ಮಂಗಳವಾರ, ಮಾರ್ಚ್ 2, 2021
31 °C

ಕೆಆರ್‌ಎಸ್: ನಕಲಿ ಟಿಕೆಟ್ ಜಾಲ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಆರ್‌ಎಸ್: ನಕಲಿ ಟಿಕೆಟ್ ಜಾಲ ಪತ್ತೆ

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್‌ನ ಬೃಂದಾವನಕ್ಕೆ ಬರುವ ಹೊರ ರಾಜ್ಯಗಳ ಪ್ರವಾಸಿಗರಿಗೆ ನಕಲಿ ಟಿಕೆಟ್ ನೀಡಿ ವಂಚಿ ಸುತ್ತಿದ್ದ ಪ್ರಕರಣವನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬುಧವಾರ ರಾತ್ರಿ ಪತ್ತೆ ಹಚ್ಚಿದ್ದಾರೆ.ರೂ.15 ಮುಖ ಬೆಲೆಯ 44 ಎಲೆಕ್ಟ್ರಾನಿಕ್ ಟಿಕೆಟ್‌ಗಳನ್ನು ತಮಿಳು ನಾಡು, ಪಂಜಾಬ್ ಇತರ ರಾಜ್ಯಗಳ ಪ್ರವಾಸಿಗರಿಂದ ವಶಪಡಿಸಿಕೊಳ್ಳ ಲಾಗಿದೆ. ಖಾಸಗಿ ಬಸ್ ಏಜೆಂಟ್ ರಂಗನಾಥಕುಮಾರ್ ಎಂಬಾತ ಪ್ರವಾಸಿಗರಿಗೆ ಈ ಟಿಕೆಟ್ ಹಂಚಿರು ವುದು ಗೊತ್ತಾಗಿದೆ. ಕೆಆರ್‌ಎಸ್‌ನ ದಿನಗೂಲಿ ನೌಕರ ಅಶೋಕ್‌ಕುಮಾರ್ ಎಂಬಾತ ಟಿಕೆಟ್‌ಗಳನ್ನು ಕಳೆದ ಒಂದು ವಾರದಿಂದ ನನಗೆ ಕೊಡುತ್ತಿದ್ದಾನೆ ಎಂದು ರಂಗನಾಥಕುಮಾರ್ ಪೊಲೀಸರ ಎದುರು ಹೇಳಿದ್ದಾನೆ. ರಂಗನಾಥಕುಮಾರ್ ಸೇರಿ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.ಕಾವೇರಿ ನೀರಾವರಿ ನಿಗಮದ ಸುಪರ್ದಿಯಲ್ಲಿರುವ ಬೃಂದಾವನ ಪ್ರವೇಶದ ಟಿಕೆಟ್‌ಗಳನ್ನು ನಿಗಮದ ಸಿಬ್ಬಂದಿ ನೀಡುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ಟಿಕೆಟ್ ಕೊಡುವ ಈ-1 ಕೋಡ್‌ನ ಯಂತ್ರ ಕೆಟ್ಟಿದೆ.

 

ಆದರೂ ಇದೇ ಯಂತ್ರದ ಕೋಡ್‌ನ ಟಿಕೆಟ್‌ಗಳನ್ನು ಬುಧವಾರ ರಾತ್ರಿ ವರೆಗೂ ಪ್ರವಾಸಿಗರಿಗೆ ವಿತರಿಸಲಾಗಿದೆ. ಮೈಸೂರಿನಿಂದ ಕೆಆರ್‌ಎಸ್‌ಗೆ ಬರುವ ಮಾರ್ಗದಲ್ಲಿ, ಹೊರ ರಾಜ್ಯದ ಪ್ರವಾಸಿಗರಿಗೆ ಬಸ್ ಏಜೆಂಟ್ ಮೂಲಕ ಟಿಕೆಟ್‌ಗಳನ್ನು ಕೊಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ನಿಗಮದ ಸಿಬ್ಬಂದಿಯ ಸಹಕಾರದಲ್ಲಿ ಬಹಳ ದಿನಗಳಿಂದಲೂ ಈ ದಂಧೆ ನಡೆಯು ತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ನಿಗಮದ ಎಇಇ ನಟೇಶ್ ಮತ್ತು ಸಿಬ್ಬಂದಿ ನಕಲಿ ಟಿಕೆಟ್ ಜಾಲ ಪತ್ತೆ ಹಚ್ಚಿದ್ದಾರೆ. ಪ್ರವಾಸಿಗರು ನೀಡಿದ ಮಾಹಿತಿ ಆಧರಿಸಿ ಪ್ರಕರಣ ಕುರಿತು ಕೆಆರ್‌ಎಸ್ ಪೊಲೀಸರಿಗೆ ದೂರು ನೀಡಿದ್ದಾರೆ. ನಿಗಮದ ನೌಕರ ಶಿವಣ್ಣ ಎಂಬವರ ಮಗ, ದಿನಗೂಲಿ ನೌಕರ ಅಶೋಕ್‌ಕುಮಾರ್ ಎಂಬಾತ ಈ ದಂಧೆಯ ಪ್ರಮುಖ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಜಾಲ ಬಿಸಲಾಗಿದೆ ಎಂದು ಪಿಎಸ್‌ಐ ಪ್ರೀತಂ ಶ್ರೇಯಕರ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.