ಮಂಗಳವಾರ, ಮೇ 18, 2021
22 °C

ಕೃಷ್ಣಮೂರ್ತಿ ಪುರಾಣಿಕ ಜನ್ಮಶತಮಾನೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದ ಸಾಹಿತ್ಯ ಕ್ಷೇತ್ರ ಬಡ ವಾಗುತ್ತಿದೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ವಿಷಾದಿ ಸಿದರು.ನಗರಸಭೆ ಸಮುದಾಯ ಭವನದಲ್ಲಿ ಕೃಷ್ಣಮೂರ್ತಿ ಪುರಾಣಿಕ ಜನ್ಮಶತ ಮಾನೋತ್ಸವ ರಾಜ್ಯ ಸಮಿತಿ ಹಾಗೂ ಇಲ್ಲಿಯ ಸತೀಶ ಸಾಹಿತ್ಯ ಸೌರಭ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾದಂಬರಿಶ್ರೀ ಕೃಷ್ಣಮೂರ್ತಿ ಪುರಾಣಿಕ ಜನ್ಮಶತ ಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಶಿಸಿಹೋಗುತ್ತಿರುವ ಸಾಹಿತ್ಯಿಕ ಚಟುವಟಿಕೆಗಳಿಗೆ ಪುನಶ್ಚೇತನ ನೀಡ ಬೇಕಾಗಿದೆ. ಪುರಾಣಿಕರ ಸಾಹಿತ್ಯವನ್ನು ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳ ಆಯೋಜನೆ ಅಗತ್ಯ ವಾಗಿದೆ ಎಂದರು. ಕಾದಂಬರಿಕಾರ ಪುರಾಣಿಕರ ಸಾಹಿತ್ಯ ಮಾದರಿ ಯಾಗಿದೆ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಯುವ ಪೀಳಿಗೆ ಉಳಿಸಿ ಬೆಳೆಸುವಂತೆ ಮನವಿ ಮಾಡಿದರು.ನಗರದಲ್ಲಿ ಬೃಹದಾಕಾರದ ಗ್ರಂಥಾ ಲಯ ಸ್ಥಾಪನೆ ಮಾಡುವ ಉದ್ದೇಶ ವಿದೆ. ಗ್ರಂಥಾಲಯಕ್ಕೆ  ಅಗತ್ಯ ಸ್ಥಳಾವ ಕಾಶವನ್ನು ನಗರಸಭೆ ಕಲ್ಪಿಸಿಕೊಡಲಿದೆ ಎಂಬ ಭರವಸೆ ನೀಡಿದರು.ರಾಜ್ಯದ ಗ್ರಂಥಾಲಯಗಳಲ್ಲಿ ಪುರಾಣಿಕ ಸೇರಿದಂತೆ ನಾಡಿನ ಖ್ಯಾತ ಸಾಹಿತಿಗಳ ಕೃತಿಗಳನ್ನು ಓದುಗರಿಗೆ ಮೀಸಲಿಡುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾಹಿತಿ ಪ್ರೊ.ರಾಘವೇಂದ್ರ ಪಾಟೀಲ ಮಾತನಾಡಿ, ಸಾಹಿತ್ಯ ಪ್ರಾಶಸ್ತ್ಯ ಇಲ್ಲದ ಸಂದರ್ಭದಲ್ಲಿ ಗೋಕಾವಿ ನಾಡಿನಲ್ಲಿ ಸಾಹಿತ್ಯವನ್ನು ಪೋಷಿಸಿದ ಕೀರ್ತಿ ಪುರಾಣಿಕರಿಗೆ ಸಲ್ಲುತ್ತದೆ ಎಂದರು.ಪುರಾಣಿಕ ಅವರ ವ್ಯಕ್ತಿತ್ವ ಉತ್ತಮ ಸಮಾಜದ ಬೆಳವಣಿಗೆಗೆ ಸಹಕಾರಿ ಯಾಗಿತ್ತು. ಅವರ ಸಾಹಿತ್ಯದಲ್ಲಿ ವೈಚಾರಿಕತೆ ಮನೋಭಾವನೆ ಅಡಕ ವಾಗಿದ್ದು, ಅವರ ಅನುಸರಿಸುತ್ತಿದ್ದ ಮೌಲ್ಯಾಧಾರಿತ ಜೀವನ ಇಂದಿಗೂ ಪ್ರಸ್ತುತ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪುರಾಣಿಕರ ಕುರಿತು ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಪ್ರದರ್ಶನವನ್ನು ರಾಜ್ಯ ಗ್ರಂಥಾಲಯ ನಿರ್ದೇಶಕ ಕೆ.ಜಿ.ವೆಂಕಟೇಶ ಉದ್ಘಾಟಿ ಸಿದರು. ಆನಂದ ಪುರಾಣಿಕ, ಚಿಂತಕ ಹರ್ಷ ಡಂಬಳ, ಡಾ.ಎಚ್. ಬಿ. ಕೋಲ್ಕಾರ, ಎಸ್.ಬಿ.ಓಂಕಾರ, ಜಿ.ಜಿ. ಹೊಸಮನಿ ಉಪಸ್ಥಿತರಿದ್ದರು.ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಸ್ವಾಗತಿಸಿದರು. ಎಲ್.ಎಸ್.ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಜಿ.ವಿ.ಮಳಗಿ ನಿರೂಪಿಸಿದರು. ಮಹಾಲಿಂಗ ಮಂಗಿ ವಂದಿಸಿದರು.ಉಪನ್ಯಾಸ: ಚಿಕ್ಕೋಡಿಯ ಆರ್ಯಿಕಾ ಮಾತಾಜಿಯವರ ಚಾತುರ್ಮಾಸದ ಪ್ರಯುಕ್ತ  ಇಲ್ಲಿನ 1008 ಆದಿನಾಥ ದಿಗಂಬರ ಜೈನ ಬಸದಿಯಲ್ಲಿ  ನಡೆದಿರುವ ಉಪನ್ಯಾಸದ ಸಮಾರೋಪ ಇದೇ 13ರಂದು ನಡೆಯಲಿದೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.