ಮುಂಬೈ(ಪಿಟಿಐ): ದೇಶದ ಒಟ್ಟು 3.47 ಕೋಟಿ ರೈತರು ಇತ್ತೀಚಿನ ಕೃಷಿ ಸಾಲ ಮನ್ನಾ ಯೋಜನೆಯ ನೆರವು ಪಡೆದುಕೊಂಡಿದ್ದಾರೆ. ಆದರೆ, ಇವರಲ್ಲಿ ನೂರಾರು `ನಕಲಿ' ಫಲಾನುಭವಿಗಳೂ ಸೇರಿದ್ದಾರೆ ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ರಾಜೀವ್ ಟಕ್ರು ಸೋಮವಾರ ಇಲ್ಲಿ ವರದಿಗಾರರಿಗೆ ತಿಳಿಸಿದರು.

ಅನೇಕರು ಸಾಲ ಮನ್ನಾ ಯೋಜನೆಯನ್ನು ಅನುಕೂಲವನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಬ್ಯಾಂಕುಗಳು ಇಂತಹ ಕೆಲವು ಪ್ರಕರಣಗಳನ್ನು ಪತ್ತೆ ಹಚ್ಚಿವೆ. ಆದರೆ, ಈ ನಕಲಿ ಫಲಾನುಭವಿಗಳ ಸಂಖ್ಯೆ ಕೆಲವು ನೂರರಷ್ಟು ಮಾತ್ರವೇ ಇದೆ ಎಂದರು.

`ನಕಲಿ' ಫಲಾನುಭವಿಗಳಿಂದ ಹಣ ವಾಪಸ್ ಪಡೆಯಲು ಬ್ಯಾಂಕುಗಳು ಈಗಾಗಲೇ ಕ್ರಮ ಕೈಗೊಂಡಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2008-09ನೇ ಸಾಲಿನಲ್ಲಿ ಪ್ರಕಟಿಸಿದ ರೂ56,000 ಕೋಟಿ ಸಾಲ ಮನ್ನಾ ಪ್ಯಾಕೇಜ್ನಲ್ಲಿ ಅಕ್ರಮ ನಡೆದಿದೆ ಎಂದು `ಸಿಎಜಿ' ವರದಿ ಹೇಳಿದೆ. ಈ ವರದಿ ಆಧರಿಸಿ ಪ್ರತಿ ಫಲಾನುಭವಿ ಕುರಿತೂ ಪ್ರತ್ಯೇಕ ತನಿಖೆ ನಡೆಸುವಂತೆ ಬ್ಯಾಂಕುಗಳಿಗೆ `ಆರ್ಬಿಐ' ಸೂಚಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳು ಜೂನ್ 30ರ ಒಳಗಾಗಿ ಹಣಕಾಸು ಸಚಿವಾಲಯಕ್ಕೆ ಲೆಕ್ಕಪತ್ರ ವರದಿ ಸಲ್ಲಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.