳಗೆ ಶುದ್ಧವಾದ ನೀರುಟ್ಟಿಕೊಂಡು ಕೆಲವು ಸ್ವಯಂ ಸೇವಕರು ಕಾಯುತ್ತಿದ್ದರು.

ಎಲ್ಲರಿಗೂ ಶುಚಿ ಹಾಗೂ ರುಚಿಯಾದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ಉತ್ಸವದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಸಭಿಕರನ್ನು ರಂಜಿಸಿತು. ಕಿರುಗೂರಿನ ಕುಟ್ಟಿಚಾತ ಮಹಿಳಾ ಸಂಘದ ಸದಸ್ಯರ ಕೊಡವ ಕೋಲಾಟ ಅತ್ಯುತ್ತಮವಾಗಿತ್ತು. ಕಣ್ಣಂಗಾಲ ಸ್ವಸಹಾಯ ಸಂಘದ ಮಹಿಳೆಯರ ಜಾನಪದ ಹಾಡು ಮೆಚ್ಚುಗೆ ಪಡೆಯಿತು. ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರು ಹಿಂಜರಿಕೆ ಇಲ್ಲದೆ ತಮ್ಮ ಪ್ರತಿಭೆ ಮೆರೆದರು.

ಗಮನಸೆಳೆದ ವಸ್ತು ಪ್ರದರ್ಶನ
ಕೃಷಿಗೆ ಸಂಬಂಧಿಸಿದ ಹೆಚ್ಚಿನ ಸಲಕರಣೆಗಳು ಉತ್ಸವದಲ್ಲಿ ಕಂಡು ಬಂದವು. ಭತ್ತದ ಕೃಷಿ, ಕಾಫಿ ಮುಂತಾದವುಗಳ ಯಂತ್ರಗಳು ವಸ್ತು ಪ್ರದರ್ಶನದಲ್ಲಿದ್ದವು. ಭತ್ತ ಕಟಾವು ಯಂತ್ರ, ಹುಲ್ಲು ಕಟ್ಟುವ ಯಂತ್ರ, ಔಷಧಿ ಸಿಂಪರಣೆ, ಕಳೆ ತೆಗೆಯುವ ಯಂತ್ರ ಮೊದಲಾದವು ಕೂಡ ಕೃಷಿಕರ ಗಮನ ಸೆಳೆದವು.

ಇವುಗಳ ಜತೆಗೆ ಸೋಲಾರ್ ಯಂತ್ರಗಳು, ಲೈಟ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ತಾಳೆ ಬೆಳೆ ಕೃಷಿ, ಮೆಣಸು, ಏಲಕ್ಕಿ ಮೊದಲಾದ ಕಸಿ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಬಾಳೆಲೆಯ ಕೃಷಿಕರೊಬ್ಬರು ಬೆಳೆದಿದ್ದ ತಾಳೆ ಹಣ್ಣೊಂದು 45 ಕಿಲೋ ತೂಕ ವಿದ್ದು ಮಳಿಗೆಯಲ್ಲಿ ಎಲ್ಲರ ಗಮನ ಸೆಳೆಯಿತು.

ಮಾಯಮುಡಿಯ ನಾರಾಯಣ ಸಾಕಿದ್ದ ಮೂರು ಟರ್ಕಿಕೋಳಿಗಳು ತಮ್ಮ ಆಕಾರದಿಂದ ಮನಸೆಳೆದವು. 10 ಕಿಲೋ ತೂಗುವ ಒಂದು ಕೋಳಿಯ ಬೆಲೆ ರೂ. 4 ಸಾವಿರ ಎಂದು ಕೋಳಿ ಮಾಲೀಕರು ತಿಳಿಸಿ ಅಚ್ಚರಿ ಮೂಡಿಸಿದರು. ಇವುಗಳ ಜತೆಗೆ ಅತ್ಯಾಧುನಿಕ ಮಾದರಿ ಕೃಷಿ ಯಂತ್ರೋಪಕರಣಗಳು ಉತ್ಸವದಲ್ಲಿ ಮೇಳೈಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.